ದೇಶ
Holy Month: ಇಂದಿನಿಂದ ರಮ್ಜಾನ್ ಮಾಸದ ಉಪವಾಸ ಆರಂಭ

ರಾಜ್ಯವ್ಯಾಪಿ ಇಂದಿನಿಂದ ರಮ್ಜಾನ್ ಮಾಸದ ಉಪವಾಸ ಆರಂಭವಾಗಲಿದೆ ಎಂದು ರಾಜ್ಯ ಚಂದ್ರದರ್ಶನ ಸಮಿತಿಯ ಸಂಚಾಲಕ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಮ್ಜಾನ್ ಮಾಸದ ಚಂದ್ರ ದರ್ಶನವು ಶುಕ್ರವಾರ ಗೋಚರಿಸದೆ ಇರುವುದರಿಂದ
ರಾಜ್ಯಾದ್ಯಂತ ಉಪವಾಸ ವ್ರತ ಆಚರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಶುಕ್ರವಾರ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕೇಂದ್ರ ಕಚೇರಿಯಲ್ಲಿ ಅಮೀರೆ ಶರೀಅತ್ ಮೌಲಾನಾ ಸಗೀರ್ಅಹ್ಮದ್ ಖಾನ್ ರಶಾದಿ ಅಧ್ಯಕ್ಷತೆಯಲ್ಲಿ ಈ ಬಗ್ಗೆ ಸಭೆ ನಡೆಸಲಾಯಿತು. ಸಭೆಯಲ್ಲಿ ರಾಜ್ಯ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ಚಂದ್ರ ದರ್ಶನದ ಬಗ್ಗೆ ಲಭ್ಯವಾದ ಮಾಹಿತಿ ಕುರಿತು ಚರ್ಚೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.