ದೊಡ್ಡಮನಿ ಕುಡಿ ಚಲನಚಿತ್ರ ನಾಯಕಿ.

ಬೆಂಗಳೂರು: ಕನ್ನಡ ಚಿತ್ರರಂಗ ಕೇವಲ ದೇಶ ಮಾತ್ರವಲ್ಲದೆ ಇಡೀ ಜಗತ್ತಿನಾದ್ಯಂತ ಹೆಸರು ಗಳಿಸುತ್ತಿರುವುದು ಹೆಮ್ಮೆಯ ಸಂಗತಿ.
ಕನ್ನಡ ಚಿತ್ರರಂಗವು ಇತ್ತೀಚಿಗೆ ಹಲವಾರು ವಿಭಿನ್ನ ಕಥೆ ಹಂದರಗಳನ್ನು ಹೊತ್ತು ಬರುವ ಸಿನಿಮಾಗಳನ್ನು ತೆರೆ ಮೇಲೆ ತರಲು ಪ್ರಯತ್ನಿಸುತ್ತಿರುವುದಂತೂ ಹೆಮ್ಮೆಯ ಸಂಗತಿ.
ಇನ್ನು ದುನಿಯಾ ವಿಜಿ ಯವರ ಪುತ್ರಿ ರಿತನ್ಯಾ ವಿಜಯ್ ಹಾಗೂ ದೊಡ್ಮನೆ ಕುಟುಂಬದ ಕುಡಿಯಾದ ಯುವರಾಜ್ ಕುಮಾರ್ ಅವರು ಹೊಸ ಸಿನಿಮಾಕ್ಕೆ (ಇಂದು ಬುಧವಾರ ಏ. 30) ರಂದು ಮುಹೂರ್ತ ನೆರವೇರಿದ್ದು, ಈ ಮುಹೂರ್ತದ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರ ಮಗಳು ಸೇರಿದಂತೆ ಅಶ್ವಿನಿ ರಾಜ್ ಕುಮಾರ್, ದುನಿಯಾ ವಿಜಯ್ ಸೇರಿಕೊಂಡು ಹೊಸ ಚಿತ್ರಕ್ಕೆ ಮುಹೂರ್ತ ನೆರವೇರಿಸಿದ್ದಾರೆ.
ಹೌದು, ಬಹಳ ದಿನಗಳಿಂದ ಕೇಳಿ ಬರ್ತಿದ್ದ ಯುವರಾಜ್‌ಕುಮಾರ್ ಹಾಗೂ ಸುಕ್ಕ ಸೂರಿ ಸಿನಿಮಾಗೆ ಇಂದು ಅಧಿಕೃತ ಚಾಲನೆ ಸಿಕ್ಕಿದೆ. ಅಕ್ಷಯ ತೃತೀಯದಿನವಾದ ಇಂದು ಬೆಂಗಳೂರಿನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ನೆರವೇರಿದೆ. ದುನಿಯಾ ವಿಜಯ್‌ಕುಮಾರ್ ಕ್ಲ್ಯಾಪ್ ಮಾಡಿದ್ದು, ಅಪ್ಪು ಅವರ ಮಗಳು ಧೃತಿ ಪುನೀತ್ ರಾಜ್ಕುಮಾರ್ ಕ್ಯಾಮೆರಾ ಚಾಲನೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಇದನ್ನೂ ಓದಿ: ಧನ್ಯಾ ರಾಮ್ ಕುಮಾರ್ ಪ್ರೀತಿಯಲ್ಲಿ ಬಿದ್ರಾ?
ದುನಿಯಾ ವಿಜಯ್ ಮೊದಲ ಪುತ್ರಿ ರಿತನ್ಯಾ ವಿಜಯ್ ಕುಮಾರ್ ಈ ಚಿತ್ರದ ನಾಯಕಿ. ಈಗಾಗಲೇ ಅಪ್ಪನ ಜೊತೆ ಲ್ಯಾಂಡ್ ಲಾರ್ಡ್ ಸಿನಿಮಾ ಮೂಲಕ ಇಂಡಸ್ಟ್ರೀಗೆ ಬಲಗಾಲಿಟ್ಟಿರುವ ರಿತನ್ಯಾಗೆ ಇದು 2ನೇ ಸಿನಿಮಾವಾದರೆ, ಯುವರಾಜ್ ಕುಮಾರ್ ಗೆ ಇದು 3ನೇ ಚಿತ್ರವಾಗಿದೆ.
ಒಟ್ಟಿನಲ್ಲಿ ಅದೇನೇ ಆಗಲಿ ದೊಡ್ಮನೆ ಕುಡಿ ಹಾಗೂ ದುನಿಯಾ ವಿಜಯ ಅವರ ಮಗಳು ಒಟ್ಟಿಗೆ ನಟಿಸುತ್ತಿರುವುದಂತೂ ಎಲ್ಲಾ ಅಭಿಮಾನಿಗಳಿಗೂ ಸಂತಸದ ಸುದ್ದಿಯಾಗಿದೆ.
ವರದಿ: ಪುಣ್ಯ ಗೌಡ ಫಿಲಂ ಬ್ಯೂರೋ tv8kannada ಬೆಂಗಳೂರು