ಕ್ರೀಡೆ

ಸಿಕ್ಸರ್​ಗಳ ಸುರಿಮಳೆ! ವೇಗದ ಶತಕ ಬಾರಿಸಿ ಐತಿಹಾಸಿಕ ದಾಖಲೆ ಬರೆದ ಪ್ರಿಯಾಂಶ್ ಆರ್ಯ | Priyansh Arya

ಚಂಡೀಗಢ : ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿಎಸ್​ಕೆ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್​, ಅಬ್ಬರದ ಬ್ಯಾಟಿಂಗ್ ನಡೆಸಿತು. 20 ಓವರ್​ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು ಬರೋಬ್ಬರಿ 219 ರನ್​ ಕಲೆಹಾಕುವಲ್ಲಿ ಯಶಸ್ವಿಯಾಯಿತು.

ಇನ್ನು ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಯುವ ಆಟಗಾರ ಪ್ರಿಯಾಂಶ್ ಆರ್ಯ ಐಪಿಎಲ್​ ಇತಿಹಾಸದಲ್ಲೇ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ ಅನ್​ಕ್ಯಾಪ್ಡ್​ ಪ್ಲೇಯರ್​ ಪಟ್ಟಿಯಲ್ಲಿ ವೇಗದ ಶತಕವನ್ನು ದಾಖಲಿಸಿದ 24 ವರ್ಷದ ಪ್ರಿಯಾಂಶ್ ಆರ್ಯ, ಇಂದಿನ ಪಂದ್ಯದಲ್ಲಿ ಚೆನ್ನೈ ತಂಡಕ್ಕೆ ದುಃಸ್ವಪ್ನವಾಗಿ ಕಾಡಿದರು ಎಂಬುದರಲ್ಲಿ ಅನುಮಾನವೇ ಇಲ್ಲ. ಕೇವಲ 42 ಎಸೆತದಲ್ಲಿ 103 ರನ್​ ಬಾರಿಸುವ ಮೂಲಕ ಐಪಿಎಲ್​ ಇತಿಹಾಸದ ಪುಟದಲ್ಲಿ ಪ್ರಿಯಾಂಶ್ ತಮ್ಮ ಹೆಸರನ್ನು ದಾಖಲಿಸಿದ್ದಾರೆ.

13 ನೇ ಓವರ್‌ನ ಐದನೇ ಎಸೆತದಲ್ಲಿ ಮತೀಶಾ ಪತಿರಾನ ಅವರ ಬೌಲಿಂಗ್​ಗೆ ಬೌಂಡರಿ ಬಾರಿಸುವ ಮೂಲಕ ಪ್ರಿಯಾಂಶ್​ ಶತಕ ಗಳಿಸಿದರು. ತಮ್ಮ ಮೊದಲ ಐಪಿಎಲ್ ಶತಕ ಬಾರಿಸಿದ ಆರ್ಯ, ಬರೋಬ್ಬರಿ ಏಳು ಬೌಂಡರಿ ಮತ್ತು 9 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ತಂಡ ಐದು ವಿಕೆಟ್​ಗಳನ್ನು ಕಳೆದುಕೊಂಡು ಪರದಾಡುತ್ತಿದ್ದಾಗಲೂ ತಂಡದ ಜವಾಬ್ದಾರಿಯನ್ನು ತಾನೊಬ್ಬನೇ ಹೊತ್ತ ಪ್ರಿಯಾಂಶ್​, ಸ್ಫೋಟಕ ಇನ್ನಿಂಗ್ಸ್ ನೀಡುವ ಮೂಲಕ ತಂಡದ ಒಟ್ಟು ಮೊತ್ತವನ್ನು 200ರ ಗಡಿದಾಟಿಸಲು ದೊಡ್ಡ ಮಟ್ಟದ ಕೊಡುಗೆ ನೀಡಿದರು.

ಮೊದಲ ಇನ್ನಿಂಗ್ಸ್ ಅಂತ್ಯಕ್ಕೆ

ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್​ನಲ್ಲಿ 6 ವಿಕೆಟ್​ ನಷ್ಟಕ್ಕೆ 219 ರನ್​ ಕಲೆಹಾಕಿದೆ. ಈ ಬೃಹತ್​ ಗುರಿಯನ್ನು ಸಿಎಸ್​ಕೆ ತಲುಪಲಿದೆಯೇ? ಇಂದಿನ ಪಂದ್ಯದಲ್ಲಿ ಆದರೂ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಪಂಜಾಬ್ ಬ್ಯಾಟಿಂಗ್ ವಿವರ

ಪ್ರಿಯಾಂಶ್ ಆರ್ಯ- 103 ರನ್ 42 ಎಸೆತ

ಶಶಾಂಕ್ ಸಿಂಗ್- 52* ರನ್​, 36 ಎಸೆತ
ಮಾರ್ಕೋ ಜೆನ್ಸನ್​- 34* ರನ್​, 19 ಎಸೆತ

ಮೊಹಮ್ಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button