ರಾಜ್ಯ

BREAKING NEWS : ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಹೀಗೆ ಚೆಕ್‌ ಮಾಡಿ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಯಾವಾಗ ಬರಲಿದೆ ಎಂದು ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಿಹಿ ಸುದ್ದಿ ನೀಡಿದ್ದು, ಏ.8 ರಂದು ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಿದೆ.

ದ್ವಿತೀಯ ಪಿಯು ಪರೀಕ್ಷೆ-1ರ ರಿಸಲ್ಟ್ ನಾಳೆ ಮಧ್ಯಾಹ್ನ 1.30ಕ್ಕೆ ಪ್ರಕಟಿಸುವುದಾಗಿ ಪಿಯು ಬೋರ್ಡ್ ಮಾಹಿತಿ ನೀಡಿದೆ.

ವಿದ್ಯಾರ್ಥಿಗಳು ಫಲಿತಾಂಶವನ್ನು https://karresults.nic.in ಅಧಿಕೃತ ಜಾಲತಾಣದಲ್ಲಿ ವೀಕ್ಷಿಸಬಹುದು.
ನಾಳೆ ಮಧ್ಯಾಹ್ನ ಪಿಯು ಬೋರ್ಡ್ ಸುದ್ದಿಗೋಷ್ಠಿ ಬಳಿಕ, ವೆಬ್ಸೈಟ್ನಲ್ಲಿ ಫಲಿತಾಂಶ ನೋಡಬಹುದು. ಕಳೆದ ಮಾ.1ರಿಂದ 20ರವರೆಗೆ ಪರೀಕ್ಷೆಗಳು ನಡೆಸಲಾಗಿತ್ತು.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಎಸ್‌ಎಂಎಸ್ ಮೂಲಕವೂ ಫಲಿತಾಂಶವನ್ನು ಒದಗಿಸಲಿದೆ. 2025ರ ಮಾರ್ಚ್ 1 ರಿಂದ ಮಾರ್ಚ್ 20 ರವರೆಗೆ ನಡೆದ ಈ ಪರೀಕ್ಷೆಗೆ ಒಟ್ಟು 7,13,862 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇವರಲ್ಲಿ 3,35,468 ಗಂಡು ವಿದ್ಯಾರ್ಥಿಗಳು, 3,78,389 ಹೆಣ್ಣು ವಿದ್ಯಾರ್ಥಿಗಳು ಮತ್ತು ಐವರು ಟ್ರಾನ್ಸ್‌ಜೆಂಡರ್ ವಿದ್ಯಾರ್ಥಿಗಳು ಸೇರಿದ್ದಾರೆ.

ಫಲಿತಾಂಶ ವೀಕ್ಷಣೆ ಹೇಗೆ..?

  • ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್‌ https://karresults.nic.inಅಥವಾ https://kseab.karnataka.gov.inಗೆ ಭೇಟಿ ನೀಡಬೇಕು.
  • ಹೋಂ ಪೇಜ್ನಲ್ಲಿ Second PU Results 2025 ಲಿಂಕ್ ಕ್ಲಿಕ್ ಮಾಡಬೇಕು.
  • ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ನಮೂದಿಸಬೇಕು.
  • Second PU Results 2025 ಎಂಬುದು ಸ್ಕ್ರೀನ್ನಲ್ಲಿ ಕಾಣಿಸುತ್ತದೆ. ಬಳಿಕ ಫಲಿತಾಂಶ ವೀಕ್ಷಣೆ ಮಾಡಬಹುದು.
  • ಫಲಿತಾಂಶದ ಪ್ರತಿಯನ್ನು ಪಿಡಿಎಫ್ ಡೌನ್ಲೋಡ್ ಗೂ ಅವಕಾಶ

Related Articles

Leave a Reply

Your email address will not be published. Required fields are marked *

Back to top button