ಕ್ರೀಡೆ

ಹಾರ್ದಿಕ್, ತಿಲಕ್ ಅಬ್ಬರಕ್ಕೂ ಜಗ್ಗದ ಆರ್‌ಸಿಬಿಗೆ ರೋಚಕ ಗೆಲುವು; 2015ರ ನಂತರ ವಾಂಖೆಡೆಯಲ್ಲಿ ಮುಂಬೈ ಮಣಿಸಿದ ಬೆಂಗಳೂರು

ಮುಂಬೈ : ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾ ಅಬ್ಬರ ಆರ್‌ಸಿಬಿ ಅಭಿಮಾನಿಗಳ ಆತಂಕ ಹೆಚ್ಚಿಸಿತ್ತು. ಆದರೆ ಆರ್‌ಸಿಬಿ ಮಾತ್ರ ಎದೆಗುಂದಲಿಲ್ಲ. ಸಂಘಟಿತ ಹೋರಾಟ ನಡೆಸಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಶಾಕ್ ನೀಡಿದೆ. ಮುಂಬೈ ಇಂಡಿಯನ್ಸ್ ತಂಡವನ್ನು 209 ರನ್‌ಗೆ ಕಟ್ಟಿಹಾಕಿದ ಬೆಂಗಳೂರು ಗೆಲುವು ದಾಖಲಿಸಿದೆ.

12 ರನ್ ರೋಚಕ ಗೆಲುವು ಕಂಡ ಆರ್‌ಸಿಬಿ ಸಂಭ್ರಮ ಜೋರಾಗಿದೆ

ಮುಂಬೈ ಇನ್ನಿಂಗ್ಸ್
ಆರ್‌ಸಿಬಿ 222ರನ್ ಟಾರ್ಗೆಟ್ ಮುಂಬೈ ತಂಡಕ್ಕೆ ಕಠಿಣ ಸವಾಲು ನೀಡಿತ್ತು. ಆರ್‌ಸಿಬಿ ಆರಂಭದಲ್ಲೇ ಉತ್ತಮ ದಾಳಿ ಸಂಘಟಿಸಿತ್ತು. ರೋಹಿತ್ ಶರ್ಮಾಹಾಗೂ ರಿಯಾನ್ ರಿಕೆಲ್ಟನ್ ಆರಂಭ ನಿರೀಕ್ಷಿತ ಮಟ್ಟ ತಲುಪಲಿಲ್ಲ. ರೋಹಿತ್ ಶರ್ಮಾ 17 ರನ್ ಹಾಗೂ ರಿಯಾನ್ 17 ರನ್ ಸಿಡಿಸಿ ನಿರ್ಗಮಿಸಿದರು. ಜೋಶ್ ಹೇಜಲ್‌ವುಡ್, ಯಶ್ ದಯಾಳ್ ಹಾಗೂ ಕ್ರುನಾಲ್ ಪಾಂಡ್ಯ ದಾಳಿಯಿಂದ ಆರ್‌ಸಿಬಿ ಮೇಲುಗೈ ಸಾಧಿಸಿತು. ವಿಲ್ ಜ್ಯಾಕ್ಸ್ ಕೂಡ ಅಬ್ಬರಿಸಲಿಲ್ಲ. 22 ರನ್ ಸಿಡಿಸಿ ನಿರ್ಗಮಿಸಿದರು. ಸೂರ್ಯಕುಮಾರ್ ಕೂಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಲು ಆರ್‌ಸಿಬಿ ಅವಕಾಶ ನೀಡಲಿಲ್ಲ. 28 ರನ್ಗೆ ವಿಕೆಟ್ ಕೈಚೆಲ್ಲಿದರು.

ತಿಲಕ್ ವರ್ಮಾ ಹಾಗೂ ಹಾರ್ದಿಕ್ ಬ್ಯಾಟಿಂಗ್ ಆರ್‌ಸಿಬಿ ತಲೆನೋವು ಹೆಚ್ಚಿಸಿತು. ಹಾರ್ದಿಕ್ ಒಂದರ ಮೇಲೊಂದರಂತೆ ಸಿಕ್ಸರ್ ಮೂಲಕ ಅಬ್ಬರಿಸಿದರೆ, ತಿಲಕ್ ವರ್ಮಾ ಬೌಂಡರಿ ಮೂಲಕ ಮುಂಬೈ ಇಂಡಿಯನ್ಸ್‌ಗೆ ನೆರವಾದರು. ಇವರಿಬ್ಬರ ಜೊತೆಯಾಟ ಆರ್‌ಬಿಯಿಂದ ಪಂದ್ಯವನ್ನು ನಿಧಾನವಾಗಿ ಕೈಜಾರುವಂತೆ ಮಾಡಿತು. ತಿಲಕ್ ವರ್ಮಾ 26 ಎಸೆತದಲ್ಲಿ ಹಾಫ್ ಸೆಂಚುರಿ ಪೂರೈಸಿದರು.

ಭುವನೇಶ್ವರ್ ಸ್ವಿಂಗ್
ಅಬ್ಬರಿಸುತ್ತಿದ್ದ ಈ ಜೊತೆಯಾಟಕ್ಕೆ ಭುವನೇಶ್ವರ್ ಕುಮಾರ್ ಬ್ರೇಕ್ ಹಾಕಿದರು. ತಿಲಕ್ ವರ್ಮಾ 56 ರನ್ ಸಿಡಿಸಿ ಔಟಾದರು. ಈ ವೇಳೆ ಮುಂಬೈ ಇಂಡಿಯನ್ಸ್ ಗೆಲುವಿಗೆ 14 ಎಸೆತದಲ್ಲಿ 34 ರನ್ ಬೇಕಿತ್ತು. ಜೊತೆಗೆ ಹಾರ್ದಿಕ್ ಪಾಂಡ್ಯ ಕ್ರೀಸ್‌ನಲ್ಲಿದ್ದರು. ಪಾಂಡ್ಯ 42 ರನ್ ಸಿಡಿಸಿ ಔಟಾಗುತ್ತಿದ್ದಂತೆ ಮುಂಬೈ ಸಪ್ಪೆಯಾಯಿತು. ಬಳಿಕ ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್ ವಿಕೆಟ್ ಪತನಗೊಂಡಿತು. ಕೊನೆಯ ನಾಲ್ಕು ಎಸೆತದಲ್ಲಿ ಮುಂಬೈಗೆ 18 ರನ್ ಬೇಕಿತ್ತು. ಆದರೆ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಕೊನೆಗೆ ಮುಂಬೈ 9 ವಿಕೆಟ್ ಕಳೆದುಕೊಂಡು 209 ರನ್ ಸಿಡಿಸಿತು. ಇದರೊಂದಿಗೆ ಆರ್‌ಸಿಬಿ 12 ರನ್ ಗೆಲುವು ದಾಖಲಿಸಿತು

ಆರ್‌ಸಿಬಿ ಇನ್ನಿಂಗ್ಸ್
ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡಿತ್ತು. ವಿರಾಟ್ ಕೊಹ್ಲಿ 67 ರನ್ ಸಿಡಿಸಿದರು. ದೇವದತ್ ಪಡಿಕ್ಕಲ್ 37 ರನ್ ಸಿಡಿಸಿದರೆ, ನಾಯಕ ರಜತ್ ಪಾಟೀದಾರ್ 64 ರನ್ ಸಿಡಿಸಿದರು. ಜಿತೇಶ್ ಶರ್ಮಾ 40 ರನ್ ಸಿಡಿಸಿದರು. ಈ ಮೂಲಕ ಈ ಮೂಲಕ ಆರ್‌ಸಿಬಿ 221 ರನ್ ಸಿಡಿಸಿತ್ತು.

ಮೋಹಮ್ಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button