ಇತ್ತೀಚಿನ ಸುದ್ದಿ
SHOCKING NEWS: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಹಾಸ್ಯನಟ ರಾಕೇಶ್ ಪೂಜಾರಿ ವಿಧಿವಶ | Comedian Rakesh Poojary Passes away

ಬೆಂಗಳೂರು : ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಹಾಸ್ಯನಟ ರಾಕೇಶ್ ಪೂಜಾರಿ ಲೋ ಬಿಪಿಯಿಂದಾಗಿ ಸಾವನ್ನಪ್ಪಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ಮೂರನೇ ಆವೃತ್ತಿಯಲ್ಲಿ ಭಾಗಿಯಾಗಿದ್ದರು.
ಈ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಶಾಕಿಂಗ್ ಸುದ್ದಿ ಅಪ್ಪಳಿಸಿದೆ.
ಜೀ ಕನ್ನಡ ವಾಹಿನಿಯ ಮೂಲಕ ಕರ್ನಾಟಕದ ಮನೆ ಮಾತಾಗಿದ್ದ ಕಾಮಿಡಿ ಕಿಲಾಡಿ ಸೀಸನ್ ಮೂರರ ವಿನ್ನರ್ ರಾಕೇಶ್ ಪೂಜಾರಿ ಅಕಾಲಿಕರಾಗಿ ನಿಧನರಾಗಿದ್ದಾರೆ. ಅವರಿಗೆ ಯಾವುದೇ ಅನಾರೋಗ್ಯ ಇರಲಿಲ್ಲ. ಊರಿನಲ್ಲಿ ನಡೆದ ಮದುವೆ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಡ್ಯಾನ್ಸ್ ಮಾಡಿದ್ದರು.ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ನಿಟ್ಟೆ ಸಮೀಪ ನಡೆಯುತ್ತಿದ್ದ ಗೆಳೆಯನ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಕೇಶ್ ಪೂಜಾರಿ ಹೃದಯಾಘಾತದಿಂದ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಅವರಿಂದ 34 ವರ್ಷ ವಯಸ್ಸಾಗಿತ್ತು.