ದರ್ಶನ್ ಅಭಿಮಾನಿಗಳ ಬೆಂಬಲದೊಂದಿಗೆ ಬಿಡುಗಡೆಯಾದ ವಾಮನ 2 ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಗಳಿಸಿದ್ದೆಷ್ಟು?

ಧನ್ವೀರ್ ಹಾಗೂ ರೀಷ್ಮಾ ನಾನಯ್ಯ ನಟನೆಯ ವಾಮನ ಚಿತ್ರ ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಹಾವಳಿಯ ನಡುವೆಯೂ ಬಿಡುಗಡೆಯಾಗಿದೆ. ಸುಡು ಬಿಸಿಲ ಬೇಸಿಗೆ ಹಾಗೂ ಐಪಿಎಲ್ ಹವಾ ನಡುವೆ ಚಿತ್ರ ಬಿಡುಗಡೆ ಮಾಡಬೇಕೆಂದರೆ ತುಸು ಹೆಚ್ಚೇ ಧೈರ್ಯ ಬೇಕು.
ಅಂತಹ ಧೈರ್ಯ ಮಾಡಿರುವ ವಾಮನ ಚಿತ್ರಕ್ಕೆ ದರ್ಶನ್ ಹಾಗೂ ಅವರ ಅಭಿಮಾನಿಗಳ ದೊಡ್ಡ ಬೆಂಬಲವೂ ಇದೆ.
ಅದರಂತೆ ಚಿತ್ರ ಬಿಡುಗಡೆಯ ದಿನ ಮೊದಲ ಶೋ ರಾಜ್ಯದ ಪ್ರಮುಖ ನಗರಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ಗುರುವಾರ ಬಿಡುಗಡೆಯಾದ ಚಿತ್ರವನ್ನು ದರ್ಶನ್ ಅಭಿಮಾನಿಗಳು ತಮ್ಮ ನಟನ ಚಿತ್ರದ ಹಾಗೆ ಸಂಭ್ರಮಿಸಿದರು.ಇನ್ನು ಸಿನಿಮಾ ನೋಡಿದ ಪ್ರೇಕ್ಷಕ ಪ್ರಭು ಚಿತ್ರದ ಬಗ್ಗೆ ಪರವಾಗಿಲ್ಲ ಒಂದೊಮ್ಮೆ ನೋಡಬಹುದು ಎಂಬ ವಿಮರ್ಶೆಯನ್ನು ಹೆಚ್ಚಾಗಿ ನೀಡಿದ್ದಾನೆ. ಸದ್ಯ ಎರಡು ದಿನಗಳ ಪ್ರದರ್ಶನವನ್ನು ಪೂರೈಸಿರುವ ವಾಮನ ಬುಕ್‌ಮೈಶೋನಲ್ಲಿ ಈವರೆಗೆ ಹತ್ತಿರತ್ತಿರ ಎರಡು ಸಾವಿರ ವೋಟ್‌ಗಳನ್ನು ಪಡೆದುಕೊಂಡು 10ಕ್ಕೆ 6.2 ರೇಟಿಂಗ್ ಗಿಟ್ಟಿಸಿಕೊಂಡಿದೆ.ಹೀಗೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ವಾಮನ ಚಿತ್ರದ ಕಲೆಕ್ಷನ್ ವರದಿಯನ್ನು ಜನಪ್ರಿಯ ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ವೆಬ್‌ಸೈಟ್ ಸ್ಯಾಕ್‌ನಿಕ್ ಪ್ರಕಟಿಸಿದ್ದು, ಚಿತ್ರ ಮೊದಲ ದಿನ 56 ಲಕ್ಷ ನೆಟ್, ಎರಡನೇ ದಿನ 0.37 ಲಕ್ಷ ನೆಟ್ ರೂಪಾಯಿಗಳನ್ನು ಗಳಿಸಿದ್ದು, ಎರಡು ದಿನಕ್ಕೆ 93 ಲಕ್ಷ ನೆಟ್ ಕಲೆಕ್ಷನ್ ಮಾಡಿದೆ, ಅಂದರೆ1.04 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ( ಟೋಟಲ್ ಕಲೆಕ್ಷನ್ ) ಮಾಡಿದೆ ಎಂದು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.