PM MODI : ಪಂಬನ್ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ – ಏನಿದರ ವಿಶೇಷತೆ? – VIDEO

ಶ್ರೀಲಂಕಾ ರಾಮನವಮಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಾಗೂ ಹಾಗೂ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸನಾಯಕ ಅವರು ಜಂಟಿಯಾಗಿ ಮಹೋ-ಅನುರಾಧಪುರ ರೈಲ್ವೆ ಮಾರ್ಗದ ಸಿಗ್ನಲಿಂಗ್ ವ್ಯವಸ್ಥೆಯನ್ನು ಉದ್ಘಾಟಿಸಿದ್ದು, ಭಾರತದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮೂರು ದಿನಗಳ ಶ್ರೀಲಂಕಾ ಭೇಟಿಯಲ್ಲಿ ಉಭಯ ರಾಷ್ಟ್ರಗಳ ನಡುವೆ ಸಾಕಷ್ಟು ಒಪ್ಪಂದಗಳು ನಡೆಯಲಿದ್ದು, ಪ್ರಧಾನಿ ಮೋದಿ ಮತ್ತು ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸನಾಯಕ ಅವರು ಜಂಟಿಯಾಗಿ ಮಹೋ-ಅನುರಾಧಪುರ ರೈಲ್ವೆ ಮಾರ್ಗದ ಸಿಗ್ನಲಿಂಗ್ ವ್ಯವಸ್ಥೆಯನ್ನು ಉದ್ಘಾಟಿಸಿದರು.
ಮಹೋ-ಅನುರಾಧಪುರ ರೈಲ್ವೆ ಮಾರ್ಗವು ಭಾರತ ಸರ್ಕಾರದ ಬೆಂಬಲಿತ ಯೋಜನೆಯಾಗಿದೆ. ಇನ್ನು ರಾಮನವಮಿಯ ಹಿನ್ನಲೆ ಭಾರತದ ಮೊದಲ ಲಂಬ ಲಿಫ್ಟ್ ಸಮುದ್ರ ಸೇತುವೆಯಾದ ಹೊಸ ಪಂಬನ್ ಸೇತುವೆಯನ್ನು ಉದ್ಘಾಟಿಸಿದ್ದಾರೆ. ರಾಮೇಶ್ವರಂ-ತಾಂಬರಂ (ಚೆನ್ನೈ) ಹೊಸ ರೈಲು ಸೇವೆಗೆ ಹಸಿರು ನಿಶಾನೆ ತೋರಿಸಲಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿರುವ ಅನುರ ಕುಮಾರ ದಿಸ್ಸನಾಯಕೆ ಅವರು ಅಧ್ಯಕ್ಷರಾದ ನಂತರ ಶ್ರೀಲಂಕಾಕ್ಕೆ ಕೊಟ್ಟಿರುವ ಮೊದಲ ವಿದೇಶಿ ನಾಯಕರಾಗಿ ಮೋದಿ ಭೇಟಿ ನೀಡಿದ್ದಾರೆ. ಈ ವೇಳೆ ಉಭಯ ರಾಷ್ಟ್ರಗಳ ನಡುವೆ ರಕ್ಷಣೆ, ಆರೋಗ್ಯ, ವ್ಯಾಪಾರ ಹಾಗೂ ಇಂಧನ ಕ್ಷೇತ್ರಗಳ ಬಗ್ಗೆ ಒಪ್ಪಂದ ಏರ್ಪಡಲಿದೆ.
