ಮೌನೇಶ್ವರ ದೇವಸ್ಥಾನ ಬಾಗಿಲ ಹಾಕಿರುವುದರಿಂದ ಭಕ್ತಾದಿಗಳು ತುಂಬಾ ತೊಂದರೆಯಾಗುತ್ತದೆ ಬಾಗಿಲ ತೆಗೆಸಿ ಭಕ್ತರಿಗೆ ಅನುವು ಮಾಡಿಕೊಡುಬೇಕೆಂದು ಶಂಕ್ರಪ್ಪ ಬಡಿಗೇರ್ ಹೇಳಿದರು

ಯಲಬುರ್ಗಾ : ತಾಲೂಕಿನ ತುಂಬುರಗುದ್ದಿ ಗ್ರಾಮದಲ್ಲಿ ಜಿಲ್ಲಾ ವಿಶ್ವಕರ್ಮದ ಸಮಾಜದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವಕರ್ಮ ಸಮಾಜ ಎಲ್ಲಾ ಸಮಾಜವನ್ನು ಅಪ್ಪಿಕೊಳ್ಳುವಂತ ಸಮಾಜ. ಅದರಂತೆ ಶ್ರೀ ಗುರು ಮೌನೇಶ್ವರ ದೇವರು ಬೇಡಿದಂತ ವರವನ್ನು ಕೊಡುತ್ತಾನೆ. ಈ ಹಿಂದೆ ಕಾರಣಾಂತರದಿಂದ ದೇವಸ್ಥಾನ ಬಾಗಿಲನ್ನು ಹಾಕಿರುವುದರಿಂದ. ಭಕ್ತಾದಿಗಳ ತೊಂದರೆ ಹಾಗೂ ಮೌನೇಶ್ವರ ಜಗತ್ತಿಗೆ ಬೆಳಕಾದಂತವರು ಅಂತ ದೇವಸ್ಥಾನದ ಬಾಗಿಲ ಹಾಕಿರೋದು ನಮ್ಮ ಸಮಾಜಕ್ಕೆ ಅವಮಾನ ಆಗುತ್ತದೆ ಎಂದು ಹೇಳಿದರು. ಕೂಡಲೇ ಜಿಲ್ಲಾಧಿಕಾರಿಗಳು ನಿಂಗಲಬಂಡಿ ಗ್ರಾಮದಲ್ಲಿ ಸಭೆಯನ್ನು ತೊರೆದು ಭಕ್ತರ ಸಮಸ್ಯೆಯನ್ನು ಬಗೆಹರಿಸಬೇಕೆಂದು ಬೇಡಿಕೊಳ್ಳುತ್ತೇವೆ ಎಂದು ಹೇಳಿದರು ಒಂದು ವೇಳೆ ಸಮಸ್ಯೆ ಬಗೆಹರಿದಿದ್ದರೆ ಜಿಲ್ಲಾ ಮಟ್ಟದಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ನಾಗೇಶ್ ಮಾತನಾಡಿ ಜಾತಿ ಸಮೀಕ್ಷೆಯಲ್ಲಿ ವಿಶ್ವಕರ್ಮ ಸಮಾಜ ಅಂಕಿ ಅಂಶಗಳನ್ನು ಗುರುತಿಸುವದಲ್ಲಿ ಸರ್ಕಾರ ವಿಫಲವಾಗಿದೆ ಈ ಹಿಂದೆ 35 ಲಕ್ಷದ ಸಮಾಜದ ಜನಸಂಖ್ಯೆ ದಿಢೀರನೆ 6 ಲಕ್ಷಕ್ಕೆ ಇಳಿಯಲು ಸಾಧ್ಯವೇ ಎಂದು ಪ್ರಶ್ನಿಸಿದರು
ಅಲ್ಲದೆ ನಮ್ಮ ಸಮಾಜ ನಮ್ಮ ಕುಲಕಸುವಾದ ಬಡಿಗಿತನ ಮಾಡಿಕೊಂಡು ಬಂದಂತ ನಮ್ಮ ಸಮಾಜ ಹಗಲಿರುಳು ದುಡಿಯುವಂತ ಸಮಾಜ ನಮ್ಮದು ಎಲ್ಲಾ ಜಾತಿಗಳನ್ನು ಪ್ರೀತಿಯಿಂದ ಕಾಣುವ ಸಮಾಜ ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಮಾದೇವಪ್ಪ ಕಮ್ಮಾರ್ . ಗುರುಮೂರ್ತಿ ಬಡಿಗೇರ್. ಚಂದ್ರಶೇಖರ್ ಬಡಿಗೇರ್. ಪ್ರಶಾಂತ್ ಬಡಿಗೇರ್ ಚಿದಾನಂದಪ್ಪ ಬಡಿಗೇರ್. ರುದ್ರಪ್ಪ ಬಡಿಗೇರ್. ಪ್ರಭಾಕರ್ ಬಡಿಗೇರ್. ಕೊಪ್ಪಳ ಜಿಲ್ಲೆಯ ಎಲ್ಲಾ ತಾಲೂಕಿನ ಸರ್ವ ಸದಸ್ಯರು ಭಾಗವಹಿಸಿದರು,
ದೊಡ್ಡಬಸಪ್ಪ ಹಕಾರಿ tv8kannada ಕೊಪ್ಪಳ