ಪರಿಶಿಷ್ಟ ಉಪಜಾತಿ ಸಮೀಕ್ಷೆಯಲ್ಲಿ ಮಾದಿಗ ಎಂದು ನಮೂದಿಸಲು ಒತ್ತಾಯ

ಚಾಮರಾಜನಗರ: ನಗರದ ಬಾಬು ಜಗಜೀವನರಾಂ ಬಡಾವಣೆಗೆ ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಕೋಟೆ ಎಂ.ಶಿವಣ್ಣ ಭೇಟಿ ನೀಡಿ ಮಾತನಾಡಿ, ಮಾದಿಗ ಸಮಾಜದ ಬೇಡಿಕೆಯಾಗಿದ್ದ ಒಳ ಮೀಸಲಾತಿ ಜಾರಿ ಬಗ್ಗೆ ಸುಮಾರು ವರ್ಷಗಳಿಂದ ಹೋರಾಟ ನಡೆಯುತ್ತಾ ಬಂದಿದ್ದು, ಈ ಬಗ್ಗೆ ಅನೇಕ ಮುಖ್ಯಮಂತ್ರಿಗಳು ಯಾವ ಯಾವ ಜಾತಿಗಳಿಗೆ, ಉಪಜಾತಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂಬುದರ ಆಧಾರದ ಮೇಲೆ ಉಪಜಾತಿಗಳ ವಿಂಗಡಣೆ ಮಾಡಿದರು. ಇಂತಹ ಸಂದರ್ಭದಲ್ಲಿ ಇತ್ತೀಚಿನ ದಿನಗಳಲ್ಲಿ ಸುಪ್ರೀಂಕೋರ್ಟ್ ಒಂದು ಆದೇಶವನ್ನು ನೀಡಿದ್ದು, ಒಳ ಮೀಸಲಾತಿಯನ್ನು ಅವರಿಗೆ ಕೊಡಲೇಬೇಕು ಆದರೆ ಒಳ ಮೀಸಲಾತಿ ಕೊಡುವ ಸಂದರ್ಭದಲ್ಲಿ ಆ ರಾಜ್ಯದ ಜನಸಂಖ್ಯೆಯ ಅನುಗುಣವಾಗಿ ಒಳ ಮೀಸಲಾತಿಯನ್ನು ನೀಡಬೇಕು ನಿಮ್ಮ ಮಾಹಿತಿಯನ್ನ ನೀಡಿದೆ. ಇದೇ ವೇಳೆ
ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿವೃತ್ತ ನ್ಯಾಯಾಧೀಶ ಎಚ್.ಎನ್. ನಾಗಮೋಹನ್ ದಾಸ್ ರವರ ಅಧ್ಯಕ್ಷತೆಯಲ್ಲಿ ರಚಿಸಿರುವ ವಿಚಾರಣಾ ಆಧಾರದ ಮೇಲೆ ಸಮೀಕ್ಷೆಯನ್ನು ಕೈಗೊಳ್ಳಲಾಗಿದ್ದು, ಮನೆ ಮನೆ ಸಮೀಕ್ಷೆಗೆ ಅಧಿಕಾರಿಗಳು ಬಂದಾಗ ಮಾದಿಗ ಜಾತಿ ಎಂದು ಕಡ್ಡಾಯವಾಗಿ ಬರೆಯಿಸಿ ಬೇಕು ಅಲ್ಲದೆ
ಮೇ.05 ರಿಂದ 23 ರವರೆಗೆ ಎರಡು ಹಂತಗಳಲ್ಲಿ ಈ ಬಗ್ಗೆ ಸಮೀಕ್ಷೆ ನಡೆಯುತ್ತಿದ್ದು, ಮಾದಿಗ ಸಮಾಜದ ಎಲ್ಲಾ ಬಂಧುಗಳು ಬೇರೆ ಉಪ ಪಂಗಡಗಳನ್ನು ನಮೂದಿಸದೆ ಮಾದಿಗ ಎಂಬ ಪದವನ್ನು ನಮೂದಿಸಬೇಕೆಂದು ಮನವಿ ಮಾಡಿದರು.

ಈ ಸಮೀಕ್ಷಾ ಕಾರ್ಯಕ್ಕೆ ಚಾಮರಾಜನಗರದಲ್ಲಿ ಪ್ರಥಮವಾಗಿ ಚಾಲನೆ ನೀಡಲಾಗಿದೆ, ಬಳಿಕ ಮೈಸೂರು, ಮಂಡ್ಯ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಚಾಲನೆ ನೀಡಲಾಗುತ್ತದೆ, ಅಲ್ಲದೆ ನಾಳೆ ಮೈಸೂರಿನಲ್ಲಿ ದೊಡ್ಡ ಮಟ್ಟದ ಸಭೆ ನಡೆಸಲಾಗುತ್ತಿದ್ದು, ಈ ಸಭೆಗೆ ಚಾಮರಾಜನಗರ, ಮೈಸೂರು ಜಿಲ್ಲೆಯಿಂದ ಹೆಚ್ಚಿನ ಜನಸಂಖ್ಯೆಯಲ್ಲಿ ಸಮಾಜದ ಬಂಧುಗಳು ಭಾಗವಹಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಬಸವನಪುರ ರಾಜಶೇಖರ್, ಬಾಬು ಜಗಜೀವನ ರಾಮ್ ಯುವ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಎಂ.ಶಿವಮೂರ್ತಿ, ಗ್ಯಾರಂಟಿ ಯೋಜನೆ ಅಧ್ಯಕ್ಷ ಪಾಳ್ಯ ರಾಚಪ್ಪ, ಗೌರವಾಧ್ಯಕ್ಷ ಎಸ್.ಬಸವರಾಜು, ಬಾಬು ಜಗಜೀವನ ರಾಮ್ ಯಳಂದೂರು ತಾಲೂಕು ಅಧ್ಯಕ್ಷ ಕೆಸ್ತೂರು ಮರಪ್ಪ, ಮುಖಂಡರಾದ ಡ್ಯಾನ್ಸ್ ಬಸವರಾಜು, ವೆಲ್ಡಿಂಗ್ ಲಿಂಗರಾಜು, ಪ್ರಕಾಶ್, ರೇವಣ್ಣ, ಗಿರಿ, ಬದನಗುಪ್ಪೆ ಮರಿಸ್ವಾಮಿ, ರಾಜೇಶ್ ಉಪಸ್ಥಿತರಿದ್ದರು.
ವರದಿ : ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ