IPL 2025: ತವರಿನ ತಂಡದ ವಿರುದ್ಧ ಆರ್ಭಟಿಸಿದ ಯಂಗ್ ಪ್ಲೇಯರ್: ಸನ್‌ಗೆ ಜಯದ “ಅಭಿಷೇಕ

ಸತತ ಸೋಲಿನಿಂದ ಹತಾಶರಾಗಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಶನಿವಾರ ಆರ್ಭಟಿಸಿದೆ. ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಸನ್ ತಂಡದ ಓಪನರ್ ಅಭಿಷೇಕ್ ಶರ್ಮಾ ವೀರಾವೇಶದ ಬ್ಯಾಟಿಂಗ್ ನಡೆಸಿದರು. ಶನಿವಾರ ಅಭಿಷೇಕ್ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು. ತಮ್ಮ ನೈಜ ಶೈಲಿಯ ಬ್ಯಾಟಿಂಗ್ ನಡೆಸಿದ ಅಭಿಷೇಕ್ ಶರ್ಮಾ ಆರೆಂಜ್ ಆರ್ಮಿಗೆ ಹೊಸ ಜೋಶ್ ನೀಡಿದರು.
ಇವರ ಅಮೋಘ ಆಟದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಅಮೋಘ ಆಟದ ಪ್ರದರ್ಶನ ನೀಡಿದ ಸನ್ ಆರ್ಭಟಿಸಿದೆ.
ಸೂಪರ್ ಸಂಡೇಯ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆಯಿತು. ಪಂದ್ಯದಲ್ಲಿ ಟಾಸ್ ಗೆದ್ದು ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ಕಳೆದುಕೊಂಡು 245 ರನ್ ಕಲೆ ಹಾಕಿತು. ಈ ಬೃಹತ್ ಗುರಿ ಚೇಸಿಂಗ್ ಮಾಡಿದ ಹೈದರಾಬಾದ್ ತಂಡ 18.3 ಓವರ್‍ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 247 ರನ್ ಗಳಿಸಿ ಅದ್ಭುತ ಗೆಲುವು ಸಾಧಿಸಿತು. ಹೈದರಾಬಾದ್ ಪರ ಅಭಿಷೇಕ್ ಶರ್ಮಾ ಕೇವಲ 40 ಎಸೆತಗಳಲ್ಲಿ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಹೈದರಾಬಾದ್‌ನಲ್ಲಿ ಶತಕದ ಮಹಾ ಅಭಿಷೇಕ
ಪಂಜಾಬ್ ಕಿಂಗ್ಸ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಭರ್ಜರಿ ಶತಕ ಬಾರಿಸಿದರು. ಅವರು ತಮ್ಮ ಐಪಿಎಲ್ ವೃತ್ತಿಜೀವನದ ಎರಡನೇ ಶತಕ ದಾಖಲಿಸಿದರು. ಅಭಿಷೇಕ್ ಶರ್ಮಾ ಶತಕ ಸಿಡಿಸಿದ ಬಳಿಕ ಮಾಡಿದ ಆಚರಣೆಗೆ ಹೆಚ್ಚಿನ ಪ್ರಶಂಸೆ ವ್ಯಕ್ತವಾಗುತ್ತಿದೆ. ಶತಕ ಪೂರೈಸುತ್ತಿದ್ದಂತೆ ಅಭಿಷೇಕ್ ಶರ್ಮಾ ವಿಶೇಷವಾದದ್ದನ್ನು ಬರೆದ ಸ್ಲಿಪ್ ಅನ್ನು ತೋರಿಸಿದರು. ಸ್ಲಿಪ್‌ನಲ್ಲಿ ಬರೆದದ್ದನ್ನು ಓದಿದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಅಭಿಮಾನಿಗಳು ಸಂತಸಪಟ್ಟಿದ್ದಾರೆ. ಈ ಶತಕ ಆರೆಂಜ್ ಆರ್ಮಿಗಾಗಿ ಎಂದು ಬರೆದಿರುವ ಸ್ಲಿಪ್ ಅನ್ನು ಅಭಿಷೇಕ್ ತೋರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಕೇವಲ 40 ಎಸೆತಗಳಲ್ಲಿ ಶತಕ ಗಳಿಸಿದರು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಪರ ಪ್ರಿಯಾಂಶ್ ಆರ್ಯ ಮತ್ತು ಪ್ರಭಾಸಿಮ್ರಾನ್ ಸಿಂಗ್ ಅಮೋಘ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 66 ರನ್‌ಗಳ ಜೊತೆಯಾಟ ಆಡುವ ಮೂಲಕ ಪಂಜಾಬ್ ತಂಡದ ಇನ್ನಿಂಗ್ಸ್‌ಗೆ ಭದ್ರ ಬುನಾದಿ ಹಾಕಿದರು. ಉತ್ತಮವಾಗಿ ಆಡುತ್ತಿದ್ದ ಪ್ರಿಯಾಂಶ್ ಆರ್ಯ 13 ಎಸೆತಗಳಲ್ಲಿ 36 ರನ್ ಗಳಿಸಿ ಔಟಾದರು. ನಂತರ ನಾಯಕ ಶ್ರೇಯಸ್ಸ್ ಅಯ್ಯರ್ ಜೊತೆಗೂಡಿದ ಪ್ರಭಾಸಿಮ್ರಾನ್ ಸಿಂಗ್ ತಮ್ಮ ಬ್ಯಾಟಿಂಗ್ ವೈಭವವನ್ನು ಮುಂದುವರೆಸಿದರು.
ಹೈದರಾಬಾದ್ ತಂಡದ ಬೌಲರ್ಸ್ ಬೆವರಿಳಿಸಿದ ಪ್ರಭಾಸಿಮ್ರಾನ್ ಸಿಂಗ್ ಅರ್ಧಶತಕದ ಹೊಸ್ತಿಲಲ್ಲಿ ವಿಕೆಟ್ ಕಳೆದುಕೊಂಡರು. ಅವರು 23 ಎಸೆತಗಳಲ್ಲಿ 42 ರನ್ ಗಳಿಸಿದರು. ಇದರ ಮಧ್ಯೆ ಸಿಡಿದೆದ್ದ ಶ್ರೇಯಸ್ ಅಯ್ಯರ್ ಹೈದರಾಬಾದ್ ಬೌಲರ್ಸ್ ಅನ್ನು ತರಾಟೆಗೆ ತೆಗೆದುಕೊಂಡರು.
ಶ್ರೇಯಸ್ ಅಯ್ಯರ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ 36 ಎಸೆತಗಳಲ್ಲಿ ತಲಾ 6 ಬೌಂಡರಿ ಮತ್ತು ಸಿಕ್ಸರ್ ನೆರವಿನಿಂದ 82 ರನ್ ಬಾರಿಸಿ ಔಟಾದರೆ, ಗ್ಲೆನ್ ಮ್ಯಾಕ್ಸ್‌ವೆಲ್ 2 ರನ್ ಮತ್ತು ಶಶಾಂಕ್ ಸಿಂಗ್ 3 ರನ್‌ಗೆ ವಿಕೆಟ್ ಕಳೆದುಕೊಂಡರು. ಕೊನೆಯ ಓವರ್‍ನಲ್ಲಿ ಅಬ್ಬರಿಸಿದ ಮಾರ್ಕಸ್ ಸ್ಟೊಯಿನಿಸ್ ಒಟ್ಟು 26 ರನ್ ಸಿಡಿಸಿದರು. ಇದರೊಂದಿಗೆ ಅವರು 11 ಎಸೆತಗಳಲ್ಲಿ 1 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 34 ರನ್ ಗಳಿಸಿದರು.
ಉಭಯ ತಂಡಗಳ ಪ್ಲೇಯಿಂಗ್-11
ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅನಿಕೇತ್ ವರ್ಮಾ, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಜೀಶನ್ ಅನ್ಸಾರಿ, ಮೊಹಮ್ಮದ್ ಶಮಿ, ಇಶಾನ್ ಮಾಲಿಂಗ.
ಪಂಜಾಬ್ ಕಿಂಗ್ಸ್: ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ಮಾರ್ಕಸ್ ಸ್ಟೊಯಿನಿಸ್, ನೆಹಾಲ್ ವಧೇರಾ, ಗ್ಲೆನ್ ಮ್ಯಾಕ್ಸ್‌ವೆಲ್, ಶಶಾಂಕ್ ಸಿಂಗ್, ಮಾರ್ಕೊ ಜಾನ್ಸೆನ್, ಅರ್ಶ್‌ದೀಪ್ ಸಿಂಗ್, ಲಾಕಿ ಫರ್ಗುಸನ್, ಯುಜ್ವೇಂದ್ರ ಚಹಾಲ್.
ಮೊಹಮ್ಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು