ದೇಶ
ತಗಡೂರು ಗ್ರಾಮದ ಯುವತಿ ಟಿ.ಎಂ ಆಶಾಗೆ Phd ಪದವಿ

ನಂಜನಗೂಡು: ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದ ನಿವೃತ್ತ ಮುಖ್ಯ ಶಿಕ್ಷಕ ಮಹದೇವಯ್ಯ ಮತ್ತು ಮಂಜುಳಾ ದಂಪತಿಗಳ ಪುತ್ರಿ ಟಿ.ಎಂ ಆಶಾ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಪಿಹೆಚ್‌ಡಿ ಪದವಿ ನೀಡಲು ಅಂಗೀಕರಿಸಿದೆ.

ಡಾ. ಪ್ರೀತಿ ಶ್ರೀಮಂಧರ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕನ್ನಡ ಭಾಷೆಯಲ್ಲಿ ಸಿದ್ಧಪಡಿಸಿದ ‘ಕನ್ನಡ ಜನಪದ ಕಥೆಗಳಲ್ಲಿ ಮಹಿಳಾ ಜಾಣ್ಮೆ’ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಪಿಹೆಚ್ ಡಿ ಪದವಿ ನೀಡಲು ಮೈಸೂರು ವಿಶ್ವವಿದ್ಯಾಲಯ ಮಾನ್ಯ ಮಾಡಿದೆ. ಮುಂದೆ ನಡೆಯುವ ಮೈಸೂರು ವಿವಿ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಪಿಹೆಚ್ ಡಿ ಪದವಿಯನ್ನು ಟಿಎಂ ಆಶಾ ಅವರಿಗೆ ಪ್ರಧಾನ ಮಾಡಲಾಗುತ್ತದೆ ಎಂದು ಮೈಸೂರು ವಿಶ್ವವಿದ್ಯಾನಿಲಯ ಅಧಿಸೂಚನೆ ಹೊರಡಿಸಿದೆ.
ಟಿ.ಎಂ ಆಶಾ ರವರು ಮಂಡಿಸಿರುವ ಮಹಾ ಪ್ರಬಂಧಕ್ಕೆ ಪಿಹೆಚ್.ಡಿಗೆ ಅಂಗೀಕರಿಸಿರುವುದರಿಂದ ಅನೇಕರು ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.