ಇತ್ತೀಚಿನ ಸುದ್ದಿ
ಮಸ್ಕಿ ಅಮರೇಶ ನಾಯ್ಕ ಅವರಿಗೆ ಛಾಯಾ ಶ್ರೀ ಪ್ರಶಸ್ತಿ ಪ್ರಧಾನ

ಮಸ್ಕಿ: ಪಟ್ಟಣದ ಹವ್ಯಾಸಿ ಛಾಯಾಗ್ರಹಕ ಅಮರೇಶ ನಾಯ್ಕ ಗಂಗಾಫೋಟೋ ಸ್ಟುಡಿಯೋ ಅವರಿಗೆ ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘ ಬೆಂಗಳೂರಿನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಛಾಯಾ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಹವ್ಯಾಸಿ ಛಾಯಾಗ್ರಹಕರಾದ ಅಮರೇಶ ನಾಯ್ಕ ಇವರು ಗಂಗಾ
ಫೋಟೋ ಸ್ಟುಡಿಯೋ ದಲ್ಲಿ 25 ವರ್ಷಗಳ ಕಾಲ ಫೋಟೋಗ್ರಫಿ ವೃತ್ತಿಯಲ್ಲಿ ತಮ್ಮದೇ ಆದ ಗ್ರಾಮೀಣ ಸೊಗಡು, ಸಮಾಜಿಕ ಕಳಕಳಿಯ ಕುರಿತು ಛಾಯಾಚಿತ್ರ ಗಳನ್ನು ಸೆರೆ ಹಿಡಿದು ಸಾರ್ವಜನಿಕ ರಂಗದಲ್ಲಿ ಅಚ್ಚುಮೆಚ್ಚಿನ ಫೋಟೋಗ್ರಫರ್ ಹಾಗೂ ವಿಡಿಯೋಗ್ರಫರ್ ಎಂದು ಅಮರೇಶ ನಾಯ್ಕ ರವರು
ಹೆಸರು ವಾಸಿ ಆಗಿದ್ದಾರೆ.