ರಾಜ್ಯ

BJP ಕೂಡ ಮುಸ್ಲಿಂ ತುಷ್ಟೀಕರಣದತ್ತ ವಾಲುತ್ತಿದೆ: ಮುತಾಲಿಕ್ ಕಿಡಿ

ಶಿರಶಿ : ಬಿಜೆಪಿ ”ಸೌಗತ್ ಎ ಮೋದಿ” ಹೆಸರಿನಲ್ಲಿ ರಂಜಾನ್ ಗಾಗಿ 32 ಲಕ್ಷ ಕಿಟ್ ಕೊಟ್ಟಿರುವುದನ್ನು ನಾನು ವಿರೋಧಿಸುತ್ತೇನೆ. ಈ ಹಿಂದೆ ಅಜ್ಮೀರ್ ದರ್ಗಾಕ್ಕೂ ಪ್ರಧಾನಿ ಮೋದಿ ಚಾದರ್ ಕಳಿಸಿದ್ದರು. ಅದನ್ನೂ ಖಂಡಿಸುತ್ತೇವೆ’ ಎಂದು ಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರೂ ತುಷ್ಟೀಕರಣದತ್ತ ವಾಲುತ್ತಿದ್ದಾರೆ ಎಂದು ಅನಿಸುತ್ತಿದೆ. ಬಿಜೆಪಿಯವರ ಯೋಜನೆ, ಯೋಚನೆ ಏನಿದೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ. ಹಿಂದುತ್ವವಾದಿಗಳನ್ನು ಕಡೆಗಣಿಸುತ್ತಿರುವುದೂ ಸಹ ಮುಂದಿನ ದಿನಗಳಲ್ಲಿ ಅಪಾಯ. ಇದನ್ನು ಬಿಜೆಪಿಯ ಕೇಂದ್ರ ಮತ್ತು ರಾಜ್ಯದವರು ಅರ್ಥ ಮಾಡಿಕೊಳ್ಳಬೇಕು. ಲೂಟಿಕೋರರು, ಭ್ರಷ್ಟರನ್ನ ಶುದ್ಧ ಬಿಜೆಪಿಯ ಒಳಗಡೆ ಬಿಟ್ಟುಕೊಳ್ಳುವುದನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸ್ವಾತಂತ್ರ ಬಂದಾಗಿನಿಂದಲೂ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಮುಸ್ಲಿಂ ತುಷ್ಟೀಕರಣ ಕಾಂಗ್ರೆಸ್ ನ ಒಂದು ಭಾಗ. ಅದು ಹೊಸದಲ್ಲ. ಆದರೆ ಗುತ್ತಿಗೆಯಲ್ಲಿ ಶೇ. 4 ರಷ್ಟು ಮೀಸಲಾತಿ ನೀಡಿರುವುದು ಸಂವಿಧಾನ ವಿರೋಧಿ. ಅದು ಕಾನೂನಾತ್ಮಕವಾಗಿ ನಿಲ್ಲುವುದಿಲ್ಲ ಎಂದು ತಿಳಿದಿದ್ದರೂ ಕಾಂಗ್ರೆಸ್ ಜಾರಿಗೆ ತಂದಿದೆ. ಇದೊಂದು ನಾಟಕೀಯ ನಡೆಯಾಗಿದೆ ಎಂದರು

.ರಾಷ್ಟ್ರದ ಹಿತ ಮೀರಿ ತುಷ್ಟೀಕರಣ ಮಾಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್ ನಲ್ಲಿರುವ ಹಿಂದೂಗಳ ಕುಟುಂಬವೂ ಉಳಿಯುವುದಿಲ್ಲ. ಭಯೋತ್ಪಾದಕರನ್ನು, ದೇಶ ದ್ರೋಹಿಗಳನ್ನು ಬೆಳೆಸಲಾಗುತ್ತಿದೆ ಎಂದು ಕಿಡಿ ಕಾರಿದರು.‘ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿರುವುದು ತಪ್ಪು. ಕೇಂದ್ರದ ನಾಯಕರು ಈ ಕುರಿತು ಮರು ಪರಿಶೀಲನೆ ಮಾಡಲಿ’ ಎಂದರು.ಹಿಂದುತ್ವದ ಕುರಿತು ನೇರ ಮಾತುಗಳನ್ನಾಡುವ ಯತ್ನಾಳ್ ಅವರಿಂದ ಪಕ್ಷಕ್ಕೆ ಮುಜುಗುರ ಆಗಿರಬಹುದು. ಆದರೆ ಅವರ ಉಚ್ಚಾಟ‌ನೆ ಹಿಂಪಡೆದು ಹಿಂದುತ್ವದ ಪರವಾಗಿ ನಿಲ್ಲುವಂತೆ ಬಿಜೆಪಿ ಮಾಡಬೇಕು’ ಎಂದರು.ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಅಶೋಕ ಹಾಸ್ಯಗಾರ, ಡಾ. ಎಲ್.ಜಿ.ಧರ್ಮಶಾಲಾ, ನವೀನ ಶೆಟ್ಟಿ, ಹೇಮಾ ಹೆಬ್ಬಾರ, ಕೆ.ವಿ.ಭಟ್ಟ ಇತರರು ಇದ್ದರು. ಇದೇ ವೇಳೆ ಲವ್ ಜಿ*ಹಾದ್ ಕುರಿತಾಗಿ ಶ್ರೀರಾಮ ಸೇನೆಯಿಂದ ಪ್ರಕಟ ಮಾಡಿರುವ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

Related Articles

Leave a Reply

Your email address will not be published. Required fields are marked *

Back to top button