ಶ್ರೀ ಗುರು ಬಸವೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ಪ್ರತಿ ಅಮಾವಾಸ್ಯೆಗೆ ಸಾಂಸ್ಕೃತಿಕ ಕಾರ್ಯಕ್ರಮ .

ಕೊಟ್ಟೂರು : ನಮ್ಮ ಪರಂಪರೆ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲಾರೂ ಮುಂದಾಗಬೇಕು ಎಂದು ಶ್ರೀಮತಿ ಶಾಂತಮ್ಮ ಧಾರ್ಮಿಕ ದತ್ತಿ ಇಲಾಖೆ ಕಾರ್ಯನಿರ್ವಾಹಕ ಆದೀಕಾರಿಗಳು ಹೇಳಿದರು.
ಪಟ್ಟಣದ ಶ್ರೀ ಗುರು ಬಸವೇಶ್ವರ ಸ್ವಾಮಿ ದೇವಾಲಯ ಹೋರಂಗಣದಲ್ಲಿ ಧಾರ್ಮಿಕ ದತ್ತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಅಕ್ಷಯ ತೃತೀಯ ಅಮಾವಾಸ್ಯೆ ದಿನದಂದು ಸಂಜೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಾಂಸ್ಕೃತಿಕ ಕಾರ್ಯಕ್ರಮ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಸಂಸ್ಕೃತಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಎಂ ಎಸ್ ದಿವಾಕರ್ ಅವರು ಆದೇಶದಂತೆ ಪ್ರತಿ ಅಮಾವಾಸ್ಯೆ ದಿನದಂದು ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿರುವುದು ಶ್ಲಾಘನೀಯವಾಗಿದೆ ಎಂದರು.
ಕಲಾವಿದರು ಇಂತಹ ವೇದಿಕೆಯಲ್ಲಿ ತಮ್ಮ ನೈಜ ಕಲೆಯನ್ನು ಪ್ರದರ್ಶನ ನೀಡಿ ಉತ್ತಮ ಅವಕಾಶಗಳು ಸಿಗುತ್ತಿವೆ ಎಂದರು. ಕೆ ಟಿ ಸಿದ್ದರಾಮೇಶ್ವರ ಕೊಟ್ಟೂರಿನ ಬಗ್ಗೆ ಮಾತನಾಡಿದರು.

ಸುಗಮ ಸಂಗೀತ ಎಲ್ ವೃಷಬೇಂದ್ರ ಗೌಡ ಮತ್ತು ಎಲ್ ಸುದರ್ಶನ್ ಸಂಗಮೇಶ್ವರ ಭಕ್ತಿಗೀತೆ ಹಾಡಿದರು.ಭರತನಾಟ್ಯ
ಹಂಸಪ್ರೀಯಾ ನೃತ್ಯ ನಿಕೇತನ ವಿದ್ಯಾರ್ಥಿಗಳು ತಮ್ಮ ಕಲೆ ಪ್ರದರ್ಶನ ನೀಡಿದರು. ಕಲಾವಿದರಿಗೆ ಪ್ರಶಸ್ತಿ ಪತ್ರವನ್ನು ದೀಪು,ಕಾರ್ತಿಕ ವಿತರಣೆ ಮಾಡಲಾಯಿತು. ಚಿಗಟೇರಿ ಕೊಟ್ರೇಶಿ ಕಾರ್ಯಕ್ರಮ ನಿರೂಪಿಸಿದರು.