ಮಸ್ಕಿ ಯಲ್ಲಿ ನೂತನ ಪಂಚಾಂಗ ಪಠಣದೊಂದಿಗೆ ಯುಗಾದಿ ಸಂಭ್ರಮ

ಮಸ್ಕಿ: ಸೃಷ್ಟಿಯ ಮೊದಲ ದಿನ, ಹಸಿರು ಎಲೆಗಳು ಚಿಗಿರೊಡೆಯುವ ದಿನ, ಯುಗಾದಿ ಕಣ್ಣಿಗೆ ತಂಪು, ಕೋಗಿಲೆ ಗಾನ ಕಿವಿಗೆ ಇಂಪು ಯುಗಾದಿ ಹಬ್ಬ ಬಂತೆಂದರೆ ಸಾಕು ಉತ್ತರ ಕರ್ನಾಟಕ ಭಾಗದಲ್ಲಿ ಸಂಭ್ರಮವೋ ಸಂಭ್ರಮ, ಚೈತ್ರ ಮಾಸದ ಮೊದಲ ದಿನವಾದ ಇಂದು ಈ ಭಾಗದ ರೈತರು ವಿಶೇಷ ಪೂಜೆಯೊಂದಿಗೆ ಕೃಷಿ ಚಟುವಟಿಕೆಗಳನ್ನು ಶುರು ಮಾಡುತ್ತಾರೆ. ಅಲ್ಲದೇ ಮಹಿಳೆಯರು ಮನೆಯ ಮುಂದೆ ರಂಗೋಲಿಯನ್ನು ಹಾಕಿ, ಎಳೆಯ ಮಾವಿನ ತಳಿರು ತೋರಣಗಳಿಂದ ಮನೆಯನ್ನು ಅಲಂಕಾರಗೊಳಿಸುತ್ತಾರೆ. ಪುರುಷರು ಮತ್ತು ಮಕ್ಕಳು ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಮನೆಯಲ್ಲಿ ಹೂರಣದ ಹೋಳಿಗೆಗಳನ್ನು ಮಾಡಿ ವಿಶೇಷವಾಗಿ ಯುಗಾದಿ ಹಬ್ಬವನ್ನು ಆಚರಿಸುತ್ತಾರೆ.
ಹೌದು ಪಟ್ಟಣದ ದೈವದ ಕಟ್ಟೆ ಹತ್ತಿರ ಯುಗಾದಿ ಪ್ರಥಮ ದಿನಾವಾದ ಇಂದು ಸಾರ್ವಜನಿಕವಾಗಿ ನೂತನ ಪಂಚಾಂಗವನ್ನು ಓದುವ ಸಂಪ್ರದಾಯ ಮೊದಲಿನಿಂದಲೂ ಬಂದಿದೆ. ನೂತನ ಪಂಚಾಂಗ ಪಠಣವನ್ನು ಕೇಳಲು ತಾಲೂಕಿನ ಸುತ್ತಮುತ್ತಲಿನ ರೈತರು ಆಗಮಿಸಿ ತಮ್ಮ ಕೃಷಿ ಚಟುವಟಿಕೆಗಳ ಸಲುವಾಗಿ ಹಾಗೂ ವರ್ತಕರು ಸಾರ್ವಜನಿಕರು ಮಳೆ, ಬೆಳೆ, ವ್ಯಾಪಾರ, ವಜಿವಾಟು, ಸಂಕ್ಷಿಪ್ತವಾಗಿ ತಿಳಿದುಕೊಳ್ಳಲು ನೂತನ ಪಂಚಾಂಗ ಪಠಣ ಕೇಳಲು ಧಾವಿಸುತ್ತಾರೆ. ಅದೇ ರೀತಿ ಪಟ್ಟಣದ ಐತಿಹಾಸಿಕ ಮಲ್ಲಿಕಾರ್ಜುನ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಮನೆಮನೆಗಳಲ್ಲಿ ಬೇವು-ಬೆಲ್ಲ ಮಾಡಿ, ನೆರೆ-ಹೊರೆಯವರಿಗೆ ಹಂಚುವ ಮೂಲಕ ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ.
–
ಪ್ರತಿ ವರ್ಷದಂತೆ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ. ನಂತರ ದೇವಸ್ಥಾನಕ್ಕೆ ಬಂದಂತಹ ಭಕ್ತಾದಿಗಳಿಗೆ ತಮ್ಮ ಅರಕೆ ಸಲ್ಲಿಸಿ ಬೇವು-ಬೆಲ್ಲ ಸವಿದು ಮಲ್ಲಿಕಾರ್ಜುನ ದೇವರ ಕೃಪೆಗೆ ಪಾತ್ರರಾಗುತ್ತಾರೆ.
ಸಿದ್ದಯ್ಯ ಹೆಸರೂರು ಹಿರೇಮಠ, ಮಸ್ಕಿ ಮಲ್ಲಿಕಾರ್ಜುನ ದೇವಸ್ಥಾನದ ಪ್ರಧಾನ ಅರ್ಚಕರು.