ಭಾರತದ ಸಿಂಧೂರ ಮತ್ತೆ ನಮಗೆ ಸಿಕ್ಕಿದೆ.- ನಟ ಸುದೀಪ್

ಬೆಂಗಳೂರು :ಉಗ್ರರ ಹೆಡೆಮುರಿ ಕಟ್ಟಲು ಭಾರತ ಸೇನೆ ಹಾಗೂ ವಾಯುಪಡೆ ಜಂಟಿ ಕಾರ್ಯಚರಣೆಯಿಂದ ಇಂದು ಪಾಕಿಸ್ತಾನದ ಸುಮಾರು 80 ರಿಂದ 100 ಜನ ಉಗ್ರರನ್ನು ದೊಮ್ಸಗೊಳಿಸಿರುವುದರಿಂದ ಭಾರತವು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದೆ.
ಇನ್ನು ಆಪರೇಷನ್ ಸಿಂಧೂರ್ ಕುರಿತಂತೆ ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಆಪರೇಷನ್ ಸಿಂಧೂರ್ ಕುರಿತಾಗಿ ಟ್ವಿಟ್ ಮಾಡಿರುವ ಅವರು, ‘ಓರ್ವ ಭಾರತೀಯನಾಗಿ, ಈ ಪವಿತ್ರ ಭೂಮಿಯ ಮಗನಾಗಿ ಹಲ್ಗಾಮ್‌ನಲ್ಲಿ ನಡೆದ ಘಟನೆ ನನಗೆ ನೋವನ್ನು ತಂದಿತ್ತು. ಇಂದು ನನಗೆ ನ್ಯಾಯ ಸಿಕ್ಕಂತೆ ಅನಿಸುತ್ತಿದೆ. ಆಪರೇಷನ್ ಸಿಂಧೂರ: ಕೇವಲ ಒಂದು ಧ್ಯೇಯವಲ್ಲ, ಬದಲಾಗಿ ಒಂದು ಪವಿತ್ರ ಪ್ರತಿಜ್ಞೆ’ ಎಂದು ಸುದೀಪ್ ಹೇಳಿದ್ದಾರೆ.
‘ಭಾರತದ ಸಿಂಧೂರ ಮತ್ತೆ ನಮಗೆ ಸಿಕ್ಕಿದೆ. ನಮ್ಮ ಧೈರ್ಯಶಾಲಿಗಳು (ಯೋಧರು) ಸಿಂಧೂರದ ಗೌರವವನ್ನು ಬೆಂಕಿ ಮತ್ತು ನಿಖರತೆಯೊಂದಿಗೆ ಮತ್ತೆ ತಂದಿದ್ದಾರೆ. ನಮ್ಮ ಸಶಸ್ತ್ರ ಪಡೆಗಳಿಗೆ ಅನಂತ ವಂದನೆಗಳು. ದೃಢವಾಗಿ ಮತ್ತು ನಿರ್ಭೀತವಾಗಿ ನಿಂತ ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಕ್ಷಣಾ ಇಲಾಖೆಗೆ ಧನ್ಯವಾದ. ಭಾರತ ಮರೆಯುವುದಿಲ್ಲ, ಭಾರತ ಕ್ಷಮಿಸುವುದಿಲ್ಲ’ ಎಂದು ಸುದೀಪ್ ಹೇಳಿದ್ದಾರೆ.