ಇತ್ತೀಚಿನ ಸುದ್ದಿ
ದುರ್ಬಲ ವರ್ಗದ ಪರವಾಗಿ ದನಿ ಎತ್ತಿದ ಬಾಬು ಜಗಜೀವನರಾಂ : ಪ್ರತಾಪ್ ಗೌಡ ಪಾಟೀಲ ಅಭಿಮತ

ಮಸ್ಕಿ : ಹಿಂದುಳಿದ ಹಾಗೂ ಬಡ ಪಂಗಡಗಳ ಜನತೆಯ ಏಳಿಗೆ ದುಡಿದವರಲ್ಲಿ ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಪ್ರಮುಖರು ಎಂದು ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ ರವರು ಹೇಳಿದರು.
ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮ ದಲ್ಲಿ ಮಾತನಾಡಿ
ಸಮಾಜ ಸುಧಾರಣೆ ಹಾಗೂ ಎಲ್ಲರೂ ಸಮಾನವಾಗಿ ಜೀವನ ನಡೆಸಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನು ಅವರು ಹೊಂದಿದ್ದರು. ಕಾರ್ಮಿಕರ ಏಳಿಗೆಯನ್ನು ಸದಾ ಬಯಸುತ್ತಿದ್ದರು. ದೇಶದ ಜನರು ಅಹಾರ ಕೊರತೆ ಅನುಭವಿಸುತ್ತಿರುವುದನ್ನು ಕಂಡು ಹಸಿರು ಕ್ರಾಂತಿ ಪ್ರಾರಂಭಿಸಿ ನೆರವಾದರು’ ಎಂದು ತಿಳಿಸಿದರು.
ಈ ವೇಳೆ, ಬಿಜೆಪಿ ಪಕ್ಷದ ಪ್ರಮುಖ ಮುಖಂಡರು ಹಾಗೂ ಕಾರ್ಯಕತರು ಇದ್ದರೂ
