ಕ್ರೈಂ

JK Attack: “ಪತಿಯನ್ನಷ್ಟೇ ಯಾಕೆ ಕೊಂದೆ, ನನ್ನನ್ನೂ ಕೊಂದುಬಿಡು”- ಉಗ್ರನಿಗೆ ಮಹಿಳೆ ಛೀಮಾರಿ…; “ಹೋಗಿ ಮೋದಿಗೆ ಹೇಳು”- ಉಗ್ರ; ಪ್ಯಾಂಟ್ ಬಿಚ್ಚಿಸಿ ಧರ್ಮ ಚೆಕ್ ಮಾಡಿದ ನೀಚರು!

ಶ್ರೀನಗರ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಕ್ಕೆ ತೆರಳಿದ್ದವರ ಮೇಲೆ ಭಯೋತ್ಪಾದಕ ದಾಳಿ ನಡೆದಿದ್ದು, ಈ ಪೈಕಿ ಶಿವಮೊಗ್ಗದ ಮಂಜುನಾಥ್ ಉಗ್ರನ ದಾಳಿಗೆ ಸಾವನ್ನಪ್ಪಿದ್ದಾರೆ.

ಮಂಜುನಾಥ್ ಅವರ ಮೇಲೆ ಗುಂಡಿನ ದಾಳಿ ನಡೆಸುವುದಕ್ಕೂ ಮುನ್ನ ಉಗ್ರ ಯಾವ ಧರ್ಮ ಎಂದು ಪ್ರಶ್ನಿಸಿದ್ದು, ಬಳಿಕ ಪಕ್ಕದಲ್ಲೇ ನಿಂತು ತಲೆಗೆ ಗುಂಡು ಹಾರಿಸಿ ಕೊಂದಿದ್ದಾನೆ.

ಉಗ್ರನ ಕೃತ್ಯದ ಭೀಕರತೆಯನ್ನು ಮಾಧ್ಯಮಗಳೊಂದಿಗೆ ಹೇಳಿಕೊಂಡಿರುವ ಮೃತ ಮಂಜುನಾಥ್ ಪತ್ನಿ ಪಲ್ಲವಿ ” ನನ್ನ ಪತಿಯ ಕೊಂದ ಉಗ್ರನ ಬಳಿ ನನ್ನ ಪತಿಯನ್ನಷ್ಟೇ ಏಕೆ ಕೊಂದೆ? ನನ್ನನ್ನೂ ನನ್ನ ಮಗನನ್ನೂ ಕೊಂದುಬಿಡು ಎಂದು ಛಿ ಮಾರಿ ಹಾಕಿದ್ದಾರೆ. ಇದಕ್ಕೆ ತಣ್ಣಗೆ ಉತ್ತರಿಸಿರುವ ಉಗ್ರ ಹೋಗಿ ಇದನ್ನು ಮೋದಿಗೆ ಹೇಳು, ನಿಮ್ಮಿಬ್ಬರನ್ನೂ ಜೀವ ಸಹಿತ ಬಿಡುತ್ತಿದ್ದೇನೆ ಎಂದು ಹೇಳಿ ಪರಾರಿಯಾಗಿದ್ದಾನೆ” ಎಂದು ಹೇಳಿದ್ದಾರೆ.

ವ್ಯಾಪಕ ಖಂಡನೆ, ಕರ್ನಾಟಕದಿಂದ ಕಾಶ್ಮೀರಕ್ಕೆ ತಂಡ

ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರ ದಾಳಿಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ರಾಜಕಾರಣಿಗಳು ಖಂಡಿಸಿದ್ದಾರೆ. ಘಟನೆಯ ಬಗ್ಗೆ ವಿವರ ಕೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪರಿಸ್ಥಿತಿ ಅವಲೋಕಿಸಲು ಸ್ವತಃ ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಮಧ್ಯೆ ಕರ್ನಾಟಕದ ಪ್ರವಾಸಿ ಮಂಜುನಾಥ್ ಅವರ ಪಾರ್ಥಿವ ಶರೀರವನ್ನು ರಾಜ್ಯಕ್ಕೆ ವಾಪಸ್ ಕರೆತರಲು ಹಾಗೂ ಉಳಿದ ಕನ್ನಡಿಗರನ್ನು ಸುರಕ್ಷಿತವಾಗಿ ವಾಪಸ್ ಕರೆತರುವುದಕ್ಕಾಗಿ ರಾಜ್ಯದಿಂದ ತಂಡವೊಂದು ಕಾಶ್ಮೀರಕ್ಕೆ ತೆರಳಲಿದೆ.

Related Articles

Leave a Reply

Your email address will not be published. Required fields are marked *

Back to top button