ಇತ್ತೀಚಿನ ಸುದ್ದಿ

ಹೇಮರೆಡ್ಡಿ ಮಲ್ಲಮ್ಮ ಬದುಕು ಅನುಕರಣೀಯ ಮನುಕುಲಕ್ಕೆ ಆದರ್ಶ : ಮಲ್ಲಯ್ಯ ಅಂಬಾಡಿ ಅಭಿಮತ

ಮಸ್ಕಿ : 14ನೇ ಶತಮಾನದ ಶಿವಶರಣರಲ್ಲಿ ಪ್ರಜ್ವಲಿಸಿದ ಹೇಮರೆಡ್ಡಿ ಮಲ್ಲಮ್ಮ ದೈವಭಕ್ತಿ, ಕಾಯಕ ನಿಷ್ಠೆ, ದಾನ ಧರ್ಮದಿಂದ, ಆದರ್ಶ ಗೃಹಿಣಿಯಾಗುವ ಮೂಲಕ ಲೋಕ ಪ್ರಸಿದ್ಧಿ ಪಡೆದಿದ್ದರು ಎಂದು ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ರವರು ಅಭಿಪ್ರಾಯ ವ್ಯಕ್ತಪಡಿಸಿದರು.

ಶನಿವಾರ ಪಟ್ಟಣದ ಪುರಸಭೆ ಕಛೇರಿಯ ಸಭಾಂಗಣದಲ್ಲಿ ಹೇಮ್ಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ದಲ್ಲಿ ಮಾತನಾಡಿ ಸುಖ-ದುಃಖ, ಅಂಬಲಿ-ಅಮೃತ, ಶತ್ರು-ಮಿತ್ರ, ಸ್ತುತಿ-ನಿಂದನೆ ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸಿ, ಶ್ರೀಶೈಲ ಮಲ್ಲಿಕಾರ್ಜುನನ್ನು ಸಾಕ್ಷಾತ್ಕರಿಸಿಕೊಂಡ ಹೇಮರೆಡ್ಡಿ ಮಲ್ಲಮ್ಮನ ಬದುಕು ಎಂದಿಗೂ ಅನುಕರಣೀಯ ಹಾಗೂ ಮನುಕುಲಕ್ಕೆ ಆದರ್ಶ. ರೆಡ್ಡಿ ಸಮುದಾಯದ ಮಹಾಮಹಿ ಮಲ್ಲಮ್ಮಳು ರೆಡ್ಡಿ ಕುಲಕ್ಕೆ ಬಡತನ ಬೇಡ ಎಂದು ಪರಮಾತ್ಮನಲ್ಲಿ ಬೇಡಿ ವರವ ಪಡೆದ ಮಹಾನ್‌ ಸಾಧ್ವಿ ಎಂದರು.

ಈ ವೇಳೆ, ರಡ್ಡಿ ಸಮುದಾಯದವರು, ಪುರಸಭೆ ನಾಮ ನಿರ್ದೇಶನ ಸದಸ್ಯರು, ಅಧಿಕಾರಿಗಳು ಸಿಬ್ಬಂದಿ ಗಳು ಇದ್ದರೂ.

Related Articles

Leave a Reply

Your email address will not be published. Required fields are marked *

Back to top button