ಇತ್ತೀಚಿನ ಸುದ್ದಿ

ಧಾರ್ಮಿಕ ಶಿಕ್ಷಣವೂ ಅಗತ್ಯವಿದೆಕಾಶೀ ಜಗದ್ಗುರು ಶ್ರೀಗಳು.

ಕೊಟ್ಟೂರು : ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳಿಗೆ ಧರ್ಮಗ್ರಂಥ ಸಿದ್ಧಾಂತ ಶಿಖಾಮಣಿ ಭಾರತದ
ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ಧರ್ಮ ಸಿದ್ಧಾಂತವಾಗಿ ಅನುವಾದವಾಗಿದೆ ಎಂದು ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ, ಭೋಜಪುರಿ, ಒರಿಯಾ, ಅವಥ್, ರಷ್ಯನ್, ನೇಪಾಳಿ ಭಾಷೆಗೂ ಸಿದ್ಧಾಂತ ಶಿಖಾಮಣಿ ಭಾಷಾಂತರ ವಾಗಿದೆ ಎಂದರು.
ಸಿದ್ಧಾಂತ ಶಿಖಾಮಣಿ ದೇಶದ ವೀರಶೈವ ಲಿಂಗಾಯಿತರ ಎಲ್ಲರ ಮನೆಗಳಿಗೆ ತಲುಪಿದೆ. ದೇಶದ ಎಲ್ಲ ರಾಜ್ಯ, ಪ್ರತಿ ಜಿಲ್ಲೆಗಳಲ್ಲಿ ವೀರಶೈವ ಲಿಂಗಾಯತರಿದ್ದಾರೆ ಎಂದು ತಿಳಿಸಿದರು.
ಸಿದ್ಧಾಂತ ಶಿಖಾಮಣಿ ಗ್ರಂಥವನ್ನು ಕಾಲ ಕಾಲಕ್ಕೆ ಅಂದಿನ ಶಿವಾಚಾರ್ಯರು, ಜಗದ್ಗುರುಗಳು ಪ್ರವಚನ ಮಾಡುತ್ತಾ ಬಂದಿದ್ದಾರೆ. ಮೈಸೂರಿನ ಪಂಡಿತ ಕಾಶಿನಾಥ ಶಾಸ್ತ್ರಿ ಗ್ರಂಥವನ್ನು ಕನ್ನಡ ಹಾಗೂ ಕರಿಬಸವ ಶಾಸ್ತ್ರಿ ತೆಲುಗು ಭಾಷೆಗೆ ಅನುವಾದ ಮಾಡಿದ್ದಾರೆ. ಇದರಿಂದಾಗಿ ಆಯಾ ಪ್ರಾದೇಶಿಕ ಭಾಷೆಯಲ್ಲಿ ಓದಲು ಅನುಕೂಲವಾಗಿದೆ. ಬಸವಣ್ಣ ಅವರು ಪಂಚಾಚಾರ್ಯರಿಂದ ವೀರಶೈವ ದೀಕ್ಷೆ ತೆಗೆದುಕೊಂಡಿದ್ದು, ವೀರಶೈವ ಧರ್ಮವನ್ನು ಆಚರಿಸಿದ್ದಾರೆ. ಬಸವಣ್ಣ ಅವರ ಯಾವ ವಚನದಲ್ಲೂ ಲಿಂಗಾಯತ ಎಂದಿಲ್ಲ. ಅವರು ಒಂದು ವಚನದಲ್ಲಿ ನೀಜ ವೀರಶೈವನಾದೆ ಎಂದಿದ್ದಾರೆ. ಅವರೆಂದೂ ನಾನು ಲಿಂಗಾಯತ ಎಂದು ಹೇಳಿಲ್ಲ. ಪ್ರತಿಯೊಬ್ಬ ದಾರ್ಶನಿಕರು ಧರ್ಮ ಸಿದ್ಧಾಂತವನ್ನು ಕಾಶಿ ಜಗದ್ಗುರುಗಳ ಸಂಸ್ಕೃತದಲ್ಲಿ ರಚಿಸಿದ್ದಾರೆ. ಗ್ರಂಥಗಳು ವೀರಶೈವಧರ್ಮ ಕುರಿತು ಸ್ಪಷ್ಟ ಮಾಹಿತಿ ನೀಡುತ್ತವೆ ಎಂದು ತಿಳಿಸಿದರು.

ಶಿಕ್ಷಣದಲ್ಲಿ ಲೌಕಿಕ ಮತ್ತು ಧಾರ್ಮಿಕ ಶಿಕ್ಷಣವಿದ್ದು, ಎರಡೂ ಪದ್ಧತಿಗಳಲ್ಲಿ ಶಾಲೆ, ಕಾಲೇಜ್‌ಗಳಿವೆ. ಪಂಚ ಪೀಠಗಳು, ಶಾಖಾ ಮಠಗಳು ಪಾರಂಪರಿಕ ಧಾರ್ಮಿಕ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿವೆ. ಪೂಜಾ ವಿಧಿವಿಧಾನಗಳು, ಮಂತ್ರ ಪಠಣಗಳನ್ನು ಶಾಲೆಗಳಲ್ಲಿ ಬೋಧಿಸುವುದಿಲ್ಲ. ಇದನ್ನು ಕಲಿಯದಿದ್ದರೆ ಧರ್ಮ ಉಳಿಯುವುದಿಲ್ಲ. ಧಾರ್ಮಿಕ ಶಿಕ್ಷಣ ಕೊಡದಿದ್ದರೆ ಧರ್ಮ ಉಳಿಯುತ್ತಿರಲಿಲ್ಲ. ಶಾಲೆ ಶಿಕ್ಷಣದಷ್ಟೇ ಧಾರ್ಮಿಕ ಶಿಕ್ಷಣವೂ ಮುಖ್ಯ ಎಂದು ಕಾಶಿ ಜಗದ್ಗುರುಗಳು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button