ಜಗದ್ಗುರು ರೇಣುಕಾಚಾರ್ಯಜಂಗಮ ಸೇವಾ ಸಮಿತಿ ಯುವ ಘಟಕದಿಂದ ಕುಟುಂಬ ದಿನಾಚರಣೆ

ಮಸ್ಕಿ: ಪ್ರಕೃತಿ ಫೌಂಡೇಶನ್ ಹಾಗೂ
ಜಗದ್ಗುರು ರೇಣುಕಾಚಾರ್ಯ
ಜಂಗಮ ಸೇವಾ ಸಮಿತಿ (ರಿ) ಯುವ ಘಟಕ ಮಸ್ಕಿ ವತಿಯಿಂದ ಕುಟುಂಬ ದಿನಾಚರಣೆ ಪ್ರಯುಕ್ತ ಪಕ್ಷಿಗಳಿಗೆ ಮಣ್ಣಿನ ಮಡಿಕೆ ಯಲ್ಲಿ ನೀರಿನ ಅರವಟಿಗೆ ಕಾರ್ಯಕ್ರಮ ಜರುಗಿತು.
ಪಟ್ಟಣದ ಗಚ್ಚಿನಮಠದ ಆವರಣದಲ್ಲಿ ಇರುವ ಮರಗಳಿಗೆ ಮಣ್ಣಿನ ಮಡಕೆ ಕಟ್ಟಿ,ಮಡಕೆಯಲ್ಲಿ ನೀರು, ಕಾಳು, ಅಕ್ಕಿಯನ್ನು ಹಾಕುವ ಮೂಲಕ ಮೂಕ ಪ್ರಾಣಿ ಪಕ್ಷಿಗಳಿಗೆ ದಾಹ,ಹಸಿವು ನೀಗಿಸುವ ಉತ್ತಮ ಕಾರ್ಯ ಎಂದು ಜಂಗಮ ಸಮಾಜದ ಅಧ್ಯಕ್ಷ ಕರಿಬಸಯ್ಯ ಸ್ವಾಮಿ ಸಿಂಧನೂರು ಮಠ ರವರು ಹೇಳಿದರು.

ಪ್ರಕೃತಿ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷ, ಶಿವಮೂರ್ತಿ ಗದ್ಗಿಮಠ ಮಾತನಾಡಿ, ಸಾರ್ವಜನಿಕರು ಪ್ರಾಣಿ, ಪಕ್ಷಿಗಳಿಗಾಗಿ ತಮ್ಮ ತಮ್ಮ ಮನೆಯ ಮುಂದೆ ಹಾಗೂ ಮನೆಯ ಮೇಲೆ ನೀರು, ಕಾಳು ಇತರೆ ಧಾನ್ಯ ಅಥವಾ ಆಹಾರವನ್ನು ಇರಿಸಿ ಪ್ರಾಣಿ ಪಕ್ಷಿಗಳ ದಾಹ, ಹಸಿವು ನೀಗಿಸಿ ಮಾನವೀಯತೆ ಮೆರೆಯೋಣ. ಮೂಕ ಪ್ರಾಣಿ ಪಕ್ಷಿಗಳ ಸಂರಕ್ಷಣೆ ನಮ್ಮನಿಮ್ಮೆಲರ ಆದ್ಯ ಕರ್ತವ್ಯವಾಗಿದೆ. ಜಂಗಮ ಸಮಾಜದ ಯುವ ಘಟಕದ ಅಧ್ಯಕ್ಷ ರಾದ ಸಿದ್ದಯ್ಯ ಹೆಸರೂರು ಹಿರೇಮಠ ರವರ ಹಾಗೂ ಪ್ರಕೃತಿ ಫೌಂಡೇಶನ್ ಜೊತೆಯಲ್ಲಿ ಸಮಾಜ ಸೇವೆಗೆ ಸದಾಕಾಲವೂ ಶ್ರಮ ವಹಿಸುತ್ತದೆ ಎಂದುರು.

ಪ್ರಸ್ತುತ ಮನುಷ್ಯ ಆಧುನಿಕ ನಾಗರಿಕತೆ ಅಪ್ಪಿಕೊಳ್ಳುತ್ತಿದ್ದು, ಸಂಬಂಧಗಳ ಮೌಲ್ಯ ಕಡಿಮೆಯಾಗುತ್ತಿದೆ. ಈಚೆಗೆ ಅವಿಭಕ್ತ ಕುಟುಂಬಗಳು ಮರೆಯಾಗುತ್ತಿರುವುದೂ ಅರಾಜಕತೆಯ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿದೆ’ ಎಂದು ಜಂಗಮ ಸೇವಾ ಸಮಿತಿ ಯುವ ಘಟಕದ ಕಾರ್ಯದರ್ಶಿ ಯಾದ ವೀರೇಶ ಕ್ಯಾತ್ನಟ್ಟಿ ರವರು ವಿಷಾಧಿಸಿದರು.
ಈ ಸಂದರ್ಭದಲ್ಲಿ ,ಶಿವಶಂಕರಯ್ಯ ಸ್ವಾಮಿ ಗಚ್ಚಿನಮಠ,ಮಲ್ಲಿಕಾರ್ಜುನ, ಗ್ಯಾನಪ್ಪ ಮೆದಿಕಿನಾಳ,ಮಾರುತಿ ಜಿನ್ನಾಪುರ,ಇದ್ದರು.
