ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರಿಗೆ ಅನುಕೂಲ: ಬಸವರಾಜ ರಾಯರಡ್ಡಿ

ಯಲಬುರ್ಗಾ: ರಾಜ್ಯ ಸರಕಾರ ಬಡವರಿಗಾಗಿ ಹಾಗೂ ಸರ್ವ ಜನಾಂಗಕ್ಕೆ ಉಪಯೋಗವಾಗುವಂತಹ ಅನೇಕ ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದ್ದು ಇದು ದೇಶದಲ್ಲಿಯೇ ಮಾದರಿಯಾಗಿದೆ ನಮ್ಮ ಗ್ಯಾರಂಟಿ ಯೋಜನೆಗಳನ್ನು ಬೇರೆ ಬೇರೆ ರಾಜ್ಯಗಳು ತಮ್ಮಲ್ಲಿ ಜಾರಿ ಮಾಡುತ್ತಿವೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದ ಬುದ್ದ ಬಸವ ಅಂಬೇಡ್ಕರ್ ಭವನದಲ್ಲಿ ತಾಲೂಕ ಆಡಳಿತ,ಆಹಾರ ಇಲಾಖೆ, ಗ್ಯಾರಂಟಿ ಅನುಷ್ಠಾನ ಸಮಿತಿ ಸಹಯೋಗದಲ್ಲಿ ನಡೆದ ಅನ್ನಭಾಗ್ಯ ಯೋಜನೆಯಲ್ಲಿ ಉಚಿತ ತಲಾ ಹತ್ತು ಕೆಜಿ ಅಕ್ಕಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

1ಕೋಟಿ 26 ಲಕ್ಷ ಮಹಿಳೆಯರಿಗೆ ಒಂದು ತಿಂಗಳಿಗೆ 2 ಸಾವಿರ ಗೃಹಲಕ್ಷ್ಮೀ ಹಣ ಅವರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ ಇದಕ್ಕಾಗಿ ಪ್ರತಿವರ್ಷ 25 ಸಾವಿರ ಹಣ ಮೀಸಲಿಡಲಾಗಿದೆ ನಮ್ಮಲ್ಲಿ ಬಿಪಿಎಲ್ ಕಾರ್ಡದಾರರು 63, 399 ಕುಟುಂಬಗಳಿದ್ದು ಓಟ್ಟು 2 ಲಕ್ಷ 35 ಸಾವಿರದ 07 ಜನರಿಗೆ ಅನ್ನಭಾಗ್ಯ ಯೋಜನೆಯನ್ನು ತಲುಪಿಸಲಾಗುತ್ತಿದೆ, 30 ಸಾವಿರ ಕೋಟಿ ಹಣವನ್ನು ಖರ್ಚು ಮಾಡಿ ಉಚಿತ ಬಸ್ ಪ್ರಯಾಣಕ್ಕೆ ಅನುಕೂಲ ಕಲ್ಪಿಸಿಕೋಡಲಾಗಿದೆ ಇದರಿಂದ ರಾಜ್ಯದಲ್ಲಿ 1ಕೋಟಿ 26 ಲಕ್ಷ ಮಹಿಳೆಯರು ಇದರ ಉಪಯೋಗ ಮಾಡಿಕೊಂಡಿದ್ದಾರೆ ಎಂದರು.
ಗ್ರಾರಂಟಿ ಸಮಿತಿಯ ಜಿಲ್ಲಾ ಅಧ್ಯಕ್ಷ ರಡ್ಡಿ ಶ್ರೀನಿವಾಸ ಮಾತನಾಡಿ ನಮ್ಮ ಜಿಲ್ಲೆಯಲ್ಲಿ ನಮ್ಮ ಸರಕಾರದ ಐದು ಗ್ಯಾರಂಟಿಗಳು ಎಲ್ಲರಿಗೂ ತಲುಪಿವೆ ಕೆಲವೊಂದು ದಾಖಲಾತಿ ತೊಂದರೆ ಇರುವಂತಹ ಕೇಲವರಿಗೆ ಮಾತ್ರ ಈ ಯೋಜನೆ ದೊರಕಿರುವದಿಲ್ಲಾ ಅಂತವರಿಗೂ ಸಹಿತ ಅವರು ತಮ್ಮ ದಾಖಲಾತಿಗಳನ್ನ ಸರಿಪಡಿಸಿಕೊಂಡ ನಂತರ ಅವಕಾಶ ಕಲ್ಪಿಸಲಾಗುವದು ಎಂದರು.
ಈ ಸಂದರ್ಭದಲ್ಲಿ ಯಲಬುರ್ಗಾ ತಹಸೀಲ್ದಾರ ಬಸವರಾಜ ತೆನ್ನಳ್ಳಿ, ಕುಕನೂರ ತಹಸೀಲ್ದಾರ ಎಚ್ ಪ್ರಾಣೇಶ, ಗ್ಯಾರಂಟಿ ಸಮಿತಿ ಯಲಬುರ್ಗಾ ತಾಲೂಕ ಅದ್ಯಕ್ಷ ಸುದೀರ್ ಕೋರ್ಲಳ್ಳಿ, ಕುಕನೂರ ತಾಲೂಕ ಅದ್ಯಕ್ಷ ಸಂಗಮೇಶ ಗುತ್ತಿ, ಮುಖಂಡರಾದ ಅಡಿವೆಪ್ಪ ಭಾವಿಮನಿ, ಈರಪ್ಪ ಕುಡಗುಂಟಿ,ಸಂಗಣ್ಣ ತೆಂಗಿನಕಾಯಿ, ಮಹೇಶ ದೊಡ್ಡಮನಿ, ಛತ್ರಪ್ಪ ಛಲವಾದಿ, ಶಿವಾನಂದ ಬಣಕಾರ ಸೇರಿದಂತೆ ಅನೇಕರು ಹಾಜರಿದ್ದರು.
ದೊಡ್ಡಬಸಪ್ಪ ಹಕಾರಿ tv8kannada ಕೋಪ್ಪಳ