ಶ್ರೀಮತಿ ಎಸ್ ಅಂಜು ಅವರಿಗೆ ಅಂತರಾಷ್ಟ್ರೀಯ ಅರ್ಯಭಟ ಪ್ರಶಸ್ತಿ.

ಹೊಸಪೇಟೆ : ಶ್ರೀಮತಿ ಎಸ್ ಅಂಜು ಅವರಿಗೆ ಅಂತರಾಷ್ಟ್ರೀಯ ಅರ್ಯಭಟ ಪ್ರಶಸ್ತಿ ಪ್ರಧಾನ.
ಭಾರತದ ಪ್ರಥಮ ಕೃತಕ ದೇಶೀಯ ಉಪಗ್ರಹ, ಭೂಮಿಯ ಕಕ್ಷೆಗೆ ಉಡಾವಣೆಯಾಗಿ 50 ವರ್ಷಗಳು ಸಂದಿವೆ. ಇದರ ನೆನಪಿಗಾಗಿ ಅಂದೇ ಸ್ಥಾಪಿತವಾದದ್ದು ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯಿಂದ
ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ
ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರಿಗೆ ರಾಷ್ಟೀಯ ಪ್ರಶಸ್ತಿ ಪ್ರಧಾನ ಸಮಾರಂಭ ಗುರುವಾರ ಸಂಜೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಸುಮಾರು ಇಪ್ಪತೈದು ವರ್ಷಗಳಿಂದ ಶ್ರೀಮತಿ ಎಸ್ ಅಂಜು ಅವರು ಹೊಸಪೇಟೆಯಲ್ಲಿ ಶ್ರೀ ಅಂಜಲಿ ಭರತನಾಟ್ಯ ಕಲಾ ಕೇಂದ್ರ ಸ್ಥಾಪಿಸಿ.ಹನೇಕ ಬಡ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಭರತ ನಾಟ್ಯ ಶಿಕ್ಷಣ ನೀಡುವ ನಿಟ್ಟಿನಲ್ಲಿ ನಿರಂತರ ಸೇವೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಕಾರ್ಯಕ್ರಮಗಳ ಮೂಲಕ ಹತ್ತರು ಪ್ರಶಸ್ತಿಗಳು ಸಂದಿವೆ.ಇವರ ಅನುಪಮ ಸೇವೆಯನ್ನು ಗುರುತಿಸಿ ವಿಜಯನಗರ ಜಿಲ್ಲೆಗೆ ಪ್ರ ಪ್ರಥಮವಾಗಿ ಎಸ್ ಅಂಜು ಅವರಿಗೆ ಆರ್ಯಭಟ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ
ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷ
ಮಹೇಶ್ ಜೋಷಿ,
ಪದ್ಮಶ್ರೀ ಭಾರತಿ ವಿಷ್ಣು ವರ್ಧನ್, ಡಾ. ಜಯಮಾಲಾ, ರಾಜೇಂದ್ರ ಸಿಂಗ್ ಬಾಬು, ಕೆ.ಕಲ್ಯಾಣ್ ,ಇತರರು ವೇದಿಕೆಯಲ್ಲಿದ್ದರು.