ಕ್ರೀಡೆ

IPL Debut ಪಾದಾರ್ಪಣೆ ಪಂದ್ಯದಲ್ಲಿ ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ

ಜೈಪುರ್: ಐಪಿಎಲ್ 2025 ರ 36ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೆ ರಾಜಸ್ಥಾನ ರಾಯಲ್ಸ್ ತಂಡದಲ್ಲಿ14 ವರ್ಷದ ವೈಭವ್ ಸೂರ್ಯವಂಶಿ ಅನ್ನೋ ಬಾಲಕನಿಗೆ ಅವಕಾಶ ನೀಡಿದೆ.

ಈ ಮೂಲಕ ಅವರು ಐಪಿಎಲ್‌ನಲ್ಲಿ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಸೃಷ್ಟಿಸಿದ್ದಾರೆ.

ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ತಮ್ಮ ಮೊದಲ ಪಂದ್ಯವನ್ನು 14 ವರ್ಷ ಮತ್ತು 23 ದಿನಗಳಲ್ಲಿ ಆಡಿದರು. ಅವರು ಪ್ರಯಾಸ್ ರೇ ಬರ್ಮನ್ ಅವರ ದಾಖಲೆಯನ್ನು ಮುರಿದರು. ಬರ್ಮನ್ ಅವರು 2019 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವ ಮೂಲಕ 16 ವರ್ಷ 157 ದಿನಗಳಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು.

ಇನ್ನು ವೈಭವ್ ಸೂರ್ಯವಂಶಿ ಯವರು ಪಂದ್ಯದ ಮೊದಲ ಎಸೆತ ದಲ್ಲಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಇಡೀ ವಿಶ್ವದ ಗಮನ ಸೆಳೆದರು,

ರಾಜಸ್ಥಾನ ರಾಯಲ್ಸ್ ತಂಡದ ನಿಯಮಿತ ನಾಯಕ ಸಂಜು ಸ್ಯಾಮ್ಸನ್ ಗಾಯದ ಕಾರಣ ಈ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಅನುಪಸ್ಥಿತಿಯಲ್ಲಿ ರಿಯಾನ್ ಪರಾಗ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಇತ್ತ ಸಂಜು ಸ್ಯಾಮ್ಸನ್ ಬದಲಿಗೆ ವೈಭವ್ ಆಡುವ ಅವಕಾಶವನ್ನು ಪಡೆದಿದ್ದಾರೆ. ಆದರೆ, ವೈಭವ್ ಅವರನ್ನು ಆರಂಭಿಕ ಹನ್ನೊಂದರಲ್ಲಿ ಸೇರಿಸಲಾಗಿಲ್ಲ. ಅವರನ್ನು ಇಂಪ್ಯಾಕ್ಟ್ ಆಟಗಾರರ ಪಟ್ಟಿಯಲ್ಲಿ ಇರಿಸಲಾಗಿದೆ.

ಐಪಿಎಲ್‌ಗೆ ಪಾದರ್ಪಣೆ ಮಾಡಿದ ಕಿರಿಯ ಆಟಗಾರರು

ವೈಭವ ಸೂರ್ಯವಂಶಿ- 14 ವರ್ಷ 23 ದಿನ, 2025*

ಪ್ರಯಾಸ ರೆ ಬರ್ಮನ್- 16 ವರ್ಷ 157 ದಿನ, 2019

ಮುಜೀಬ್ ಉರ್ ರಹಮಾನ್- 17 ವರ್ಷ 11 ದಿನ, 2018

ರಿಯಾನ್ ಪರಾಗ್- 17 ವರ್ಷ 152 ದಿನ, 2019

ಪ್ರದೀಪ ಸಂಗವಾನ್- 17 ವರ್ಷ 179 ದಿನ, 2008

ವರದಿ: ಮೊಹಮ್ಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button