ಇತ್ತೀಚಿನ ಸುದ್ದಿ

ಸಾಧಿಸುವುದಾದರೆ ಶ್ರೀ ಭಗೀರಥರಂತೆ ಸಾಧಿಸಬೇಕು – ಎಂ ಪ್ರತಿಭಾ ಗ್ರೇಡ್-2 ತಹಶೀಲ್ದಾರ್,

ಕೊಟ್ಟೂರು : ತಾಲೂಕು ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಇಂದು ಶ್ರೀ ಭಗೀರಥ ಮಹರ್ಷಿಗಳ ಜಯಂತಿಯನ್ನು ಆಚರಿಸಲಾಯಿತು.

ಎಂ ಪ್ರತಿಭಾ ಗ್ರೇಡ್-2 ತಹಶೀಲ್ದಾರರು ಮಹರ್ಷಿಗಳ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡುವುದರೊಂ ದಿಗೆ ಚಾಲನೆ ನೀಡುತ್ತಾ, ಯಾರಾದರೂ ಅಸಾಧ್ಯವಾದುದನ್ನು ಸಾಧಿಸಿದರೆ, ಯಾರೂ ನಿರೀಕ್ಷಿಸದ ಕಾರ್ಯವನ್ನು ಪೂರ್ಣಗೊಳಿಸಿದರೆ ಭಗೀರಥ ಪ್ರಯತ್ನ ಎನ್ನುತ್ತೇವೆ. ಹಾಗಾಗಿ ಯಾವುದೇ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದರೆ ಭಗೀರಥ ಮಹರ್ಷಿಗಳಂತೆ ಮಾಡಬೇಕು. ಅವರ ಸಾಧನೆ ಸಾಧಿಸುವ ಮನಸ್ಸುಳ್ಳವರಿಗೆ ಪ್ರೇರಣೆಯಾಗಿದೆ ಎಂದರು.
ತಾಲೂಕು ಉಪ್ಪಾರ ಸಮಾಜದ ಮುಖಂಡರಾದ ಎನ್ ಕಲ್ಲಪ್ಪ ಇವರು ಉಪ್ಪಾರ ಸಮಾಜದ ಆರಾಧ್ಯ ದೈವ ಶ್ರೀ ಭಗೀರಥ ಮಹರ್ಷಿಗಳು. “ಉಪ್ಪಿಗಿಂತ ರುಚಿಯಿಲ್ಲ” ಎನ್ನುವ ಗಾದೆಯಂತೆ ಮನುಷ್ಯರಿಗೆ ಊಟದಲ್ಲಿ ಉಪ್ಪು ಅತ್ಯಂತ ಮಹತ್ವದ್ದಾಗಿದೆ. ಇಂತಹ ಉಪ್ಪನ್ನು ತಯಾರಿಸುವ ಸಮುದಾಯವಾದ ನಮ್ಮ ಉಪ್ಪಾರ ಸಮಾಜದ ಆರಾಧ್ಯ ದೈವ ಭಗೀರಥ ಮಹರ್ಷಿಗಳು. ತಮ್ಮ ಪೂರ್ವಜರ ಶಾಪ ವಿಮೋಚನೆಗೆ ಅತ್ಯಂತ ಕಠಿಣವಾದ ತಪಸನ್ನು ಮಾಡಿ ಆ ಪರಶಿವನನ್ನು ಒಲಿಸಿಕೊಂಡು ಜಡೆಯಲ್ಲಿರುವ ಗಂಗೆಯನ್ನು ಭೂಲೋಕಕ್ಕೆ ಕರೆತಂದು ಸಕಲ ಜೀವ ರಾಶಿಗಳಿಗೆ ನೀರಿನ ದಾಹವನ್ನು ತಣಿಸಿದವರು. ಇಕ್ಷ್ವಾಕು ವಂಶದವರಾದ ಇವರು ಹಿಂದಿನ ತಮ್ಮ ಮೂರು ತಲೆಮಾರಿನವರು ಸಾಧಿಸದ್ದನ್ನು ಸಾಧಿಸಿದರು. ಭಗೀರಥರ ಮಹರ್ಷಿಗಳು ಹಿಡಿದ ಕೆಲಸವನ್ನು ಸಾಧಿಸಲು ಛಲ ಮತ್ತು ಧೃಡಸಂಕಲ್ಪದ ಪ್ರತೀಕರು. ಇವರಂತೆ ನಾವೆಲ್ಲರೂ ಸಾಧನೆ ಮಾಡಬೇಕು ಎಂದರು.


pಕಾರ್ಯಕ್ರಮದಲ್ಲಿ ಉಪತಹಶೀಲ್ದಾರ್ ಅನ್ನದಾನೇಶ ಬಿ ಪತ್ತಾರ್, ಉಪ್ಪಾರ ಸಮಾಜದ ಮುಖಂಡರಾದ ಕಂದಗಲ್ ಉಮೇಶ್ ಉಪನ್ಯಾಸಕರು, ದಿಬ್ಬದಹಳ್ಳಿ ಹೊನ್ನಪ್ಪ, ಶಿಕ್ಷಕರಾದ ಕಂದಗಲ್ಲು ಬಸವರಾಜ, ಕಂದಗಲ್ ಜಿ ಉಮೇಶ್, ಸಿಡಿಪಿಒ ಇಲಾಖೆಯ ಸಿಬ್ಬಂದಿ ಎಂ ಜಿ ಶಾಂತಮ್ಮ, ಸಿಬ್ಬಂದಿಯಾದ ಮಂಜುನಾಥ, ಹರೀಶ, ನಿಂಗನಗೌಡ, ಶಿವರಾಜ ಉಪಸ್ಥಿತರಿದ್ದರು. ಸಿ.ಮ.ಗುರುಬಸವರಾಜ ಸ್ವಾಗತಿಸಿ ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button