ಇತ್ತೀಚಿನ ಸುದ್ದಿ

ಅದ್ದೂರಿಯಾಗಿ ಜರುಗಿದ ಮುದ್ದು ಮಲ್ಲಯ್ಯದೇವರ ಜಾತ್ರೆ ಮಹೋತ್ಸವ.

ಮಸ್ಕಿ : ಎರಡನೇ ಶ್ರೀಶೈಲ ಎಂದು
ಪ್ರಸಿದ್ದಿ ಪಡೆದ ಮುದ್ದು ಮಲ್ಲಯ್ಯ ದೇವರ ಮಹಾರಥೋತ್ಸವ ಶನಿವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಮಲ್ಲಯ್ಯನ ರಥವನ್ನು ಎಳೆದು ಭಕ್ತರು ಭಕ್ತಿ ಸಮರ್ಪಿಸಿದರು. ಬಳಿಕ ಸಂಜೆ 5.30 ಗಂಟೆಗೆ ಪಲ್ಲಕ್ಕಿಯಲ್ಲಿ ಮಲ್ಲಿಕರ್ಜುನನ ಉತ್ಸವ ಮೂರ್ತಿಯನ್ನು ರಥದ ಸುತ್ತ ಐದು ಭಾರಿ ಪ್ರದಕ್ಷಣೆ ಹಾಕಿದ ನಂತರ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು.

ಮಸ್ಕಿಯ ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು, ರಥಕ್ಕೆ ಧಾರ್ಮಿಕ ವಿಧಿ-ವಿಧಾನಗಳಂತೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಭಕ್ತರು ಉತ್ತುತ್ತಿ ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು
ಆಂಜನೇಯ
ದೇವಸ್ಥಾನ ರವರಗೆ ರಥವನ್ನು ಎಳೆದು ಪುನಃ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ತರಲಾಯಿತು.

ಭೋವಿ (ವಡ್ಡರ್) ಸಮಾಜದವರು
ತೆರಿನ ರಥಕ್ಕೆ ಸೊನ್ನೆ ಹಾಕುವ
ಮೂಲಕ ರಥೋತ್ಸವದ ಯಶಸ್ವಿಗೆ ಕಾರಣರಾದರು.

ಈ ವೇಳೆ,ಗಚ್ಚಿನ ಮಠದ ಗುರುಗಳಾದ ಶಿವಶಂಕ್ರಯ್ಯ ಸ್ವಾಮಿ,
ಮಲ್ಲಿಕಾರ್ಜುನ ದೇವರ ಅರ್ಚಕರಾದ ಸಿದ್ದಯ್ಯ ಹೆಸರೂರು ಹಿರೇಮಠ, ಮಹಿಳೆಯರಾದ
ಶ್ರೀ ಮತಿ ಅಂಬಿಕಾ ಹೆಸರೂರು, ದಿವ್ಯ ಸೊಪ್ಪಿಮಠ, ಶ್ವೇತ ಸೊಪ್ಪಿಮಠ, ಚನ್ನಮ್ಮ ಸೊಪ್ಪಿಮಠ,ಕಿರಣ ಸೊಪ್ಪಿಮಠ,
ವಿಶ್ವನಾಥ ಸೊಪ್ಪಿಮಠ,
ರುದ್ರಯ್ಯ ಸ್ವಾಮಿ ಸೊಪ್ಪಿಮಠ, ಶರಣು ಸೊಪ್ಪಿಮಠ, ಶೇಖರಯ್ಯ ಸ್ವಾಮಿ ಸೊಪ್ಪಿಮಠ, ಶಿವಶಂಕರಯ್ಯ ಸ್ಥಾವರಮಠ
ವಿರೇಶ ಧನಶಟ್ಟಿ,ಅಮರೇಶ ಬ್ಯಾಳಿ,ವೆಂಕಟರಡ್ಡಿ ಹೂವಿನ ಬಾವಿ,
ಶಿವರಾಜ ಬುಕ್ಜಣ್ಣ,ಕೃಷ್ಣ ಚಿಗಿರಿ,ತಿಮ್ಮಣ್ಣ ಭೋವಿ,
ಮಲ್ಲಯ್ಯ ಛಾವಣಿ, ಹಾಗೂ ಪೂಜಾರಿ ಪೇಟೆ ಅರ್ಚಕರು,
ಸೇರಿದಂತೆ ಊರಿನ ಪ್ರಮುಖ ಮುಖಂಡರು,ಪುರಸಭೆ ಸದಸ್ಯರು,ಅಧಿಕಾರಿಗಳು
ಪಾಲ್ಗೊಂಡಿದ್ದರು,
ಪಿಎಸ್ ಐ ಮುದ್ದು ರಂಗಯ್ಯ ರವರ ನೇತೃತ್ವದಲ್ಲಿ ಪೊಲೀಸ್ ಬಿಗಿ ಬದೋಬಸ್ತ್ ಮಾಡಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button