ಕ್ರೀಡೆ
IPL 2025: ಚಹಾಲ್ ಹ್ಯಾಟ್ರಿಕ್ ಕಮಾಲ್ ; ಚೆನ್ನೈ ಪರ ಸ್ಯಾಮ್ ಕರನ್ ಅರ್ಧಶತಕ

ಚೆನ್ನೈ : ಐಪಿಎಲ್ 2025 ರ 49ನೇ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿವೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದರು.
ಈ ಮೂಲಕ ಚೆನ್ನೈ ತಂಡದ ರನ್ ವೇಗಕ್ಕೆ ಚಹಾಲ್ ಬ್ರೇಕ್ ಹಾಕಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಲ್‌ರೌಂಡರ್ ಸ್ಯಾಮ್ ಕರನ್ ನೆರವಾದರು.
ಸ್ಯಾಮ್ ಕರನ್ ಅವರ ಅರ್ಧಶತಕ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸವಾಲಿನ ಮೊತ್ತ ಗಳಿಸಿತು. ತವರಿನಲ್ಲಿ ಚೆನ್ನೈ ತಂಡ 19.2 ಓವರ್‍ಗಳಲ್ಲಿ 190 ರನ್‌ಗಳಿಗೆ ಆಲೌಟಾಯಿತು. ಚೆನ್ನೈ ಸೂಪರ್ ಕಿಂಗ್ಸ್ ಎದುರು ಪಂಜಾಬ್ ಕಿಂಗ್ಸ್ ಗೆಲುವಿಗೆ 191 ರನ್‌ಗಳ ಅವಶ್ಯಕತೆಯಿದೆ.