ಇತ್ತೀಚಿನ ಸುದ್ದಿ
ಮಸ್ಕಿ ಬಿಜೆಪಿ ಪಕ್ಷದ ಕಛೇರಿಯಲ್ಲಿಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ.

ಮಸ್ಕಿ : ಅಂಬೇಡ್ಕರ್ ಕಾರ್ಮಿಕರು, ಶೋಷಿತರು, ಮಹಿಳೆಯರು ಸೇರಿ ದೇಶದ ಎಲ್ಲ ವರ್ಗಗಳ ಏಳೆಗಾಗಿ ದುಡಿದವರು ಎಂದು ಶರಣಬಸವ ಸೊಪ್ಪಿಮಠ ರವರು
ಹೇಳಿದರು.
ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಾಲಯ ದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿ ಕಾರ್ಯಕ್ರಮ ದಲ್ಲಿ
ಮಾತನಾಡಿ, ಸಂವಿಧಾನವನ್ನು ರಚಿಸುವಾಗ ಅನೇಕ ದೇಶಗಳ ಲಿಖಿತ ಸಂವಿಧಾನವನ್ನು ಅಧ್ಯಯನ ಮಾಡಿ ಸದೃಢ ಸಂವಿಧಾನ ನಮಗೆ ನೀಡಿದ್ದಾರೆ ಎಂದರು.
ಈ ವೇಳೆ, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ,
ಪುರಸಭೆ ಸಾಯಿ ಸಮಿತಿ ಅಧ್ಯಕ್ಷ ಚೇತನ ಪಾಟೀಲ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ದುರಗಪ್ಪ ಗುಡಗಲದಿನ್ನಿ, ಪುರಸಭೆ ಸದಸ್ಯರಾದ ರವಿಗೌಡ ಪೊಲೀಸ್ ಪಾಟೀಲ,ಸುರೇಶ್ ಹರಸೂರು,ಮಲ್ಲಿಕಾರ್ಜುನ ಬ್ಯಾಳಿ,
ಗಂಗಾಧರ ಕಂಬಾಳಿಮಠ,ಮಲ್ಲಯ್ಯ ಕುರುಬರು, ಬಸವರಾಜ ಬುಕ್ಕಣ್ಣ,ಬಸವರಾಜ ಇರಕಲ್,ಮೌನೇಶ್ ಮೆದಿಕಿನಾಳ, ಅಮರೇಶ ಸಾಲಿಮಠ,ಸೇರಿದಂತೆ
ಇತರರು ಇದ್ದರೂ.