ಇತ್ತೀಚಿನ ಸುದ್ದಿ
DOLLY DHANANJAY: ಇತಿಹಾಸ ಪ್ರಸಿದ್ಧ ಪುಷ್ಪಗಿರಿ ದೇಗುಲಕ್ಕೆ ಡಾಲಿ ದಂಪತಿ ಭೇಟಿ

ಹಾಸನ : ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಅವರು ತಮ್ಮ ಪತ್ನಿ ಧನ್ಯತಾ ಹಾಗೂ ಕುಟುಂಬಸ್ಥರ ಜೊತೆ ಹಾಸನ ಜಿಲ್ಲೆಯ ಇತಿಹಾಸ ಪ್ರಸಿದ್ಧ ಪುಷ್ಪಗಿರಿ ದೇವಾಲಯಕ್ಕೆ ಭೇಟಿ ಕೊಟ್ಟಿದ್ದಾರೆ.
ಪ್ರತಿ ವರ್ಷ ಯುಗಾದಿ ಹಬ್ಬದ ಪ್ರಯುಕ್ತ ದೇಗುಲದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ವಿಶೇಷ ಪೂಜೆ ನೆರವೇರುತ್ತದೆ.
ಈ ವಿಶೇಷ ಪೂಜೆಯಲ್ಲಿ ನೂತನ ದಂಪತಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದೆ.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಳೇಬೀಡಿನಲ್ಲಿ ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಇದೆ. ಅಲ್ಲಿ ಹೊಯ್ಸಳರ ಕಾಲದ ಹಲವು ದೇವಾಲಯಗಳಿವೆ.