SRH vs DC: ಡೆಲ್ಲಿ ವಿರುದ್ಧ ಮಕಾಡೆ ಮಲಗಿದ ಬಲಿಷ್ಠ ಹೈದರಾಬಾದ್! ಟೂರ್ನಿಯಲ್ಲಿ ಸತತ ಎರಡನೇ ಸೋಲು ಕಂಡ ಎಸ್‌ಆರ್‌ಹೆಚ್

ವಿಶಾಖಪಟ್ಟಣ : ಸನ್‌ರೈಸರ್ಸ್ ಹೈದರಾಬಾದ್ (SRH) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್, ಬ್ಯಾಟರ್‌ಗಳ ನೀರಸ ಪ್ರದರ್ಶನದಿಂದಾಗಿ ಕೇವಲ 164 ರನ್ ಗಳಿಗೆ ಅಲೌಟ್ ಆಗುವ ಮೂಲಕ ನಿರಾಸೆ ಅನುಭವಿಸಿತು.
ಸುಲಭದ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 16 ಓವರ್‌ನಲ್ಲಿ ಪಂದ್ಯ ಗೆದ್ದು ಬೀಗಿತು. ಮಾತ್ರವಲ್ಲ ಟೂರ್ನಿಯಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಅಂಕ ಪಟ್ಟಿಯಲ್ಲಿ (Points Table) ಎರಡನೇ ಸ್ಥಾನಕ್ಕೇರಿತು.
ಸ್ಟಾರ್ಕ್ ಬಿಗಿ ಬೌಲಿಂಗ್ ದಾಳಿಗೆ ಸಿಲುಕಿದ ಹೈದರಾಬಾದ್ ಬ್ಯಾಟರ್‌ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ಹೈದರಾಬಾದ್ ಬ್ಯಾಟರ್‌ಗಳು ದೊಡ್ಡ ಹೊಡೆತಕ್ಕೆ ಮುಂದಾಗಿ ಕೈ ಸುಟ್ಟುಕೊಂಡರು. ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳ ಸಾಂಘಟಿತ ದಾಳಿ ಎದುರಿಸಲಾಗದೆ ಮಕಾಡೆ ಮಲಗಿದರು. ವಿಶೇಷವಾಗಿ ಅಭಿಷೇಕ್ ಶರ್ಮಾ ಕೇವಲ 1 ರನ್ ಗಳಿಸಿ ಹೊರನಡೆದರು. ನಂತರ ಬಂದ ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ ಹಾಗೂ ಟ್ರಾವಿಸ್ ಹೆಡ್ ಮೊದಲ 6 ಓವರ್ ಒಳಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು.
ಅನಿಕೇತ್ ಅಬ್ಬರ
ಒಂದೆಡೆ ಸ್ಟಾರ್ ಬ್ಯಾಟರ್‌ಗಳು ಪೆವಿಲಿಯನ್ ಸೇರಿಕೊಂಡಾಗಲು ಧೃತಿಗೆಡದೆ ಕೆಚ್ಚೆದೆಯ ಇನ್ನಿಂಗ್ಸ್ ಕಟ್ಟಿದ 22ರ ಹರೆಯದ ಅನಿಕೇತ್ 41 ಎಸೆತಗಳಲ್ಲಿ 5 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 74 ರನ್ ಸಿಡಿಸಿದರು. ಇವರ ಜೊತೆಗೆ ಕ್ಲಾಸೆನ್ ಕೊಂಚ ಅಬ್ಬರಿಸಿದರು ಅವರು 19 ಎಸೆತಗಳಲ್ಲಿ 32 ರನ್ ಸಿಡಿಸಿದರು. ಈ ಇಬ್ಬರು ಔಟ್ ಆದ ಬಳಿಕ ಯಾವುದೇ ಆಟಗಾರರು ಎರಡಕ್ಕಿ ಮೊತ್ತ ಕಲೆಹಾಕಲಿಲ್ಲ. ಹಾಗಾಗಿ ಹೈದರಬಾದ್ ತಂಡ ಅಂತಿಮವಾಗಿ 18.4 ಓವರ್‌ಗಳಲ್ಲಿ 163 ರನ್‌ಗೆ ಆಲೌಟ್ ಆಯಿತು.
ಸ್ಟಾರ್ಕ್ ಬೆಸ್ಟ್ ಬೌಲಿಂಗ್
ಹಲವು ವರ್ಷಗಳಿಂದ ಐಪಿಎಲ್ ಆಡುತ್ತಿರುವ ಮಿಚೆಲ್ ಸ್ಟಾರ್ಕ್ ಅವರಿಗೆ ಒಮ್ಮೆ ಕೂಡ 5 ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಆದ್ರೆ, ಇಂದಿನ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಹೈದರಾಬಾದ್‌ನ ಐವರು ಬ್ಯಾಟರ್‌ಗಳಿಗೆ ಪೆವಿಲಿಯನ್ ದಾರಿ ತೋರಿಸಿದ ಅವರು. ಐಪಿಎಲ್ ಇತಿಹಾಸದಲ್ಲಿ ಮೊದಲ 5 ವಿಕೆಟ್ ಗೊಂಚಲು ಪಡೆದು ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ಕುಲ್ದೀಪ್ ಯಾದವ್ 3 ವಿಕೆಟ್ ಪಡೆದರು.
ಫಾಫ್ ಅರ್ಧಶತಕ
ಸಲುಭದ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಅನುಭವಿ ಫಾಫ್ ಡು ಪ್ಲೆಸಿಸ್ ಹಾಗೂ ಜೇಕ್ ಫ್ರೆಸರ್ ಮ್ಯಾಕ್‌ಗುರ್ಕ್ ಉತ್ತಮ ಆರಂಭ ಒದಗಿಸಿದರು. ಇವರು ಮೊದಲ ವಿಕೆಟ್ 81 ರನ್‌ಗಳ ಜೊತೆಯಾಟ ಆಡುವ ಮೂಲಕ ತಂಡದ ಗೆಲುವನ್ನು ಖಚಿತಪಡಿಸಿದರು. ಫಾಫ್ 50 ರನ್ ಸಿಡಿಸಿ ಔಟ್ ಆದ್ರೆ, ಜೇಕ್ 38 ರನ್ ಸಿಡಿಸಿದರು.
ನಂತರ ಬಂದ ಅಭಿಷೇಕ್ ಪೋರೆಲ್ ಅಜೇಯ 34, ಕೆಎಲ್ ರಾಹುಲ್ ಸ್ಫೋಟಕ 15 ಹಾಗೂ ಸ್ಟಬ್ಸ್ ಅಜೇಯ 21 ರನ್ ಗಳಿಸುವ ಮೂಲಕ 16 ಓವರ್‌ನಲ್ಲಿ 166 ರನ್ ಗಳಿಸುವ ಮೂಲಕ ಇನ್ನೂ 24 ಎಸೆತಗಳು ಭಾಕಿ ಇರುವಂತೆ ಗೆಲುವಿನ ನಗೆ ಬೀರಿದರು. ಇನ್ನೂ ಹೈದರಾಬಾದ್ ಪರ ಯುವ ಸ್ಪಿನ್ನರ್ ಜೀಶಾನ್ ಅನ್ಸಾರಿ 3 ವಿಕೆಟ್ ಪಡೆದು ಮಿಂಚಿದರು. ಉಳಿದ ಯಾವುದೇ ಬೌಲರ್‌ಗಳು ವಿಕೆಟ್ ಪಡೆಯುವಲ್ಲಿ ವಿಫಲರಾದರು.
ವರದಿ: ಮೊಹಮ್ಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು