ರಾಜ್ಯಸುದ್ದಿ

ಸೋಲಿನ ನಂತರ ಸುದ್ದಿಗೋಷ್ಠಿಯಲ್ಲಿ ಪಾಕ್ ಪತ್ರಕರ್ತನ ವಿರುದ್ಧ ಕೊಹ್ಲಿ ಕೆಂಡಾಮಂಡಲ..!

ದುಬೈ: ಪಾಕಿಸ್ತಾನ(Pakistan)ದ ವಿರುದ್ಧ ಆಡಿದ ವಿಶ್ವಕಪ್ (T20 World Cup) ಪಂದ್ಯದ ಸೋಲಿನ ಬಳಿಕ ಟೀಂ ಇಂಡಿಯಾ (Team India)ನಾಯಕ ವಿರಾಟ್ ಕೊಹ್ಲಿ (Virat Kohli) ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಪಾಕಿಸ್ತಾನದ ಪತ್ರಕರ್ತ ಕೇಳಿದ ಪ್ರಶ್ನೆಗೆ ಕೆಂಡಮಂಡಲರಾಗಿ ಮರು ಪ್ರಶ್ನೆ ಮಾಡಿದರು. ಪಾಕ್ ಪತ್ರಕರ್ತ ಸುದ್ದಿಗೋಷ್ಠಿಯಲ್ಲಿ ಇಶಾನ್ ಕಿಶಾನ್ ಮತ್ತು ರೋಹಿತ್ ಶರ್ಮಾ (Rohit Sharma) ಕುರಿತಾಗಿ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಕೋಪಗೊಂಡು ವಿರಾಟ್ ಕೊಹ್ಲಿ, ಮರು ಪ್ರಶ್ನೆ ಹಾಕಿದರು. ವಿಶ್ವಕಪ್ ಮೊದಲ ವಾರ್ಮ್ ಅಪ್ ಪಂದ್ಯ ಮತ್ತು ಐಪಿಎಲ್(IPL)ನಲ್ಲಿ ಇಶಾನ್ ಕಿಶಾನ್ (Ishan Kishan) ಅತ್ಯಾಕರ್ಷಕ ಬ್ಯಾಟಿಂಗ್ ಹೆಚ್ಚು ರನ್ ಕಲೆ ಹಾಕಿದ್ದರು. ಪತ್ರಕರ್ತ ಕೇಳಿದ ಪ್ರಶ್ನೆಗೆ ವಿರಾಟ್ ಕೊಹ್ಲಿ ನೀಡಿದ ಉತ್ತರ ಇಲ್ಲಿದೆ

ಪ್ರಶ್ನೆ: ಮುಂದಿನ ಮ್ಯಾಚ್ ನಲ್ಲಿ ರೋಹಿತ್ ಶರ್ಮಾ ಬದಲಾಗಿ ಇಶಾನ್ ಕಿಶಾನ್ ಆಡ್ತಾರಾ?

ವಿರಾಟ್ ಕೊಹ್ಲಿ: ಟಿ20 ಟೀಂನಿಂದ ರೋಹಿತ್ ಶರ್ಮಾ ಅವರನ್ನು ಕೈ ಬಿಡಬೇಕೆಂದು ನೀವು ಇಷ್ಟಪಡ್ತೀರಾ? ನಿಮಗೆ ವಿವಾದದ ಮಾತುಗಳು ಬೇಕಿದ್ರೆ ನನನ್ನು ಕೇಳಬಹುದು. ನಾನು ನಿಮಗೆ ಅದೇ ರೀತಿಯಲ್ಲಿ ಉತ್ತರ ನೀಡುತ್ತೇನೆ. (ಈ ವೇಳೆ ತಮ್ಮ ತಲೆ ಮೇಲೆ ಕೈ ಇಟ್ಟು ಕೊಹ್ಲಿ  ವ್ಯಂಗ್ಯವಾಗಿ ನಗಲಾರಂಭಿಸಿದರು)

ಪ್ರಶ್ನೆ: ಇವತ್ತು ಪಾಕಿಸ್ತಾನ ಎಲ್ಲ ವಿಷಯಗಳಲ್ಲಿಯೂ ಚೆನ್ನಾಗಿ ಅಡಿದೆ ಎಂದು ನಿಮಗೆ ಅನ್ನಿಸುತ್ತದೆಯೇ?

ವಿರಾಟ್ ಕೊಹ್ಲಿ: ನಮ್ಮ ತಂಡ ಪ್ರತಿಯೊಂದು ತಂಡವನ್ನು ಗೌರವದಿಂದ ಕಾಣುತ್ತದೆ. ಪಾಕಿಸ್ತಾನ ತಂಡ ನಮಗಿಂತ ಚೆನ್ನಾಗಿ ಆಡಿದರಲ್ಲಿ ಯಾವುದೇ ಅನುಮಾನ ಇಲ್ಲ. ಯಾವುದೇ ತಂಡಗಳು ಸುಲಭವಾಗಿ 10 ವಿಕೆಟ್ ಅಂತರದಲ್ಲಿ ಗೆಲ್ಲೋದು ಸುಲಭದ ಮಾತಲ್ಲ. ಅವರ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕು.

Related Articles

Leave a Reply

Your email address will not be published. Required fields are marked *

Back to top button