ಇತ್ತೀಚಿನ ಸುದ್ದಿ
ಸಿಡಿಲು ಬಡಿದು ಎರಡು ಆಕಳು ಸಾವು

ಯಲಬುರ್ಗಾ: ಬುಧವಾರ ಸಂಜೆ ತಾಲೂಕಿನ ಕುದರಿಕೋಟಗಿ ಗ್ರಾಮದ ರೈತ ಶಂಕ್ರಪ್ಪ ಸತ್ಯಪ್ಪ ಚನಪನಹಳ್ಳಿ ಎನ್ನುವವರಿಗೆ ಸೇರಿದ ಎರಡು ಆಕಳುಗಳು ಸಿಡಿಲಿಗೆ ಬಲಿಯಾಗಿವೆ.

ಗ್ರಾಮಕ್ಕೆ ಹೊಂದಿಕೊಂಡು ಇರುವ ಜಮೀನಿನಲ್ಲಿ ರೈತ ತನ್ನ ಎರಡು ಆಕಳುಗಳನ್ನು ಮರದ ಕೆಳಗಡೆ ಕಟ್ಟಿ ಹಾಕಿದ್ದ ಸಂಜೆ ಬಡಿದ ಸಿಡಿಲಿಗೆ ಎರಡು ಆಕಳುಗಳು ಸ್ಥಳದಲ್ಲಿಯೇ ಮೃತಪಟ್ಟಿವೆ.
ಅಧಿಕಾರಿಗಳ ಬೇಟಿ: ವಿಷಯ ತಿಳಿಯುತ್ತಿದ್ದಂತೆ ಯಲಬುರ್ಗಾ ಪೋಲಿಸ್ ಇಲಾಖೆ,ಕಂದಾಯ ಇಲಾಖೆ ಹಾಗೂ ಪಶು ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ರೈತನಿಗೆ ಸಾಂತ್ವಾನ ಹೇಳಿ ಸರಕಾರಕ್ಕೆ ವರದಿ ಸಲ್ಲಿಸಲಾಗುವದು ಎಂದರು.