ಗ್ಯಾಸ್ ಬಳಸುವಾಗ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿ ಸುರಕ್ಷಿತವಾಗಿರಿ: ಶ್ರೇಯಸ್

ದೇವನಹಳ್ಳಿ : ಗ್ರಾಹಕರು ಗ್ಯಾಸ್ ಬಳಸುವಾಗ ಸುರಕ್ಷಿತ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿ ಸುರಕ್ಷಿತವಾಗಿರಿ ಎಂದು ಎಸ್.ಎಲ್.ಎನ್.ಎಸ್ ಭಾರತ ಗ್ಯಾಸ್ ಏಜೆನ್ಸಿ ವ್ಯವಸ್ಥಾಪಕ ಶ್ರೀಯಸ್ ತಿಳಿಸಿದರು.
ದೇವನಹಳ್ಳಿ ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಎಲ್.ಎಲ್.ಎನ್.ಎಸ್ ಗ್ಯಾಸ್ ಏಜೆನ್ಸಿವತಿಯಿಂದ ಎಲ್‌ಪಿಜಿ ಗ್ಯಾಸ್ ಬಳಸುವ ಗ್ರಾಹಕರಿಗೆ ಹಮ್ಮಿಕೊಳ್ಳಲಾಗಿದ್ದ ಬಳಕೆ, ಮುಂಜಾಗ್ರತ ಕ್ರಮಗಳ ಪ್ರಾತ್ಯಕ್ಷಿಕ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು. ಮಾರ್ಚ್ 2024 ನ-2024ರವರೆಗೆ ಮೆನೆಮೆನೆ ಸ್ವಚ್ಚತಾ ಅಭಿಯಾನ ನಡೆಯುತ್ತಿದೆ. ಮೂರು ತೈಲ ಮಾರುಕಟ್ಟೆ ಕಂಪನಿಗಳಿಂದ ಪ್ರಾರಂಭವಾದ ಮೂಲಭೂತ ಸುರಕ್ಷತಾ ತಪಾಸಣೆ ಅಭಿಯಾನವು ತರಬೇತಿ ಪಡೆದ ಸಿಬ್ಬಂದಿಗಳು ನಡೆಸಿದ ಮನೆ-ಮನೆ ತಪಾಸಣೆಗಳ ಮೂಲಕ 12 ಕೋಟಿ ಕುಟುಂಬಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಿದೆ. ಎಲ್‌ಪಿಜಿ ಅಳವಡಿಕೆಗಳಲ್ಲಿ ಯಾವುದೇ ಸುರಕ್ಷತಾ ಅಪಾಯಗಳಿಗಾಗಿ ಗ್ರಾಹಕರಿಗೆ ತಪಾಸಣೆ ಉಚಿತವಾಗಿದೆ ಮತ್ತು ಹಳೆಯ ಗ್ಯಾಸ್ ಪೈಪ್‌ಗಳನ್ನು ರಿಯಾಯಿತಿ ದರದಲ್ಲಿ ಬದಲಾವಣೆ ಮಾಡಲಾಗುತ್ತಿದ್ದು ಸದ್ಯಕ್ಕೆ 8 ಕೋಟಿಗೂ ಹೆಚ್ಚು ಮನೆಗಳನ್ನು ಪರಿಶೀಲಿಸಲಾಗಿದೆ ಹಾಗೂ ಗ್ರಾಹಕರಿಗೆ ಅಡುಗೆ ಸ್ಪರ್ಧೆಯನ್ನು ನಡೆಸಿ ವಿಜೇತರಿಗೆ ಬಹುಮಾನವನ್ನು ವಿತರಿಸಿದ್ದೇವೆ ಹಾಗು ಅಡುಗೆಮನೆಯಲ್ಲಿ ಗ್ಯಾಸ್ ಎಷ್ಟು ಎತ್ತರದಲ್ಲಿರಬೇಕು ಹಾಗೂ ಯಾವ ಮುಂಜಾಗ್ರತ ಕ್ರಮ ಅನುಸರಿಸಬೇಕು ಗಾಸ್ ಲಿಕೇಜ್ ಕಾಣಿಸಿಕೊಂಡಾಗ ಏನೆಲ್ಲ ಕ್ರಮ ಅನುಸರಿಸಬೇಕು ಅನೇಕ ಮಾಹಿತಿಗಳನ್ನು ವಿಡಿಯೋ ಚಿತ್ರಿಕರಣದ ಮೂಲಕ ಗ್ರಾಹಕರಿಗೆ ತಿಳಿಸಿಕೊಟ್ಟಿದ್ದೇವೆ ಎಂದರು.
ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್‌ನ ಅಧಿಕಾರಿ ಸಚಿನ್‌ಮನೆ ಮಾತನಾಡಿ ಮೂರು ಆಯಿಲ್ ಕಂಪನಿಗಳು ಒಗ್ಗೂಡಿ ದೇವನಹಳ್ಳಿಯಲ್ಲಿ ಗ್ರಾಹಕರಿಗೆ ಅಡುಗೆ ಸ್ಪರ್ದೆ ಏರ್ಪಡಿಸಿದ್ದೇವೆ ಉದ್ದೇಶ ಯಾವುದೇ ಗ್ಯಾಸ್ ಅಪಘಾತಗಳು ಸಂಭವಿಸದಂತೆ ಯಾವ ರೀತಿ ಗ್ಯಾಸ್ ಬಳಕೆ ಮಾಡಬೇಕು. ಎಲ್‌ಪಿಜಿ ಬಳಕೆಯ ಬಗ್ಗೆ ಕಾರ್ಯಗಾರವನ್ನು ನಡೆಸಿದ್ದೇವೆ. ಎಲ್‌ಪಿಜಿ ಬಲಸುವ ಎಲ್ಲಾ ಗ್ರಾಹಕರು ಜಾಗೃತರಾಗಿರಬೇಕು. ಯಾವುದೇ ಅಪಘಾತಗಳು ಸಂಬವಿಸಬಾರದೆಂದು ಕಾರ್ಯಕಾರವನ್ನು ನಡೆಸಿದ್ದೇವೆ ಎಂದರು.
ಇದೆ ವೇಳೆ ಎಸ್.ವಿ.ಎಸ್. ಭಾರತ್ ಗ್ಯಾಸ್ ಏಜೆನ್ಸಿ ಮಾಲಿಕ ಯಶವಂತ್, ಸರಸ್ವತಿ ನಾಗೇಶ್, ನರಸಿಂಹ ಗ್ಯಾಸ್ ಏಜೆನ್ಸಿ ಮಾಲೀಕರಾದ ಜಯಲಕ್ಷ್ಮಿ , ಗ್ಯಾಸ್ ವಿತರಕರು, ಕಚೇರಿ ಅಧಿಕಾರಿಗಳು ಗ್ರಾಹಕರು ಇದ್ದರು.
ವರದಿ : ಮಧು tv8kannada ದೇವನಹಳ್ಳಿ
