ಪಕ್ಷಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಮಹಾಂತೇಶ ಎಚ್

ಮಸ್ಕಿ : ಪಟ್ಟಣದ ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ 201 ನೇ ಸಂಡೇ ಫಾರ್ ಸೋಶಿಯಲ್ ವರ್ಕ್ ಸೇವಾ ಕಾರ್ಯವನ್ನು ಶ್ರೀ ಮಲ್ಲಿಕಾರ್ಜುನ ಗ್ರೀನ್ ಸಿಟಿ ಸೇವಾ ಪಕ್ಷಿಗಳಿಗೆ ನೀರಿನ ಅರವಟ್ಟಿಗೆಗಳನ್ನು ಕಟ್ಟುವ ಮೂಲಕ ಬೇಸಿಗೆಯಲ್ಲಿ ಪಕ್ಷಿಗಳಿಗೆ ಗ್ರೀನ್ ಸಿಟಿಯ ಎಲ್ಲಾ ಗಿಡಮರಗಳಿಗೆ ಅರವಟ್ಟಿಗೆಗಳನ್ನ ಕಟ್ಟಲಾಯಿತು.
ಈ ವೇಳೆ, ಶಿಕ್ಷಕರಾದ
ಮಹಾಂತೇಶ್ ಎಚ್ ಅವರು ಮಾತನಾಡಿ,
ನಮ್ಮ ಗ್ರೀನ್ ಸಿಟಿಯ ಆವರಣವನ್ನು ಆಯ್ಕೆ ಮಾಡಿಕೊಂಡಿದ್ದು ನಿಜಕ್ಕೂ ಈ ಸಂಸ್ಥೆಯ ಸೇವಾ ಕಾರ್ಯ ಶ್ಲಾಘನೀಯ.
ಈ ಸಂಸ್ಥೆಯು ಕೇವಲ ಸ್ವಚ್ಛತೆಯನ್ನು ಮಾಡದೆ ಪರಿಸರ ಜಾಗೃತಿ,ಪಕ್ಷಿಗಳ ಸಂರಕ್ಷಣೆ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹೀಗೆ ಹಲವಾರು ವಿಭಿನ್ನ ರೀತಿಯ ಸೇವೆಯಲ್ಲಿ ತೊಡಗಿದ್ದು ಇಂತಹ ಸೇವೆಗೆ ನಾವು ಸದಾ ಕಾಲ ಸಹಕಾರ ನೀಡುತ್ತೇವೆ ಎಂದುರು.

ಈ ಸಂದರ್ಭದಲ್ಲಿ ಅಭಿನಂದನ ಸಂಸ್ಥೆಯ ಸಂಸ್ಥಾಪಕ ರಾಮಣ್ಣ ಹಂಪರಗುಂದಿ ಸದಸ್ಯರಾದ ಮಂಜುನಾಥ್ ಜೋಗಿನ್ ಮಲ್ಲಿಕಾರ್ಜುನ್ ಬಡಿಗೇರ್ ರವಿಚಂದ್ರನ್, ಕಿಶೋರ್ ಹಾಗೂ ಸ್ಫೂರ್ತಿ ಧಾಮದ ಮಕ್ಕಳು ಉಪಸ್ಥಿತರಿದ್ದರು