ಆಪರೇಷನ್ ಸಿಂಧೂರ್ ಮೂಲಕ ಉಗ್ರರನ್ನು ಧ್ವಂಸ

ನವ ದೆಹಲಿ: ಭಾರತವು ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ್ ಮೂಲಕ ಉಗ್ರರನ್ನು ಧ್ವಂಸ ಮಾಡಲು ಮುಂದಾಗಿದ್ದು ಈ ಅಪರೇಷನ್ ಸಿಂಧೂರ್ ನಲ್ಲಿ ಹಲವಾರು ಪಾಕಿಸ್ತಾನದ ಉಗ್ರರ ನೆಲಗಳನ್ನು ದೋಷ ಮಾಡಲಾಗಿದೆ.
ಬೆಳಗ್ಗೆಯಿಂದಲೇ ಕಾರ್ಯಾಚರಣೆ ಪ್ರಾರಂಭವಾಗಿದ್ದು ಭಾರತದ ಸೈನ್ಯವು ಪಾಕಿಸ್ತಾನದ ಭಯೋತ್ಪಾದಕ ಸ್ಥಳಗಳನ್ನು ಹುಡುಕಿ, ಹುಡುಕಿ ಧ್ವಂಸಗೊಳಿಸುತ್ತಿದ್ದಾರೆ.
ಹೌದು, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನ ಅತಿಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದ ಒಟ್ಟು 9 ಪ್ರದೇಶಗಳಲ್ಲಿ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಭಾರತದ ಮೇಲಿನ ಅನೇಕ ದಾಳಿಗಳ ಹಿಂದೆ ಇದ್ದ ಈ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ. 4 ಜೈಶ್-ಎ-ಮೊಹಮ್ಮದ್, 3 ಲಷ್ಕರ್-ಎ-ತೈಬಾ ಮತ್ತು 2 ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಭಾರತ ಗುರಿಯಾಗಿಸಿಕೊಂಡಿರುವ ಭಯೋತ್ಪಾದಕ ಅಡಗುತಾಣಗಳಲ್ಲಿ ಜೈಶ್-ಎ-ಮೊಹಮ್ಮದ್ನ ಪ್ರಧಾನ ಕಚೇರಿಯೂ ಸೇರಿದೆ. ಇದಲ್ಲದೆ, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಶಿಬಿರಗಳನ್ನು ಸಹ ನಾಶಪಡಿಸಲಾಗಿದೆ. ಅಂತಾರಾಷ್ಟ್ರೀಯ ಗಡಿಯಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಮತ್ತು ಜೈಶ್-ಎ-ಮೊಹಮ್ಮದ್ನ ಪ್ರಧಾನ ಕಚೇರಿ ಇರುವ ಬಹವಾಲ್ಪುರದಲ್ಲಿ ಅತಿದೊಡ್ಡ ದಾಳಿ ನಡೆಸಲಾಯಿತು.
ಭಾರತದ ಆಪರೇಷನ್ ಸಿಂಧೂರ್ ನಂತರ, ಪಾಕಿಸ್ತಾನವು ಆಕ್ರೋಶಗೊಂಡಿದ್ದು ದುಷ್ಟ ಚಟುವಟಿಕೆಗಳನ್ನು ಮುಂದುವರೆಸಿದೆ. ಪಾಕಿಸ್ತಾನ ಸೇನೆಯು ಸಾಮಾನ್ಯ ಭಾರತೀಯರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಾದ್ಯಂತ ಗುಂಡಿನ ದಾಳಿ ನಡೆಸಿದ್ದು, 3 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.