ಇತ್ತೀಚಿನ ಸುದ್ದಿ

ಮಂಗಲ ಹೊಸೂರು ಗ್ರಾಮದ ಗಾನಕಟ್ಟೆ ಕೆರೆ ಕಲುಷಿತ: ಕೆಟ್ಟ ನೀರು ತೆರವಿಗೆ ಜನರ ಒತ್ತಾಯ……

ಚಾಮರಾಜ ನಗರ : ತಾಲೂಕಿನ ಮಂಗಲ ಹೊಸೂರು ಗ್ರಾಮದಲ್ಲಿದೆ ಗಾನಕಟ್ಟೆ ಕೆರೆ ಯಲ್ಲಿ ಅನೇಕ ವರ್ಷಗಳಿಂದ ಕಸ- ಕಡ್ಡಿ ಹಾಗೂ ತ್ಯಾಜ್ಯ ತುಂಬಿಕೊಂಡಿದೆ. ಇದರಿಂದಾಗಿ, ಇಡೀ ಕೆರೆಯು ಕಲುಷಿತವಾಗಿದ್ದು ದುರ್ವಾಸನೆ ಬೀರುತ್ತಿದೆ. ಕಲುಷಿತ ಸಮಸ್ಯೆಯ ಜೊತೆಗೆ ಸೊಳ್ಳೆಗಳ ಕಾಟವೂ ಅಧಿಕವಾಗಿದೆ. ಸುತ್ತಲಿನ ಗ್ರಾಮಸ್ಥರು ಕೆರೆಯನ್ನು ಸ್ವಚ್ಛಗೊಳಿಸುವಂತೆ ಅನೇಕ ಬಾರಿ ಮಂಗಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಕೆರೆಯನ್ನು ಸ್ವಚ್ಛಗೊಳಿಸುವಂತೆ ಮನವಿ ಮಾಡಿದರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಉಡಾಫೆ ಉತ್ತರ ನೀಡಿ ನಿರ್ಲಕ್ಷ ತೋರುತ್ತಿದ್ದಾರೆ ಸೊಳ್ಳೆಗಳ ಕಾಟ ಹೆಚ್ಚಾಗಿರುವುದರಿಂದ ಕೆರೆಯ ಸಮೀಪವಿರುವ ಮನೆಗಳಲ್ಲಿರುವ ನಿವಾಸಿಗಳು ರಾತ್ರಿ ವೇಳೆ ಸರಿಯಾಗಿ ನಿದ್ರಿಸಲು ಸಾಧ್ಯವಾಗುತ್ತಿಲ್ಲ,
ಕೆರೆಯಲ್ಲಿ ಕಲುಷಿತ ನೀರು ಸಂಗ್ರಹಣೆಯಾಗಿ ಪಾಚಿ ಕಟ್ಟಿ ಗಿಡ ಗಂಟಿಗಳು ಕೊಳೆತು ಜತೆಗೆ ಕಸ ಕಡ್ಡಿ ಪ್ಲಾಸ್ಟಿಕ್‌ ತ್ಯಾಜ್ಯ ತುಂಬಿ ಅನೈರ್ಮಲ್ಯ ಉಂಟಾಗಿ ಮೂರು ನಾಲ್ಕು ವರ್ಷಗಳಿಂದಲೂ ಒಂದೇ ಕಡೆ ಕಲುಷಿತ ನೀರು ಸಂಗ್ರಹಣೆಯಾಗಿ ಗಬ್ಬುನಾರುತ್ತಿದೆ. ಕ್ರಿಮಿಕೀಟಗಳ ಆವಾಸ ಸ್ಥಾನವಾಗಿ ಸೊಳ್ಳೆಗಳ ಕಾಟ ವಿಪರೀತವಾಗಿರುವುದರಿಂದ ಕೆರೆಯ ಅಕ್ಕಪಕ್ಕದಲ್ಲಿರುವ ನಿವಾಸಿಗಳು ರಾತ್ರಿ ವೇಳೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ದುರ್ವಾಸನೆಗೆ ಮೂಗು ಮುಚ್ಚಿ ವಾಸಿಸುವಂತಾಗಿದೆ ಅಲ್ಲದೆ
ಕೆರೆ ಪಕ್ಕದಲ್ಲೇ ಕೊರೆಸಿರುವ ಕೊಳವೆ ಬಾವಿಯಿಂದ ಗ್ರಾಮದ ಬಡಾವಣೆಗೆ ನೀರು ಪೂರೈಕೆಯಾಗುತ್ತಿದೆ. ಇದರಿಂದ ಕುಡಿಯುವ ನೀರು ಕೂಡ ಕಲುಷಿತಗೊಂಡಿದ್ದು ಬಡಾವಣೆಯ ಜನತೆ ರೋಗ ರುಜಿನಗಳಿಗೆ ತುತ್ತಾಗುವಂತಾಗಿದೆ.


ಆದರಿಂದ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ಏನಾದರೂ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಮುಖ್ಯ ಭಾಗದಲ್ಲಿರುವ ಕೆರೆಯನ್ನು ಸ್ವಚ್ಛಗೊಳಿಸಿ ಗ್ರಾಮದ ನಿವಾಸಿಗಳಿಗೆ ಅನುಕೂಲಕರಪಿಸಬೇಕೆಂದು ಗ್ರಾಮದ ಹಿರಿಯರಾದ ಮಲ್ಲಣ್ಣ,ಹಿರಿಯ ಮುಖಂಡರಾದ ಶಿವಣ್ಣ ಮುಖಂಡರಾದ ಕುಮಾರ್, ಆಟೋ ನಾಗೇಂದ್ರ ಮತ್ತು ಎಚ್ ಎಮ್ ಶಿವಣ್ಣ ಹೊಸೂರು ಗ್ರಾಮದ ಮುಖಂಡರು ಒತ್ತಾಯಿಸಿದ್ದಾರೆ.

ವರದಿ. ರಾಜಶೇಖರ ಎಂ‌ ಕೊಮಾರನಪುರ
Tv8 ನ್ಯೂಸ್ ಕನ್ನಡ
ಚಾಮರಾಜನಗರ

Related Articles

Leave a Reply

Your email address will not be published. Required fields are marked *

Back to top button