ಮತ್ತೆ ಸದ್ದು ಮಾಡಲು ಸಜ್ಜಾದ ನೀಲಿ ಕಂಗಳ ಚೆಲುವೆ!

ಮತ್ತೆ ಸದ್ದು ಮಾಡಲು ಸಜ್ಜಾದ ನೀಲಿ ಕಂಗಳ ಚೆಲುವೆ!
ಮಹಾ ಕುಂಭಮೇಳದಲ್ಲಿ ಮಣಿಗಳ ಸರವನ್ನು ಮಾರಿಕೊಂಡು ತಮ್ಮ ಜೀವನವನ್ನು ನಡೆಸುತ್ತಿದ್ದ ಮೊನಾಲಿಸಾ ಅವರು ಇದ್ದಕ್ಕಿದ್ದಂಗೆ ಮಹಾ ಕುಂಭಮೇಳದಲ್ಲಿ ಒಂದೇ ಒಂದು ಫೋಟೋ ವೈರಲ್ ಆಗಿದ್ದು ಅವರ ಇಡೀ ಜೀವನವನ್ನೇ ಬದಲಾಯಿಸಿತು.
ಹೌದು, ಮಹಾಕುಂಭ ಮೇಳದಲ್ಲಿ ವೈರಲ್ ಆದ ಮೊನಾಲಿಸ ಅವರು ಇತ್ತೀಚಿಗೆ ಹಲವಾರು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರ ಜೊತೆಗೆ ಸಿನಿಮಾದಲ್ಲಿ ನಟಿಸುವ ಆಸೆ ಇದೆ ಎಂದು ಹೇಳಿಕೊಂಡಿದ್ದಾರೆ. ಅದರಂತೆ ಇದೀಗ ಮೊನಾಲಿಸಾ ಅವರಿಗೆ ಆಲ್ಬಮ್ ಸಾಂಗ್ ನಲ್ಲಿ ನಟನೆ ಮಾಡಲು ಅವಕಾಶ ದೊರಕಿದ್ದು, ನಟ ಉತ್ಕರ್ಷ್ ಸಿಂಗ್ ಜೊತೆ ಮೊನಲಿಸಾ ಹೆಜ್ಜೆ ಹಾಕಿದ್ದಾರೆ. ಇದರ ಚಿತ್ರೀಕರಣ ಕೂಡ ಪೂರ್ಣಗೊಂಡಿದೆ. ಸದ್ಯದಲ್ಲೇ ಯೂಟ್ಯೂಬ್‌ನಲ್ಲಿ ಈ ಸಾಂಗ್ ರಿಲೀಸ್ ಆಗಲಿದೆ.
ಮಹಾಕುಂಭಮೇಳದಲ್ಲಿ ಮೊನಲಿಸಾ ಮಣಿ ಸರಗಳನ್ನು ಮಾರಾಟ ಮಾಡುತ್ತಿದ್ದ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ರಾತ್ರೋ ರಾತ್ರಿ ಈ ನೀಲಿ ಕಂಗಳ ಚೆಲುವೆ ಆನ್‌ಲೈನ್‌ನಲ್ಲಿ ಸ್ಟಾರ್ ಆದರು.