GOOD NEWS : ಬಂದಿದೆ ಹೊಸ ಆಧಾರ್ ಆಯಪ್.. ಏನೆಲ್ಲಾ ವಿಶೇಷತೆ.. ಲಾಭ ಏನು? -VIDEO

ನವದೆಹಲಿ : ಗೌಪ್ಯತೆಯನ್ನು ಹೆಚ್ಚಿಸುವ ಮತ್ತು ಆಧಾರ್ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಹಂಚಿಕೊಳ್ಳುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ದಾರರಿಗೆ ಸಿಹಿಸುದ್ದಿ ನೀಡಿದೆ.
ಬಳಕೆದಾರರ ನಿಯಂತ್ರಣ ಮತ್ತು ಅನುಕೂಲಕ್ಕೆ ಆದ್ಯತೆ ನೀಡುವ ಅದರ ವೈಶಿಷ್ಟ್ಯಗಳನ್ನು ಎತ್ತಿ ತೋರಿಸುವ ನಿಟ್ಟಿನಲ್ಲಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಡಿಜಿಟಲ್ ಪರಿಶೀಲನೆಗಾಗಿ ಹೊಸದಾಗಿ ರೂಪಿಸಿರುವ ಆಧಾರ್ ಆಯಪ್ ಅನ್ನು ಇಂದು ಲೋಕಾರ್ಪಣೆಗೊಳಿಸಿದರು.
ಈ ಆಯಪ್, ಫೇಸ್ ಐಡಿ ದೃಢೀಕರಣವನ್ನು ಪರಿಚಯಿಸುತ್ತದೆ. ಹೀಗಾಗಿ ಯಾರೇ ಆಗಲಿ ಹಾರ್ಡ್ ಕಾಪಿ ಅಥವಾ ಜೆರಾಕ್ಸ್ ಆಧಾರ್ ಕಾಪಿಯನ್ನು ಇನ್ಮುಂದೆ ನೀಡುವ ಅಗತ್ಯವಿರಲ್ಲ. ಆಧಾರ್ ಕಾರ್ಡ್ ಅಗತ್ಯವಿದ್ದಲ್ಲಿ ಸ್ವೀಕರಿಸುವವರು ಈ ಆಯಪ್ ಮೂಲಕವೇ ದೃಢಿಕೀರಿಸಬಹುದು. ಫೋನ್ ಪೇ.. ಅದೇ UPI ಬಳಿಸದಂತೆಯೇ ಈ ಆಧಾರ್ ಹೊಸ ಆಯಪ್ ಬಳಕೆಗೆ ಸುಲಭವಾಗಿದೆ.
ಆಯಪ್ನಲ್ಲಿ ಬಳಕೆದಾರರು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಅಗತ್ಯ ಡೇಟಾ ಮಾತ್ರ ಸುರಕ್ಷಿತವಾಗಿ ಶೇರ್ ಮಾಡಿಕೊಳ್ಳಬಹುದು. ಈ ನೂತನ ತಂತ್ರಜ್ಞಾನ ಗೌಪ್ಯತೆ ಖಚಿತಪಡಿಸುತ್ತದೆ, ಅಲ್ಲದೇ ಸ್ಕ್ಯಾನ್ ಮಾಡಿದ ಮತ್ತು ಮುದ್ರಿತ ಪ್ರತಿಗಳ ಮೇಲಿನ ಅವಲಂಬನೆಯಿಂದ ದೂರವಿಡುತ್ತದೆ.
ಹೊಸ ಆಯಪ್ ಬಳಕೆಯಿಂದ ಏನೆಲ್ಲಾ ಲಾಭ?
ನಿಮಗೆ ಸಂಬಂಧಿಸಿ ಮಾಹಿತಿಯು ಬಲವಾಗಿ ಗೌಪ್ಯತೆಯಿಂದ ಇಡಬಹುದು. ಆಧಾರ್ ಡೇಟಾದ ದುರುಪಯೋಗ ಅಥವಾ ಸೋರಿಕೆಯಾಗಲ್ಲ, ನಿಮ್ಮ ಆಧಾರ್ ಅನ್ನು ಇತರರು ಫೋಟೋಶಾಪ್ ಮಾಡಲು ಸಾಧ್ಯವಿಲ್ಲ, ಈಗ ಕೇವಲ ಒಂದು ಟ್ಯಾಪ್ ಮೂಲಕ, ಬಳಕೆದಾರರು ಅಗತ್ಯ ಡೇಟಾವನ್ನು ಮಾತ್ರ ಹಂಚಿಕೊಳ್ಳಬಹುದು, ಅವರ ವೈಯಕ್ತಿಕ ಮಾಹಿತಿಯ ಮೇಲೆ ಸಂಪೂರ್ಣ ನಿಯಂತ್ರಣ ನೀಡಬಹುದು. ಇದಲ್ಲದೇ ಹೋಟೆಲ್ ಗೆ ಹೋದಾಗ, ಅಂಗಡಿಗಳು ಅಥವಾ ಪ್ರಯಾಣದ ಸಮಯದಲ್ಲಿ ಆಧಾರ್ ನಕಲನ್ನು ಹಸ್ತಾಂತರಿಸುವ ಅಗತ್ಯವಿಲ್ಲ. ಆಧಾರ್ ಅಪ್ಲಿಕೇಶನ್ ಸುರಕ್ಷಿತವಾಗಿದೆ ಮತ್ತು ಬಳಕೆದಾರರ ಒಪ್ಪಿಗೆಯೊಂದಿಗೆ ಮಾತ್ರ ಹಂಚಿಕೊಳ್ಳಬಹುದಾಗಿದೆ.