ಇತ್ತೀಚಿನ ಸುದ್ದಿ
ಮೈಸೂರು ಜಿಲ್ಲೆಯಲ್ಲಿ ಹುಲಿ ಪ್ರತ್ಯಕ್ಷ ಪ್ರಕರಣ, ಮತ್ತೆ ಕಾಣಿಸಿಕೊಂಡ ಹುಲಿ.

ಮೈಸೂರು : ಹುಣಸೂರು ತಾಲ್ಲೂಕು ಹೈರಿಗೆ ಗ್ರಾಮದ ಬಳಿ ಕಾಣಿಸಿಕೊಂಡಿದ್ದ ಹುಲಿ.ಗ್ರಾಮದ ತಮ್ಮೇಗೌಡರ ಜಮೀನಿನಲ್ಲಿ ಕಾಣಿಸಿಕೊಂಡಿತ್ತು.ನಂತರ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಕಾಡಿಗೆ ವಾಪಸ್ಸಾಗಿದ್ದ ಭಾರಿ ಗಾತ್ರದ ಹುಲಿ.ಇದೀಗ ಮತ್ತೆ ಹೈರಿಗೆ ಗ್ರಾಮದಲ್ಲಿ ಪ್ರತ್ಯಕ್ಷವಾದ ಹುಲಿ.ಹುಲಿ ಕಾರ್ಯಾಚರಣೆಗೆ ಸಾಕಾನೆಗಳ ಬಳಕೆ.ಹೈರಿಗೆ ಗ್ರಾಮಕ್ಕೆ ಆಗಮಿಸಿದ ಭೀಮ ಹಾಗೂ ಜೂ ಅಭಿ ಆನೆ.ಆರ್ ಎಫ್ ಓ ನಂದಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ.
ಕಾರ್ಯಾಚರಣೆಯಲ್ಲಿ 25ಕ್ಕೂ ಹೆಚ್ಚು ಸಿಬ್ಬಂದಿ ಭಾಗಿ.ಹೈರಿಗೆ ಗ್ರಾಮದ ಕೆರೆ ಭಾಗದ ಜಮೀನು ಮುತ್ತುರಾಯ ಹೊಸಹಳ್ಳಿ ಅರಣ್ಯ ಪ್ರದೇಶದ ಬಳಿ ಕೂಂಬಿಂಗ್.ಕೆರೆ ತೋಟ ಜಮೀನುಗಳಿಗೆ ಹೋಗುವಾಗ ಎಚ್ಚರಿಕೆಯಿಂದಿರಲು ಅರಣ್ಯ ಇಲಾಖೆ ಮನವಿ.ಜನರಲ್ಲಿ ಮನೆಮಾಡಿದ ಆತಂಕ.