ಇತ್ತೀಚಿನ ಸುದ್ದಿ
ಟಿ.ವಿ.9 ಕನ್ನಡ ಬಳ್ಳಾರಿ ಕ್ಯಾಮರಮೆನ್ ಸಂತೋಷ್ ನಿಧನ

ಕಳೆದ ಹಲವು ವರ್ಷಗಳಿಂದ ಬಳ್ಳಾರಿಯಲ್ಲಿ ಟಿ.ವಿ.9 ಕನ್ನಡ ಚಾನಲ್ ನ ವಿಡಿಯೋ ಜರ್ನಲಿಸ್ಟ್(ಕೆಮೆರಮ್ಯಾನ್) ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂತೋಷ್ ಚಿನಗುಂಡಿ(30) ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಆರೋಗ್ಯದಲ್ಲಿ ಸಮಸ್ಯೆಯಾಗಿ ಪರೀಕ್ಷೆಗೆ ಒಳಪಡಿಸಿದಾಗ ಮೆದುಳಿನಲ್ಲಿ ನೀರು ತುಂಬಿ ರಕ್ತಸ್ರಾವವಾಗಿದೆಂದು ಪತ್ತೆ ಹಚ್ಚಲಾಗಿತ್ತು. ತಕ್ಷಣ ಅವರನ್ನು ಬಿಜಾಪುರದ ಬಿ.ಎಲ್.ಡಿ.ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಆದರೆ ಅವರು ಕೋಮಾ ಸ್ಥಿತಿಯಲ್ಲಿದ್ದರು. ಮೆದುಳು ನಿಷ್ಕ್ರಿಯಗೊಂಡಿದ್ದರಿ ವೆಂಟಲೇಟರ್ ನಲ್ಲಿದ್ದರು. ಇಂದು ಸಾವನ್ನಪ್ಪಿದ್ದಾರೆ.
ತಂದೆ ತಾಯಿ, ಇಬ್ಬರು ಸಹೋದರರು, ಪತ್ನಿ, 11 ತಿಂಗಳ ಮಗನನ್ನು ಅಗಲಿದ್ದಾರೆ.
ಟಿ.ವಿ.9 ಕನ್ನಡ ಬಳ್ಳಾರಿ ಕೆಮೆರಮ್ಯಾನ್ ಸಂತೋಷ್ ನಿಧನ
ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ಸಂತೋಷ್ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ.