ಮೂಕ ಪ್ರಾಣಿ, ಪಕ್ಷಿಗಳಿಗೆ ನೀರು ಆಹಾರ ವ್ಯವಸ್ಥೆ ಕಲ್ಪಿಸಿದ ಪ್ರಕೃತಿ ಫೌಂಡೇಶನ್

ಮಸ್ಕಿ: ತಾಲೂಕಿನ ಪ್ರಕೃತಿ ಫೌಂಡೇಷನ್ ವತಿಯಿಂದ ನಮ್ಮ ನಡೆ ಮೂಕ ಪ್ರಾಣಿ, ಪಕ್ಷಿಗಳ ರಕ್ಷಣೆ ಕಡೆ ಅಭಿಯಾನವನ್ನು ಭಾನುವಾರ ಹಮ್ಮಿಕೊಳ್ಳಲಾಯಿತು.
ಪಟ್ಟಣದ ಬಳಗಾನೂರಿನ ಬಸ್ ನಿಲ್ದಾಣದಲ್ಲಿ ಮರಗಳಿಗೆ ಮಣ್ಣಿನ ಮಡಕೆ ಕಟ್ಟಿ, ಮಡಕೆಯಲ್ಲಿ ನೀರು, ಕಾಳು, ಅಕ್ಕಿಯನ್ನು ಹಾಕುವ ಮೂಲಕ ಮೂಕ ಪ್ರಾಣಿ ಪಕ್ಷಿಗಳಿಗೆ ದಾಹ, ಹಸಿವು ನೀಗಿಸುವ ಉತ್ತಮ ಕಾರ್ಯ ಮಾಡಿದರು.
ಪ್ರಕೃತಿ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷ, ಶಿವಮೂರ್ತಿ ಗದ್ಗಿಮಠ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ 5 ನೇ ವರ್ಷದ ನಮ್ಮ ನಡೆ ಮೂಕ ಪ್ರಾಣಿ, ಪಕ್ಷಿಗಳ ರಕ್ಷಣೆ ಕಡೆ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ. ಬೇಸಿಗೆ ಕಾಲ ಬಂದಾಯ್ತು, ಬಿರು ಬೇಸಿಗೆಯಲ್ಲಿ ಪ್ರಕೃತಿಯಲ್ಲಿ ಕುಡಿಯಲು ನೀರಿನ ತೀವ್ರ ಕೊರತೆಯಿಂದ ಪ್ರಾಣಿ ಪಕ್ಷಿಗಳು ಸಂಕಷ್ಟಕ್ಕೀಡಾಗುತ್ತಿವೆ.
ಹೀಗಾಗಿ ಸಾರ್ವಜನಿಕರು ಪ್ರಾಣಿ, ಪಕ್ಷಿಗಳಿಗಾಗಿ ತಮ್ಮ ತಮ್ಮ ಮನೆಯ ಮುಂದೆ ಹಾಗೂ ಮನೆಯ ಮೇಲೆ ನೀರು, ಕಾಳು ಇತರೆ ಧಾನ್ಯ ಅಥವಾ ಆಹಾರವನ್ನು ಇರಿಸಿ ಪ್ರಾಣಿ ಪಕ್ಷಿಗಳ ದಾಹ, ಹಸಿವು ನೀಗಿಸಿ ಮಾನವೀಯತೆ ಮೆರೆಯೋಣ. ಮೂಕ ಪ್ರಾಣಿ ಪಕ್ಷಿಗಳ ಸಂರಕ್ಷಣೆ ನಮ್ಮನಿಮ್ಮೆಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹನುಮೇಶ್, ಸಂದೀಪ್, ಗಗನ್, ಹಾಗೂ ಯುವಕರು ಇದ್ದರು.
ಫೋಟೋ ಶೀರ್ಷಿಕೆ: 30ಎಂಎಸ್ ಕೆ1 ಪ್ರಕೃತಿ ಫೌಂಡೇಶನ್ ವತಿಯಿಂದ ನಮ್ಮ ನಡೆ ಮೂಕ ಪ್ರಾಣಿ, ಪಕ್ಷಿಗಳ ರಕ್ಷಣೆ ಕಡೆ ಅಭಿಯಾನದ ಮೂಲಕ ಮಸ್ಕಿಯ ಬಳಗಾನೂರು ಬಸ್ ನಿಲ್ದಾಣದ ಹತ್ತಿರ ಮರಗಳಿಗೆ ಮಡಕೆಯನ್ನು ಕಟ್ಟಿ ನೀರು, ಕಾಳು, ಧಾನ್ಯಗಳನ್ನು ಹಾಕಿ ಪ್ರಾಣಿ, ಪಕ್ಷಿಗಳಿಗೆ ದಾಹ, ಹಸಿವು ನೀಗಿಸುವ ಕೆಲಸ ಮಾಡಿದರು.
ವರದಿ: ಸಿದ್ದಯ್ಯ ಸ್ವಾಮಿ ಹೇಸರೂರು tv8kannada ಮಸ್ಕಿ