ಕ್ರೀಡೆ

IPL 2025: ಅಬ್ಬಾಬ್ಬ… ಏನ್ ಆಟ! ಒಂದೇ ಓವರ್ ನಲ್ಲಿ ಸತತ 6 ಸಿಕ್ಸರ್ , Elite list ಸೇರಿದ ರಿಯಾನ್!

ಕೊಲ್ಕತ್ತಾ : ಈಡನ್ ಗಾರ್ಡನ್ಸ್‌ನಲ್ಲಿ ಇಂದು ನಡೆಯುತ್ತಿರುವ ಕೆಕೆಆರ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಒಂದೇ ಓವರ್ ನಲ್ಲಿ ಬ್ಯಾಕ್ ಟು ಬ್ಯಾಕ್ 6 ಸಿಕ್ಸರ್ ಬಾರಿಸಿದರು. ಒಂದೇ ಓವರ್ ನಲ್ಲಿ ಐದು ಸಿಕ್ಸರ್ ಸಾಧನೆಯೂ ಸೇರಿದ್ದು, ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ಅವರೊಂದಿಗೆ ಎಲೈಟ್ ಪಟ್ಟಿಗೆ ಸೇರಿದ್ದಾರೆ.

ಇಂಗ್ಲೆಂಡ್ ನ ಮಾಜಿ ಸ್ವಿನ್ನರ್ ಮೊಯಿನ್ ಅಲಿ ಅವರ 13ನೇ ಓವರ್ ನಲ್ಲಿ ಹ್ಯಾಟ್ರಿಕ್ ಸೇರಿದಂತೆ ಸತತ ಐದು ಎಸೆತಗಳಲ್ಲಿ ಸಿಕ್ಸರ್ ಬಾರಿಸಿ ಅಬ್ಬರಿಸಿದರು. ಐಪಿಎಲ್ ಇತಿಹಾಸದಲ್ಲಿ ಈವರೆಗೆ ಐದು ಮಂದಿ ಬ್ಯಾಟರ್ ಗಳು ಮಾತ್ರ ಒಂದೇ ಓವರ್ ನಲ್ಲಿ ಐದು ಸಿಕ್ಸರ್ ಸಿಡಿಸಿದ್ದಾರೆ.

ಐದು ಸಿಕ್ಸರ್ ಗಳಿಸಿದ ಬ್ಯಾಟರ್ ಗಳ ಎಲೈಟ್ ಪಟ್ಟಿ:

* 2012ರಲ್ಲಿ ಆರ್ ಸಿಬಿಯ ಕ್ರಿಸ್ ಗೇಲ್ ರಾಹುಲ್ ಶರ್ಮಾ ವಿರುದ್ಧ ಐದು ಸಿಕ್ಸರ್ ಬಾರಿಸಿದ್ದರು.

* 2020 ರಲ್ಲಿ ರಾಹುಲ್ ತೆವಾಟಿಯಾ ಕಾಟ್ರೆಲ್ ವಿರುದ್ಧ ಐದು ಸಿಕ್ಸರ್ ಸಿಡಿಸಿದ್ದರು

* 2021 ರಲ್ಲಿ ರವೀಂದ್ರ ಜಡೇಜ , ಹರ್ಷಲ್ ಪಟೇಲ್ ವಿರುದ್ಧ ಒಂದೇ ಓವರ್ ನಲ್ಲಿ ಐದು ಸಿಕ್ಸರ್ ಬಾರಿಸಿದ್ದರು.

* 2023 ರಲ್ಲಿ ರಿಂಕು ಸಿಂಗ್, ಯಶ್ ದಯಾಳ್ ವಿರುದ್ಧ ಈ ಸಾಧನೆ ಮಾಡಿದ್ದರು.

* 2025 ರಿಯಾನ್ ಪರಾಗ್, ಮೊಯಿನ್ ಆಲಿ ವಿರುದ್ಧ ಬ್ಯಾಕ್ ಟು ಬ್ಯಾಟ್ ಸಿಕ್ಸರ್ ಹೊಡೆದಿದ್ದಾರೆ.

ತದ ನಂತರ ಬಂದ ಮತ್ತೊಬ್ಬ ಬೌಲರ್ ವರುಣ್ ಚಕ್ರವರ್ತಿ ಯವರ ಮೊದಲ ಎಸೆತ ದಲ್ಲಿ ಸಿಕ್ಸರ್ ಸಿಡಿಸುವದರ ಮೂಲಕ ಸತತ ,6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸುವ ಮೂಲಕ ದಾಖಲೆ ಬರೆದಿದ್ದಾರೆ…

KKR ವಿರುದ್ಧ ರಿಯಾನ್ ಪರಾಗ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು 45 ಎಸೆತಗಳಲ್ಲಿ 95 ರನ್ ಗಳಿಸಿದರು, ಇದರಲ್ಲಿ 6 ಬೌಂಡರಿ ಮತ್ತು 8 ಸಿಕ್ಸರ್‌ಗಳು ಸೇರಿವೆ. ಆದಾಗ್ಯೂ, ಇನ್ನೊಂದು ಸಿಕ್ಸರ್ ಬಾರಿಸುವ ಯತ್ನದಲ್ಲಿ ಔಟಾದರು ಮತ್ತು ಶತಕದಿಂದ ವಂಚಿತರಾದರು. ಆದಾಗ್ಯೂ, ನಂತರ ಪಂದ್ಯವು ರೋಚಕವಾಯಿತು. ರಾಜಸ್ಥಾನ ರಾಯಲ್ಸ್ 1 ರನ್‌ನಿಂದ ಸೋಲನುಭವಿಸಿತು. ಈ ಸೀಸನ್‌ನಲ್ಲಿ ಇದು ಅವರ ಅತ್ಯುತ್ತಮ ವೈಯಕ್ತಿಕ ಸ್ಕೋರ್ ಆಗಿದೆ.

ಕೆಕೆಆರ್ 206 ರನ್ ಸಿಡಿಸಿದ್ದರೆ, ರಾಜಸ್ತಾನ ರಾಯಲ್ಸ್ 205 ರನ್ ಸಿಡಿಸಿತ್ತು. 1 ರನ್‌ಗಳಿಂದ ರಾಜಸ್ಥಾನ ರಾಯಲ್ಸ್ ಸೋಲು ಕಂಡಿದೆ. ಆದರೆ ರಿಯಾನ್ ಪರಾಗ್ ಸ್ಫೋಟಕ ಬ್ಯಾಟಿಂಗ್ ಈ ಪಂದ್ಯದ ಹೈಲೈಟ್ಸ್ ಆಗಿದೆ.

ಮಹಮ್ಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button