ತುಮಕೂರು ವಿಶ್ವವಿದ್ಯಾಲಯದಲ್ಲಿ(Tumkur University) 2021-22ನೇ ಶೈಕ್ಷಣಿಕ ಸಾಲಿಗೆ ಸ್ನಾತಕ ಪದವಿ(Post Graduates) ತರಗತಿಗಳಿಗೆ ಅತಿಥಿ ಉಪನ್ಯಾಸಕ(Guest Lecturers)ರನ್ನು ನೇಮಿಸಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ತುಮಕೂರು ವಿಶ್ವವಿದ್ಯಾಲಯ |
ಹುದ್ದೆಯ ಹೆಸರು | ಅತಿಥಿ ಉಪನ್ಯಾಸಕ |
ಒಟ್ಟು ಹುದ್ದೆಗಳು | 12 |
ವಿದ್ಯಾರ್ಹತೆ | ಸ್ನಾತಕೋತ್ತರ ಪದವಿ, NET, SLET, Ph.D |
ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 24/10/2021 |
ಅರ್ಜಿ ಸಲ್ಲಿಸಲು ವೆಬ್ಸೈಟ್ | www.tumkuruniversity.ac.in |
ಯಾವ ವಿಷಯಗಳಿಗೆ ಅತಿಥಿ ಉಪನ್ಯಾಸಕರ ನೇಮಕ?
ತುಮಕೂರು ವಿವಿಯಲ್ಲಿ ಈ ವಿಯಷಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತದೆ.
- ಕನ್ನಡ
- ಇಂಗ್ಲಿಷ್
- ಇತಿಹಾಸ
- ವಾಣಿಜ್ಯಶಾಸ್ತ್ರ
- ಸಮಾಜಕಾರ್ಯ
- ರಸಾಯನಶಾಸ್ತ್ರ
- ಗಣಿತತಾಸ್ತ್ರ
- ಸಸ್ಯಶಾಸ್ತ್ರ
- ಪ್ರಾಣಿಶಾಸ್ತ್ರ
- ಗಣಕಯಂತ್ರ ವಿಜ್ಞಾನ
- ವಿದ್ಯುನ್ಮಾನ
- ಸೂಕ್ಷ್ಮಜೀವಿಶಾಸ್ತ್ರ
- ಭೌತಶಾಸ್ತ್ರ
- ಜೈವಿಕ ತಂತ್ರಜ್ಞಾನ