DC vs RR IPL 2025: ಸ್ಟಾರ್ಕ್ ಯಾರ್ಕರ್ ಮ್ಯಾಜಿಕ್: ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೂಪರ್ ಓವರ್ ನಲ್ಲಿ ಭರ್ಜರಿ ಗೆಲುವು

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಣ ರೋಚಕ ಪಂದ್ಯ ಸೂಪರ್ ಓವರ್‌ನತ್ತ ಮುಖ ಮಾಡಿತು. ಈ ರೋಚಕ ಪಂದ್ಯದಲ್ಲಿ ಉಭಯ ತಂಡಗಳು ನಿಗದಿತ ಓವರ್‌ಗಳಲ್ಲಿ 188 ರನ್ ಕಲೆ ಹಾಕಿದವು. ಪರಿಣಾಮ ಈ ಪಂದ್ಯ ಸೂಪರ್ ಓವರ್ ನತ್ತ ಮುಖ ಮಾಡಿತು. ಈ ವೇಳೆ ರಾಜಸ್ಥಾನ ಮೊದಲು ಬ್ಯಾಟ್ ಮಾಡಿ 11 ರನ್ ಸಿಡಿಸಿತು.
ಆರ್‌ಆರ್ ನೀಡಿದ್ದ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ಮೆಟ್ಟು ನಿಂತಿತು. ಪರಿಣಾಮ ಸೂಪರ್ ಓವರ್‌ನಲ್ಲಿ ಡೆಲ್ಲಿ ಅಮೋಘ ಜಯ ದಾಖಲಿಸಿತು.
ಡೆಲ್ಲಿ ಕ್ಯಾಪಿಟಲ್ಸ್ ಪರ ಸೂಪರ್ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ ಮಾಡಲು ಮುಂದಾದರು. ರಾಜಸ್ಥಾನ ಪರ ಶಿಮ್ರೋನ್ ಹೆಟ್ಮೆಯರ್ ಹಾಗೂ ರಿಯಾನ್ ಪರಾಗ್ ಇನಿಂಗ್ಸ್ ಆರಂಭಿಸಲು ಬಂದ್ರು. ಸೂಪರ್ ಓವರ್‌ನ ಮೊದಲ ಎಸೆತ ಡಾಟ್ ಆಯಿತು. ಎರಡನೇ ಎಸೆತದಲ್ಲಿ ಶಿಮ್ರೊನ್ ಹೆಟ್ಮೆಯರ್ ಬೌಂಡರಿ ಬಾರಿಸಿದರು. ಮೂರನೇ ಎಸೆತದಲ್ಲಿ ಹಿಟ್ಮೆಯರ್ ಸಿಂಗಲ್ ಪಡೆದು, ರಿಯನ್ ಪರಾಗ್ ಗೆ ಸ್ಟ್ರೈಕ್ ನೀಡಿದ್ರು. ನಾಲ್ಕನೇ ಎಸೆತದಲ್ಲಿ ರಿಯಾನ್ ಪರಾಗ್ ಬೌಂಡರಿ ಬಾರಿಸಿದರು. ಈ ವೇಳೆ ನಾಲ್ಕನೇ ಎಸೆತ ನೋಬಾಲ್ ಆಯಿತು. ಮುಂದಿನ ಎಸೆತದಲ್ಲಿ ಇಲ್ಲದ ರನ್ ಕದಿಯಲು ಹೋಗಿ ಪರಾಗ್ ಔಟ್ ಆದರು. ಐದನೇ ಎಸೆತದಲ್ಲಿ ಶಿಮ್ರೋನ್ ಹೆಟ್ಮೆಯರ್ ಎರಡು ರನ್ ಕದಿಯಲು ಹೋದ್ರು. ಯಶಸ್ವಿ ಜೈಸ್ವಲ್ ಔಟ್ ಆದರು. ಪರಿಣಾಮ ರಾಜಸ್ಥಾನ 11 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು.
ಕೆಎಲ್ ರಾಹುಲ್ ಹಾಗೂ ಸ್ಟಬ್ಸ್ ಪ್ಯಾಡ್ ಕಟ್ಟಿಕೊಂಡು ಬ್ಯಾಟ್ ಮಾಡಲು ಬಂದ್ರು. ರಾಜಸ್ಥಾನ ಪರ ಸಂದೀಪ್ ಶರ್ಮಾ ಬೌಲ್ ಮಾಡಲು ಮುಂದಾದರು. ಮೊದಲ ಎಸೆತದಲ್ಲಿ 2 ರನ್ ಮಾಡಿದ ಕೆಎಲ್ ಎರಡನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಮೂರನೇ ಎಸೆತದಲ್ಲಿ ಸಿಂಗಲ್ ಪಡೆದುಕೊಂಡರು. ಸ್ಟಬ್ಸ್ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸಿ ಮಿಂಚಿದರು. ಈ ಗೆಲುವಿನೊಂದಿಗೆ ಡೆಲ್ಲಿ ಆಡಿದ ಆರು ಪಂದ್ಯಗಳಲ್ಲಿ ಐದು ಜಯ, ಒಂದು ಸೋಲು ಕಂಡಿದ್ದು, ಹತ್ತು ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 188 ರನ್ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ರಾಜಸ್ಥಾನ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 188 ರನ್ ಕಲೆ ಹಾಕಿ ಸೂಪರ್ ಓವರ್‌ನತ್ತ ಮುಖ ಮಾಡಿತು.
ಭರ್ಜರಿ ಆರಂಭ
ರಾಜಸ್ಥಾನ ರಾಯಲ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ಸಂಜು ಸ್ಯಾಮ್ಸನ್ ಹಾಗೂ ಯಶಸ್ವಿ ಜೈಸ್ವಾಲ್ ಜೋಡಿ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 60 ರನ್ ಬಾರಿಸಿದ್ದಾಗ ಸಂಜು ಸ್ಯಾಮ್ಸನ್ ರಿಟೈಡ್ ಹರ್ಟ್ ಆದ್ರು. ಇವರು ಮೈದಾನದಿಂದ ಹೊರ ನಡೆದಂತೆ ರಿಯಾನ್ ಪರಾಗ್ ಅವರು ಸಹ ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು. ಉತ್ತಮ ಲಯದಲ್ಲಿ ಕಂಡು ಬಂದಿದ್ದ ಯಶಸ್ವಿ ಜೈಸ್ವಾಲ್ 37 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ 51 ರನ್ ಸಿಡಿಸಿದರು.
ರಾಣಾ ಅರ್ಧಶತಕ
ಮಧ್ಯಮ ಕ್ರಮಾಂಕದಲ್ಲಿ ನಿತೀಶ್ ರಾಣಾ ಸಹ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಇವರು 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 51 ಸಿಡಿಸಿದರು. ಧ್ರುವ್ ಜುರೇಲ್ 26 ರನ್ ಬಾರಿಸಿ ಔಟ್ ಆದರು. ಶಿಮ್ರೋನ್ ಹೆಟ್ಮೆಯರ್ ಅಜೇಯ 15 ರನ್ ಬಾರಿಸಿದರು.
ಸ್ಟಾರ್ಕ್ ಮ್ಯಾಜಿಕ್
ಕೊನೆಯ ಓವರ್‌ನಲ್ಲಿ ರಾಜಸ್ಥಾನ ಗೆಲುವಿಗೆ 9 ರನ್ ಅವಶ್ಯಕತೆ ಇತ್ತು. ಆಗ ಮಿಚೆಲ್ ಸ್ಟಾರ್ಕ್ ಬ್ಯಾಕ್ ಟು ಬ್ಯಾಕ್ ಯಾರ್ಕರ್ ಎಸೆದು ಪಂದ್ಯವನ್ನು ಟೈ ಮಾಡಿದರು. ತಮ್ಮ ಅನುಭವವನ್ನು ಬಳಸಿಕೊಂಡು ಬೌಲ್ ಮಾಡಿದ ಮಿಚೆಲ್ ಸ್ಟಾರ್ಕ್ ಬ್ಯಾಕ್ ಟು ಬ್ಯಾಕ್ ಯಾರ್ಕರ್‌ಗಳನ್ನು ಪ್ರಯೋಗಿಸಿದರು. ಈ ಹಂತದಲ್ಲಿ 9 ರನ್ ನೀಡದಂತೆ ತಡೆದು ಪಂದ್ಯದ ಹೀರೋ ಆದ್ರು. ಕೊನೆಯ ಓವರ್‌ನಲ್ಲಿ ಡೆಲ್ಲಿ 8 ರನ್ ನೀಡಿದ್ದರಿಂದ ಪಂದ್ಯ ಸೂಪರ್ ಓವರ್‌ನತ್ತ ಮುಖಮಾಡಿತು. ಈ ಓವರ್‌ನ ಐದನೇ ಎಸೆತದಲ್ಲಿ ಎರಡು ರನ್ಪಡೆಯುವ ಅವಕಾಶ ಇದ್ರೂ ಸಹ ಜುರೇಲ್ ಪಡೆಯದೇ ಸಿಂಗಲ್ ಪಡೆದಿದ್ದು, ಪಂದ್ಯದ ದೊಡ್ಡ ತಿರುವು.
ಸಂಘಟಿತ ಬ್ಯಾಟಿಂಗ್
ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಯಾವೊಬ್ಬ ಬ್ಯಾಟರ್ ದೊಡ್ಡ ಸ್ಕೋರ್ ಮಾಡದೇ ಇದ್ದರೂ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ಡೆಲ್ಲಿ ತಂಡದ ಪರ ಅಭಿಷೇಕ್ ಪೊರೆಲ್ 49, ಕೆಎಲ್ ರಾಹುಲ್ 38, ಸ್ಟಬ್ಸ್ ಅಜೇಯ 34, ಅಕ್ಷರ್ ಪಟೇಲ್ 34, ಆಶುತೋಶ್ ಶರ್ಮಾ ಅಜೇಯ 15, ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಮೋಹಮ್ಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು
