ಇತ್ತೀಚಿನ ಸುದ್ದಿ
ಅಯುಷ್ಮಾನ್ ಅರೋಗ್ಯ ಕೇಂದ್ರದ ಆವರಣದಲ್ಲಿ ಸ್ವಚ್ಚತಾ ಕಾರ್ಯಕ್ರಮ.

ಮಸ್ಕಿ : ಅಭಿನಂದನ್ ಸಂಸ್ಥೆಯು ಸಂಡೆ ಫಾರ್ ಸೋಷಿಯಲ್ ವರ್ಕ್ ಅಭಿಯಾನದ ಭಾಗವಾಗಿ
202ನೇ ವಾರದ ಸೇವಾ ಕಾರ್ಯವನ್ನು ಪಟ್ಟಣದ ಗಾಂಧಿ ನಗರದ ಅಯುಷ್ಮಾನ್ ಅರೋಗ್ಯ ಕೇಂದ್ರದ ಆವರಣದಲ್ಲಿ ಆಯೋಜಿಸಲಾಯಿತು.
ಅಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ
ಬೆಳೆದ ಕಸಕಡ್ಡಿಗಳನ್ನು ಸ್ವಚ್ಛಗೊಳಿಸಿ ಅರೋಗ್ಯ ಕೇಂದ್ರದ ಗೋಡೆಗೆ ಬಣ್ಣವನ್ನು ಹಚ್ಚಿ ಸುಂದರಗೊಳಿಸಲಾಯಿತು.

ಈ ವೇಳೆ, ಸಮುದಾಯ ಆರೋಗ್ಯ ಅಧಿಕಾರಿಗಳಾದ ನಾರಾಯಣಮ್ಮ,ಬಸಮ್ಮ, ಜಯಶ್ರೀ, ಮಂಜುಳಾ, ಅಭಿನಂದನ್ ಸಂಸ್ಥೆಯ ರಾಮಣ್ಣ ಹಂಪರಗುಂದಿ, ಜಾಫರ್ ಮಿಯಾ, ಮಲ್ಲಿಕಾರ್ಜುನ ಬಡಿಗೇರ್, ರವಿಚಂದ್ರನ್, ಕಿಶೋರ್, ವೆಂಕೋಬ ಇದ್ದರೂ.