ರಂಗಭೂಮಿ ಉಳಿಸಿ ಬೆಳಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಲ್ಲಾರ ಕರ್ತವ್ಯ.

ಉಚಿತವಾಗಿ ನಾಟಕ ನೋಡುವ ಬದಲು ದುಡ್ಡು ಕೊಟ್ಟು ನಾಟಕ ನೋಡಿ – A ನಸುರುಲ್ಲಾ.
ದಿನವಿಡೀ ದುಡಿದ ಪಟ್ಟಣ ಪಂಚಾಯಿತಿ ಸಿಬ್ಬಂದ್ದಿ ಮನೋರಂಜನೆಗಾಗಿ ರಾಜಣ್ಣ ಜೇವರ್ಗಿ ಕಂಪನಿಯ ಅಕ್ಕ ಅಂಗಾರ ತಂಗಿ ಬಂಗಾರ ನಾಟಕ ವಿಕ್ಷಣೆ.
ವೃತ್ತಿರಂಗಭೂಮಿ ಕಲಾವಿದರು ತಮ್ಮ ಬದುಕನ್ನು ಕಟ್ಟಿಕೊಂಡ ನಾಟಕ ಪ್ರದರ್ಶನದಿಂದ ಸಮಾಜಕ್ಕೆ ಸಂದೇಶ ನೀಡುತ್ತಿರುವುದು ಶ್ಲಾಘನೀಯ.
ಕೊಟ್ಟೂರು : ವೃತ್ತಿರಂಗಭೂಮಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲಾರು ಮುಂದಾಗಬೇಕು ಎಂದು ಎ ನಸುರುಲ್ಲಾ ಪಟ್ಟಣ ಪಂಚಾಯ್ತಿ ಮುಖ್ಯಾಧೀಕಾರಿಗಳು ಹೇಳಿದರು. ಪಟ್ಟಣದಲ್ಲಿ ಶ್ರೀ ಗುರು ಬಸವೇಶ್ವರ ಸ್ವಾಮಿ ರಥೋತ್ಸವ ನಿಮಿತ್ತ ಜೇವರ್ಗಿ ವಿಶ್ವ ಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘ ಹೊಸೂರ ರಚನೆ.ಹಿರಿಯ ರಂಗಭೂಮಿ ಕಲಾವಿದರಾದ ರಾಜಣ್ಣ ಜೇವರ್ಗಿ ನಿರ್ದೇಶನದಲ್ಲಿ ಅಂಗಾರ ತಂಗಿ ಬಂಗಾರ ನಾಟಕ ನಾಟಕದ ಸಂಧರ್ಭದಲ್ಲಿ ಅವರು ಮಾತನಾಡಿ ಬೇರೆ ಊರಿನಿಂದ ಬಂದು ಇಲ್ಲಿ ನಾಟಕ ಪ್ರದರ್ಶನ ಮಾಡುವುದು ಶ್ಲಾಘನೀಯ .
ನಾವು ಒಂದು ದಿನ ಬಿಟ್ಟು ಕಾರ್ಯನಿರ್ವಹಿಸಿದರೆ ಮನೆಯಿಂದ ಹತ್ತಾರು ಬಾರಿ ಫೋನ್ .ಇಲ್ಲಿನ ಕಲಾವಿದರು ಮನೆಯ ಕುಟುಂಬವನ್ನು ಬಿಟ್ಟು .ಉತ್ತಮ ಸಮಾಜಕ್ಕೆ ಕೊಡುಗೆ ನೀಡಬೇಕು ಎನ್ನವ ಮನಸ್ಥಿತಿಯನ್ನು ಮೆಚ್ಚುವಂತಹುದು. ನಮ್ಮ ಪಟ್ಟಣ ಪಂಚಾಯ್ತಿ ಅಧ್ಯಕ್ಷರು ಬದ್ದಿ ರೇಖಾ ಮತ್ತು ಉಪಾಧ್ಯಕ್ಷರು, ಸರ್ವ ಸದಸ್ಯರು ಸೇರಿದಂತೆ ಸೂಮಾರು ನೂರಕ್ಕೂ ಹೆಚ್ಚು ಸಿಬ್ಬಂದಿಗಳು ಹಣ ನೀಡಿ ನಾಟಕವನ್ನು ವಿಕ್ಷಣೆ ಮಾಡಿರುವುದು ಇದು ಅವೀಸ್ಮಾರಣೀಯ ದಿನವಾಗಿದೆ ಎಂದರು. ಜೋತೆ ಗೆ ಇನ್ನೂಳಿದ ಸರ್ಕಾರಿ ಕಚೇರಿ ಸಿಬ್ಬಂದ್ದಿಗಳು ಬಂದು ನಾಟಕ ನೋಡಿ ಕಲಾವಿದರನ್ನು ಹಾರೈಸಿ ಎಂದು ಕರೆ ನೀಡಿದರು.
ದಿನ ನಿತ್ತ ಪಟ್ಟಣದಲ್ಲಿನ ಸ್ವಾಚತೆ ನೈರ್ಮಲಿಕರಣದಲ್ಲಿ ಪೌರ ಕಾರ್ಮಿಕರು ಶ್ರೀ ಗುರು ಬಸವೇಶ್ವರ ಸ್ವಾಮಿ ರಥೋತ್ಸವದಿಂದಲೂ ಶ್ರಮಿಸಿದ ಪೌರಕಾರ್ಮಿಕರಿಗೆ ಮನೋರಂಜನೆಗಾಗಿ
ಎಲ್ಲಾರೂ ಒಟ್ಟಿಗೆ ನಾಟಕ ವಿಕ್ಷಣೆ ಮಾಡುವುದು ಸಂತೋಷ ತಂದಿದೆ ಎಂದು ಜಿ ಸಿದ್ದಯ್ಯ ಪಟ್ಟಣ ಪಂಚಾಯ್ತಿ ಉಪಾದ್ಯಕ್ಷರು ಹೇಳಿದರು.ರಾಜಣ್ಣ ಜೇವರ್ಗಿ ಅವರು ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗಿದ್ದಾರೆ.
ತಾವೇ ನಾಟಕ ಬರೆದು ,ನೀರ್ದೇಶನ ,ನಟೆನೆ ಮಾಡಿ ಸೂಮಾರು 40ಕುಟುಂಬದ ಕಲಾವಿದರು ಇವರಿಗೆ ಸಾತ್ ನೀಡುತ್ತಿದ್ದಾರೆ.ಕನ್ನಡದ ಜೀ ಕನ್ನಡ ವಾಹಿನಿ
ಕಾಮಿಡಿ ಕಿಲಾಡಿ ವಿಜೇತೆರಾದ ಹಿರೇ ಮಗಳು ಸುಜಾತ ಗುಬ್ಬಿ , ಹಾಗೂ ಮಜಾ ಟಾಕೀಸ್,ಮಜಾ ಭಾರತ್ , ಗಿಚ್ಚಿ ಗಿಲಿ ಗಿಲಿಯ ಖ್ಯಾತಿಯ ನೀಲಾ ಜೇವರ್ಗಿ , ಹಾಸ್ಯ ದಿಗ್ಗಜ ಮಾರುತಿ ಮತ್ತಿತರ ಕಲಾವಿದರು ಮನೋಜ್ಞವಾಗಿ ಅಭೀನಯಿಸಿದ್ದಾರೆ.
ನಾವು ಬಾಲಿವುಡ್, ಹಾಲಿಹುಡ್ ನಾಯಕರ ಹೆಸರನ್ನು ಕೇಳಿದ್ದೇವೆ .ಆದರೆ ನಿಜವಾಜದ ಹೀರೋಗಳು ವೃತ್ತಿ ರಂಗಭೂಮಿಯ ಕಲಾವಿದರೂ ತಮ್ಮ ನೈಜ ಕಲೆಯನ್ನು ಪ್ರದರ್ಶನ ನೀಡುವುದನ್ನು ನಮ್ಮ ಕಣ್ಣುತುಂಬಿ ಕೊಳ್ಳಬಹುದು ಎಂದು ಮರಿಸ್ವಾಮಿ ಡಿ ಎಸ್ ಎಸ್ ಜಿಲ್ಲಾಧ್ಯಕ್ಷರು ಹೇಳಿದರು.

ಈ ಸಂದರ್ಭದಲ್ಲಿ ಜೇವರ್ಗಿ ವಿಶ್ವ ಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘದ ಮಾಲೀಕರು ಹಾಗೂ
ಹಿರಿಯ ರಂಗಭೂಮಿ ಕಲಾವಿದರಾದ ರಾಜಣ್ಣ ಜೇವರ್ಗಿ, ಕಾಮಿಡಿ ಕಿಲಾಡಿಗಳ ಖ್ಯಾತಿಯ ಸುಜಾತ ಗುಬ್ಬಿ , ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ನೀಲಾ ಜೀವರ್ಗಿ,ಮಾರುತಿ ಶಟ್ಟಿ ಇವರಿಗೆ ಶಾಲುವದಿಸಿ ಗೌರವಿಸಲಾಯಿತು.ರಾಜಣ್ಣ ಜೇವರ್ಗಿ
ಗೌರವ ಸ್ವೀಕರಿಸಿ ಪಟ್ಟಣ ಪಂಚಾಯ್ತಿ ಸಿಬ್ಬಂದಿ ಬಂದು ನಾಟಕ ನೋಡಿ ಕಲಾವಿದರನ್ನು ಗೌರವಿಸಿರುವುದಕ್ಕೆ ಧನ್ಯಾವದಗಳನ್ನು ತಿಳಿಸಿದರು . ಈ ನಾಟಕದಲ್ಲಿ ಯಾವುದೇ ಅಶ್ಲೀಲ ಪದ ಬಳಕೆ, ಅರೇ ಬರೇ ಬಟ್ಟೆ ಪ್ರದರ್ಶನಕ್ಕೆ ನಮ್ಮ ಕಂಪನಿಯಲ್ಲಿ ಅವಕಾಶ ವಿರುವಿದಿಲ್ಲ ಕುಟುಂಬ ಸಮೇತ ಬಂದು ನಾಟಕ ನೋಡಿ ಕಲಾವಿದರನ್ನು ಪ್ರಾತ್ಸಾಹಿಸಿ ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಕೆಂಗರಾಜ್ ಪಟ್ಟಣ ಪಂಚಾಯ್ತಿ ಸದಸ್ಯ ,ಮೇಘ,ಚನ್ನಪ್ಪ,ಎಸ್ ಪರುಸಪ್ಪ ,ಅನುಷಾ, ಎಸ್ ಕೊಟ್ರೇಶ್, ಮಂಜಣ್ಣ, ತಿಮ್ಮಣ್ಣ,ಚನ್ನಬಸಪ್ಪ,ಎಂ ಕೊಟ್ರೇಶ್ ಮತ್ತಿತರರು ಇದ್ದರು.

ವರದಿ : C ಕೊಟ್ರೇಶ್ tv8kannada ಬಳ್ಳಾರಿ , ವಿಜಯನಗರ