ದೇಶ
BREAKING : ಪಹಲ್ಗಾರ್ ಉಗ್ರ ದಾಳಿಯಲ್ಲಿ ಗಾಯಗೊಂಡ ಬಾಲಕನನ್ನು ಹೊತ್ತು ಸಾಗಿದ ಕಾಶ್ಮೀರಿ ಯುವಕ : ವಿಡಿಯೋ ವೈರಲ್ | WATCH VIDEO

ಶ್ರೀ ನಗರ : ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡು ದಿಕ್ಕು ತೋಚದೆ ಅಳುತ್ತಿದ್ದ ಬಾಲಕನಿಗೆ ಕಾಶ್ಮೀರಿ ಯುವಕನೊಬ್ಬ ದೇವರಂತೆ ಕೈ ಚಾಚಿದ್ದಾನೆ. ಗಾಯಗೊಂಡ ಬಾಲಕನನ್ನು ಹೆಗಲ ಮೇಲೆ ಹೊತ್ತುಕೊಂಡೇ ಕಿಲೋಮೀಟರ್‌ಗಳಷ್ಟು ದೂರ ಓಡಿ ಅವನ ಜೀವವನ್ನು ಉಳಿಸಿದ್ದಾನೆ.
ಪಹಲ್ಗಾಮ್ ಉಗ್ರ ದಾಳಿಯಲ್ಲಿ ಗಾಯಗೊಂಡ ಯುವಕನನ್ನು ಸಮಯಕ್ಕೆ ಸರಿಯಾಗಿ ಕಾಶ್ಮೀರಿ ಯುವಕ ಆಸ್ಪತ್ರೆಗೆ ದಾಖಲಿಸುವ ಮೂಲಕ ಬಾಲಕನ ಪ್ರಾಣ ಉಳಿಸಿದ್ದಾನೆ.
ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಕಾಶ್ಮೀರದ ಯುವಕನೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಮಗುವನ್ನು ಉಳಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಕ್ಷಸರ ಗುಂಪುಗಳು ಜನರ ಜೀವಗಳನ್ನು ತೆಗೆದುಕೊಳ್ಳುತ್ತಿದ್ದಾಗ, ಒಬ್ಬ ಭಾರತೀಯ ಯುವಕ ಅವರ ವಿರುದ್ಧ ನಿಂತು ಒಬ್ಬ ಹುಡುಗನ ಜೀವವನ್ನು ಉಳಿಸಿದನು. ಈ ಕ್ರಮದಲ್ಲಿ ಎಲ್ಲರೂ ಕಾಶ್ಮೀರಿ ಯುವಕನ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.