ಏ.05 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮಸ್ಕಿ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ.

ಮಸ್ಕಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ಮಸ್ಕಿ ಇವರುಗಳ ಸಂಯುಕ್ತಾಶ್ರಯದಲ್ಲಿ
ಮಸ್ಕಿ : ತಾಲೂಕಿನ ಸಮಸ್ತ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬ ವರ್ಗದವರಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏ.05 ಶನಿವಾರ ಪಟ್ಟಣದ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಕಲ್ಯಾಣ ಮಂಟಪ ಆವರಣದಲ್ಲಿ ಏರ್ಪಡಿಸಲಾಗಿದ್ದು ಹೃದಯ ಸಂಬಂಧಿ ಕಾಯಿಲೆ, ನರರೋಗ, ಮಧುಮೇಹ, ಕ್ಯಾನ್ಸರ್, ಕಣ್ಣಿನ ಸಮಸ್ಯೆ ಸ್ತ್ರೀ ರೋಗ ಸಮಸ್ಯೆ ಸೇರಿದಂತೆ ಅನೇಕ ಕಾಯಿಲೆಗಳಿಗೆ ಉಚಿತವಾಗಿ ತಪಾಸಣಾ ಮಾಡಿ ಅವಶ್ಯ ವಿದ್ದಲಿ ಉಚಿತ ಶಸ್ತ್ರಚಿಕಿತ್ಸೆ ಸಹ ಮಾಡಲಾಗುವುದು ಎಂದು ನೌಕರರ ಸಂಘದ ಅಧ್ಯಕ್ಷ ಪಂಪಾಪತಿ ಹೂಗಾರ ರವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದರು.
ಉಚಿತ ಆರೋಗ್ಯ ಶಿಬಿರಕ್ಕೆ ಬೆಂಗಳೂರುನ ವೈದೇಹಿ ಆಸ್ಪತ್ರೆ ಖ್ಯಾತ ವೈದ್ಯರಾದ ಕೆ.ಮಲ್ಲಿಕಾರ್ಜುನ ಹಚ್ಚೂಳ್ಳಿ ರವರು ಆಗಮಿಸುತ್ತಿದ್ದು ತಾಲೂಕಿನ ಎಲ್ಲಾ ಸರಕಾರಿ ನೌಕರರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನೌಕರರ ಸಂಘದ ಕಾರ್ಯದರ್ಶಿ ಯಾದ
ಚೆನ್ನವೀರ ಜೋತಾನ್ ರವರು
ಮನವಿ ಮಾಡಿದರು.