ಇತ್ತೀಚಿನ ಸುದ್ದಿ
ನಾಳೆ ಐತಿಹಾಸಿಕ ಮಸ್ಕಿಮುದ್ದು ಮಲ್ಲಯ್ಯನ ಜಾತ್ರೆ

ಮಸ್ಕಿ: ಪಟ್ಟಣದ ಮುದ್ದು ಮಲ್ಲಯ್ಯನ ರಥೋತವ ಏ.12ರಂದು ಸಂಜೆ 6ಕ್ಕೆ ಜರುಗಲಿದೆ.
ಬೆಳಿಗ್ಗೆ ಮುದ್ದು ಮಲ್ಲಯ್ಯನ ಬೆಟ್ಟದ ಮೇಲಿನ ಮಲ್ಲಯ್ಯನ ವಿಗ್ರಹಕ್ಕೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 6 ಕ್ಕೆ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಅರ್ಚಕರಾದ ಸಿದ್ದಯ್ಯ ಹೆಸರೂರು ಹಿರೇಮಠ ಅವರ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.